ಅರಣ್ಯ ಪರಿಸರಜೀವವೈವಿಧ್ಯಅಭಿವೃದ್ಧಿಕುರಿತು ಸಭೆ ಜೀವವೈವಿಧ್ಯತಾಣರಕ್ಷಣೆಗೆಕ್ರಮ: ಅನಂತ ಹೆಗಡೆ ಆಶೀಸರ

0

ಬೆಳಗಾವಿ ಫೆ.12 :ರಾಮದುರ್ಗದ ಶಬರಿಕೊಳ್ಳ, ಗೋಕಾಕ ತಾಲೂಕಿನ ಯೋಗಿಕೊಳ್ಳ, ಗೊಡಚಿನಮಲ್ಕಿ, ಬೆಳಗಾವಿ ತಾಲ್ಲೂಕಿನಕಣಬರಗಿ ಸಿದ್ಧೇಶ್ವರ ದೇವಸ್ಥಾನ, ಕಾಕತಿ ಸಮೀಪದ ಬಸವನಕೊಳ್ಳ ಸೇರಿದಂತೆ ವಿವಿಧ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದುಕೊಂಡ ಬಳಿಕ ಇವುಗಳನ್ನು ಜೀವವೈವಿಧ್ಯ ತಾಣಗಳನ್ನಾಗಿ ಘೋಷಿಸುವ ಕುರಿತು ನಿರ್ಧರಿಸಲಾಗುವುದುಎಂದುಕರ್ನಾಟಕಜೀವವೈವಿಧ್ಯ ಮಂಡಳಿ ಅಧ್ಯಕ್ಷಅನಂತ ಹೆಗಡೆ ಆಶೀಸರ ಹೇಳಿದರು.

ಜಿಲ್ಲಾಧಿಕಾರಿಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಫೆ.12) ನಡೆದಅರಣ್ಯ ಪರಿಸರಜೀವವೈವಿಧ್ಯಅಭಿವೃದ್ಧಿಕುರಿತ ಸಭೆಯಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆರೆಗಳ ರಕ್ಷಣೆಗೆ ಅಧಿಕಾರಿಗಳಿಗೆ ಸೂಚನೆ:

ಬೆಳಗಾವಿ ಜಿಲ್ಲೆಯಲ್ಲಿಜೀವವೈವಿಧ್ಯ ವಿಶೇಷತೆ ಒಳಗೊಂಡಿರುವ ಕೆರೆ, ಗುಡ್ಡ ಮತ್ತಿತರ ಪ್ರದೇಶಗಳನ್ನು ಗುರುತಿಸಿ ಅವುಗಳ ರಕ್ಷಣೆಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸದ್ಯದಲ್ಲೇ ರೂಪುರೇμÉಗಳನ್ನು ರೂಪಿಸಲಾಗುವುದು.
ಅರಣ್ಯಭೂಮಿರಕ್ಷಣೆಗೆ ಸಂಬಂಧಿಸಿದಂತೆ ಕಂದಾಯ ಹಾಗೂ ಅರಣ್ಯಇಲಾಖೆಯ ವತಿಯಿಂದ ಸೂಕ್ತ ಯೋಜನೆರೂಪಿಸಬೇಕು ಎಂದುಅನಂತ ಹೆಗಡೆ ಆಶೀಸರ ಅವರು ಅಧಿಕಾರಿಗಳಿಗೆ ತಿಳಿಸಿದರು.

ಈ ಯೋಜನೆಯನ್ನು ಹಂತ ಹಂತವಾಗಿಅನುನಗೊಳಿಸಲು ಜಿಲ್ಲೆಯ ಕೈಗಾರಿಕೋದ್ಯಮಿಗಳು ಹಾಗೂ ಸಂಘ-ಸಂಸ್ಥೆಗಳ ನೆರವಿನೊಂದಿಗೆ ಕಾರ್ಯಪ್ರವೃತ್ತರಾಗಬಹುದುಎಂದುಅನಂತ ಹೆಗಡೆ ಆಶೀಸರ ಹೇಳಿದರು.

ಜಿಲ್ಲೆಯಲ್ಲಿಜೀವವೈವಿಧ್ಯರಕ್ಷಣೆಗೆಇನ್ನಷ್ಟುಯೋಜನೆರೂಪಿಸಬೇಕು. ಕೆರೆರಕ್ಷಣೆ, ಅಕ್ರಮಗಣಿಗಾರಿಕೆಗೆಕಡಿವಾಣ, ಪ್ಲ್ಯಾಸ್ಟಿಕ್ ಬಳಕೆ ನಿಯಂತ್ರಣಕ್ಕೆಇರುವ ಕಾಯ್ದೆ-ಕಾನೂನುಗಳನ್ನು ಇನಷ್ಟುಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಜಾಗೃತಿಗೆ ಹದಿನೈದು ದಿನಗಳ ವಿಶೇಷಅಭಿಯಾನ ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು.
ಜೀವವೈವಿಧ್ಯ ನಿರ್ವಹಣಾ ಸಮಿತಿ ಸಬಲೀಕರಣಕ್ಕೆಕ್ರಮ:

ಗ್ರಾಮ ಪಂಚಾಯತಿ ಮಟ್ಟದಲ್ಲಿಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ಸಬಲೀಕರಣಗೊಳಿಸುವ ಅಗತ್ಯವಿದೆಎಂದುಅನಂತಹೆಗಡೆ ಹೇಳಿದರು.
ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿಒಬ್ಬ ನೋಡಲ್ ಅಧಿಕಾರಿಗಳ ಅಗತ್ಯವಿದ್ದು, 15 ನೇ ಹಣಕಾಸುಯೋಜನೆಯಡಿಅನುದಾನಕೂಡಒದಗಿಸಬೇಕಿದೆ.
ವಿಶ್ವ ಪರಿಸರ ದಿನವಾದ ಮೇ 22 ರೊಳಗೆ ರಾಜ್ಯದಾದ್ಯಂತಜೀವವೈವಿಧ್ಯ ನಿರ್ವಹಣಾ ಸಮಿತಿಗಳನ್ನು ರಚಿಸಿ ಕಾರ್ಯತತ್ಪರರಾಗಬೇಕಿದೆ.

ನಗರದ ಹೋಟೆಲ್, ವಸತಿನಿಲಯ ಮತ್ತಿತರ ಕಡೆಗಳಲ್ಲಿ ತ್ಯಾಜ್ಯದಿಂದಗ್ಯಾಸ್‍ಉತ್ಪಾದನಾ ಸಣ್ಣ ಸಣ್ಣ ಘಟಕಗಳನ್ನು ನಿರ್ಮಿಸಲು ಪಾಲಿಕೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಮಿಸಲುಆದ್ಯತೆ ನೀಡಬೇಕುಎಂದು ಸಲಹೆ ನೀಡಿದರು.

ಎಸ್.ಸಿ.ಪಿ ಮತ್ತುಟಿ.ಎಸ್.ಪಿ ಅನುದಾನದಡಿ ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ನೀಡಲುಕ್ರಮ ಕೈಗೊಳ್ಳಬೇಕು ಎಂದುಅನಂತ ಹೆಗಡೆ ಆಶೀಸರ ತಿಳಿಸಿದರು.

ಜಿಲ್ಲೆಯಲ್ಲಿಅರಣ್ಯರಕ್ಷಣೆ ಹಾಗೂ ಅರಣ್ಯ ಬೆಳೆಸುವುದಕ್ಕೆ ಸಂಬಂಧಿಸಿದಂತೆ ಅರಣ್ಯ ಹಾಗೂ ಕಂದಾಯಇಲಾಖೆಯ ವತಿಯಿಂದಜೀವವೈವಿಧ್ಯ ಸಮಿತಿಗಳನ್ನು ರಚಿಸಿಕೊಂಡು ಕಾರ್ಯಪ್ರವೃತ್ತರಾಗಬೇಕುಎಂದುಜಿಲ್ಲಾಧಿಕಾರಿ ಎಂ.ಜಿ.ಹಿರೇಮಠಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬೆಳಗಾವಿ ನಗರದಲ್ಲಿರುವ ವ್ಯಾಕ್ಸಿನ್‍ಡಿಪೆÇೀಕೂಡಜೀವವೈವಿಧ್ಯತಾಣಎಂದು ಘೋಷಿಸುವ ಕುರಿತು ಪರಿಶೀಲಿಸಬಹುದು. ಆರೋಗ್ಯಇಲಾಖೆಯ ಕೆಲ ಕಚೇರಿಗಳು ಅಲ್ಲಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ಕೆಲ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಪ್ರದೇಶವನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬಹುದುಎಂದುಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕಅರಣ್ಯ) ಎಸ್.ಕೆ.ಕಲ್ಲೋಳಕರ, ಮಹಾನಗರ ಪಾಲಿಕೆಯಆಯುಕ್ತರಾದಜಗದೀಶ್‍ಕೆ.ಎಚ್., ಜಿಲ್ಲಾ ನಗರಾಭಿವೃದ್ಧಿಕೋಶದಯೋಜನಾ ನಿರ್ದೇಶಕರಾದ ವಿಜಯಕುಮಾರ್ ಹೊನಕೇರಿ, ಕೃಷಿ ಇಲಾಖೆಯ ಉಪ ನಿರ್ದೇಶಕ ಡಾ.ಎಚ್.ಡಿ.ಕೋಳೇಕರ, ಪರಿಸರಅಧಿಕಾರಿಗೋಪಾಲಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.