*ಫೋಂಡೆ ಕುಟುಂಬಕ್ಕೆ ಸಾಂತ್ವನ ಹೇಳಿದ ವಿವೇಕರಾವ ಪಾಟೀಲ*

0

 

ಸಂಬರಗಿ:- ಅನಧಿಕೃತವಾಗಿ ತೋಡಿದ ಪೈಪ್ ಲೈನ್ ಚರಂಡಿಗೆ ನುಗ್ಗಿದ ಬೈಕ್ ಅಪಘಾತದಲ್ಲಿ ಇತ್ತಿಚ್ಚೆಗೆ ನಿಧನರಾದ ಗ್ರಾಮದ ಹಿರಿಯ ಮುಖಂಡ ಪ್ರಧಾನಿ ಫೋಂಡೆ ಕುಟುಂಬಸ್ಥರಿಗೆ ವಿಧಾನ ಪರಿಷತ್ ಸದಸ್ಯರಾದ ವಿವೇಕರಾವ ಪಾಟೀಲ ರವಿವಾರ ಸಾಂತ್ವನ ಹೇಳಿದರು.

ಆಜೂರ ಗ್ರಾಮದ ಮುಖ್ಯ ರಸ್ತೆಯ ಮಧ್ಯಭಾಗದಲ್ಲಿ ಪೈಪ್ ಲೈನ್ ಚರಂಡಿ ಗುಂಡಿಗೆ ಬಿದ್ದು ತೀವ್ರ ರಕ್ತಸ್ರಾವದಿಂದ ಪ್ರಧಾನಿ ಫೋಂಡೆ ಸಾವನ್ನಪ್ಪಿದ್ದರು.

ವಿವೇಕರಾವ ಪಾಟೀಲರ ಕುಟುಂಬಕ್ಕೆ ಆಪ್ತರಾಗಿ ಒಡನಾಡಿಯಾಗಿ ಪ್ರಧಾನಿ ಫೋಂಡೆ ಕುರಿತು ನೆನಪಿನ ಬುತ್ತಿ ಬಿಚ್ಚಿ ಸಾಂತ್ವನ ಹೇಳಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಪರೋಪಕಾರಿ,ಉದಾರ ಮನೋಭಾವದ ಪ್ರಧಾನಿ ಫೋಂಡೆ ಅವರ ಅಗಲಿಕೆಗೆ ಕುಟುಂಬದ ದುಖಃದಲ್ಲಿ ಭಾಗಿಯಾಗಿಯಾಗಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸುನೀಲ್ ರಾಘವೇಂದ್ರ ಫೊಂಡೆ,ಮೆಂಡಿಗೇರಿ, ಅಣ್ಣಾಸಾಬ ಮಾನೆ,ದೀಪಕರಾವ ಪವಾರ್, ಮಾಣಿಕ

ಫೋಂಡೆ,ಸಂಜಯ ವಾವರೆ, ರಾಕೇಶ ಕಂಟೇರ, ಪ್ರಶಾಂತ ಕೋಳಿ, ಶಿವಾಜಿ ಖಾಂಡೇಕರ, ಸುನೀಲ್ ‌ಸೊಡ್ಡಿ, ಸೇರಿದಂತೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಇದ್ದರು