ಗೋಕಾಕನಲ್ಲಿ ಸ್ಪರ್ಧಿಸುವುದಾದ್ರೆ ಮೋಸ್ಟ್ ವೆಲ್ ಕಮ್ : ಸಚಿವ ರಮೇಶ್ ಜಾರಕಿಹೊಳಿ

0

ಗೋಕಾಕ : ಪಕ್ಷ ಬಯಸಿದ್ರೆ ನಾನೇ ಗೋಕಾಕನಲ್ಲಿ ಸ್ಪರ್ಧಿಸುವೆ ಎಂಬ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗೆ ಸಚಿವ ರಮೇಶ್ ಜಾರಕಿಹೊಳಿ ತಿರುಗೇಟು ನೀಡಿದ್ದು, ಗೋಕಾಕನಲ್ಲಿ ಸ್ಪರ್ಧಿಸುವುದಾದ್ರೆ , ಮೋಸ್ಟ್ ವೆಲ್ ಕಮ್ ಎಂದಿದ್ದಾರೆ.

ಪಟ್ಟಣದಲ್ಲಿ ಇಂದು  ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವದಲ್ಲಿ ಯಾರು, ಯಾವ ಕ್ಷೇತ್ರದಲ್ಲಿ ಬೇಕಾದ್ರು ಸ್ಪರ್ಧಿಸಲು ಅವಕಾಶ ಇದೆ. ಗೋಕಾಕನಲ್ಲಿ ಸ್ಪರ್ಧಿಸುವುದಾದ್ರೆ ಅವರಿಗೆ ಮೊಸ್ಟ್ ವೆಲ್ಕಮ್ ಎಂದು ಆಹ್ವಾನ ನೀಡಿದ್ದಾರೆ.

ಸರ್ಕಾರ ಯಾಕೆ ಪತನವಾಯ್ತು ಅಂತಾ ನಿಮ್ಮ ಗಾಡ್ ಪಾದರ್ ಅವರನ್ನು ಹೋಗಿ ಕೇಳು ಎನ್ನುವ ಮೂಲಕ ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಕೇಳುವಂತೆ ತಿಳಿಸಿದ್ದಾರೆ.