ಅಂಕಣ: ಬದುಕು ಬೆಳಕು “ಉತ್ಸಾಹದ ಬದುಕು ಉತ್ಸವದಂತೆ”

0

ಅಂಕಣ: ಬದುಕು ಬೆಳಕು
“ಉತ್ಸಾಹದ ಬದುಕು ಉತ್ಸವದಂತೆ”

ಒಂದು ಊರಿನಲ್ಲಿ ಒಬ್ಬ ವ್ಯಕ್ತಿ.ಒಂದು ದಿನ ವೈದ್ಯರ  ಹತ್ತಿರ ಹೋಗಿ ವೈದ್ಯರೇ ನಾನು ನನ್ನ ಬದುಕಿನಲ್ಲಿ ನೆಮ್ಮದಿಯನ್ನು ಕಳೆದುಕೊಂಡಿದ್ದೇನೆ.ಸದಾ ಬೇಸರ,ಆಲಸಿತನ, ನನ್ನನ್ನು ಬಿಟ್ಟು ಹೋಗುತ್ತಿಲ್ಲ.ಅದಕ್ಕಾಗಿ ವೈದ್ಯರಾಗಿ ತಾವು ಕೇಳಿದಷ್ಟು ಹಣ ಕೊಡುತ್ತೇನೆ.ನಾನು ಸಂತೋಷವಾಗಿರುಂತೆ ಔಷಧೋಪಚಾರ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದ. ಆತನ ಮಾತು ಕೇಳಿದ ವೈದ್ಯರು ಒಂದು ಕ್ಷಣ ಮೌನವಾಗಿ ನಿಂತು, ನೋಡಪ್ಪಾ ಹಣಕೊಟ್ಟು ಪಡಿಯುವಂತಹ ವಸ್ತುಗಳು ಹೊರಗಡೆ ಒಂದಲ್ಲ ಇನ್ನೊಂದು ಸ್ಥಳದಲ್ಲಿ ಸಿಗುತ್ತವೆ.ಅವುಗಳನ್ನು ನಾವು ಬೆಲೆ ಕಟ್ಟಿ ಹಣಕೊಟ್ಟು ಖರೀದಿಸಬಹುದು.ಆದರೆ ಕೆಲವೊಂದು ಬೇಕಾದಷ್ಟು ಹಣ ಕೊಟ್ಟರೂ ಬೇಕಾಗಿರುವ ವಸ್ತು ಸಿಗುವುದೇ ಇಲ್ಲ.ಎಂದರು ವೈದ್ಯರು.

ಅದಕ್ಕೆ ಆ ವ್ಯಕ್ತಿ ಹೇಳುತ್ತಾನೆ.ನನಗೆ ಈಗ ಸಂತೋಷದ ಅತೀ ಅವಶ್ಯಕತೆ ಇದೆ.ವೈದ್ಯರೇ, ಅದಕ್ಕಾಗಿ ವೈದ್ಯರಾಗಿ ದಾರಿ ತೋರಿಸಲೇ ಬೇಕು ಎಂದನು. ಆಗ ವೈದ್ಯರು ಹೇಳಿದರು.ನೀನು ಕೇಳುತ್ತಿರುವ ವಸ್ತು ಹೊರಗಡೆ ಸಿಗುವುದಿಲ್ಲ.ನೀನು ನಿನ್ನೊಳಗೆ ಹುಡುಕಿದರೆ ಮಾತ್ರ ಸಿಗುತ್ತದೆ.ಹುಡುಕು ಎಂದರು.
ಹೌದು ಬಂಧುಗಳೇ ನಾವು ನಮ್ಮೊಳಗೆ ಸಿಗುವಂತಹ ವಸ್ತುಗಳಿಗೆ ಹಣ ಕೊಡುವ ಅವಶ್ಯಕತೆಯೇ ಇಲ್ಲ. ಯಾವ ಆಲೋಚನೆಗಳಿಲ್ಲದೇ ಒಂದಿಷ್ಟು ಮೌನವಾಗಿ ಕುಳಿತರೆ ದೇಹ ಮತ್ತು ಮನಸ್ಸು ಎರಡೂ ಸಮಾಧಾನಗೊಂಡರೆ ನಿಧಾನವಾಗಿ ಒಟ್ಟಿಗೆ ಉಕ್ಕಿ ಬರುವುದು ಉತ್ಸಾಹ. ಮತ್ತು ಸಂತೋಷ ‌.ಉತ್ಸಾಹ ಹೇಚ್ಚಾದಂತೆಲ್ಲಾ ದೇಹ ಲವಲವಿಕೆ ಯಿಂದ ಚಟುವಟಿಕೆಗೆ ತೋಡಗುತ್ತದೆ.ಆಗ ಮನಸ್ಸು ಸಂತೋಷಗೊಳ್ಳುತ್ತದೆ.

ಪ್ರತಿನಿತ್ಯ ನಾವು ನಮ್ಮ ಜೀವನದಲ್ಲಿ ಸಂತೋಷವಾಗಿ ಇರಬೇಕಾದರೆ ನಮ್ಮಲ್ಲಿ ನಮ್ಮೊಳಗಿನಿಂದ ಮೊದಲು ಉತ್ಸಾಹ ಉಕ್ಕಿ ಬರಬೇಕು.ಆಗ ನಾವು ಕಳೆಯುವ ಪ್ರತಿಯೊಂದು ದಿನಗಳ ನಮ್ಮ ಜೀವನವು ಉತ್ಸಾಹದಿಂದ ಕೂಡಿರುತ್ತದೆ.  ಆ ಬದುಕು “ಉತ್ಸಾಹದ ಬದುಕು ಉತ್ಸವದಂತೆ”ಕಂಡು
ನಮ್ಮ ಮನಸ್ಸಿಗೆ ಮುದ , ನೆಮ್ಮದಿ, ಸಂತೋಷವನ್ನು ತಂದು ಕೊಡುತ್ತದೆ. ಶ್ರೀ ಹನುಮಂತ ಬಿ ಕುರುಬರ. ಬೆನ್ನು ಹುರಿ ಅಪಘಾತದ ದಿವ್ಯಾಂಗರು.
ಸಾ:ಬಳ್ಳಿಗೇರಿ.591212
ತಾ: ಅಥಣಿ. ಜಿಲ್ಲಾ: ಬೆಳಗಾವಿ.