ರೈತ ಹೋರಾಟದ ಮುಂದಿನ ನಡೆ ಏನು? ಮಂಗಳವಾರ ಮದ್ಯಾಹ್ನ 5 ಗಂಟೆಗೆ ಸಭೆ

0

ಚನ್ನಮ್ಮನ ಕಿತ್ತೂರು: ಮಂಗಳವಾರ ಮದ್ಯಾಹ್ನ 5 ಗಂಟೆಗೆ ಧಾರವಾಡ ತಾಲೂಕಿನ ಖಾನಾಪೂರ ಗ್ರಾಮದಲ್ಲಿ ಇರುವ ಶ್ರೀಧರಾನಂದ ಕಲ್ಯಾಣ ಮಂಟಪದಲ್ಲಿ ರೈತ ಹೋರಾಟದ ಕುರಿತು ಚಿಂತನ-ಮಂಥನ ಹಾಗೂ ರೈತ ಹೋರಾಟದ ಮುಂದಿನ ನಡೆ ಏನು? ಎಂಬುದರ ಕುರಿತು ಚರ್ಚಿಸಿ ಮುಂದಿನ ನಿರ್ಧಾರಗಳ ಕುರಿತು ಸಮಾಲೋಚನಾ ಸಭೆ ಕರೆಯಲಾಗಿದೆ.

ಸಮಾಲೋಚನಾ ಸಭೆಯಲ್ಲಿ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ ರೈತ ಮುಖಂಡರಾದ ಶಿವಾನಂದ ಹೊಳೆಹಡಗಲಿ, ಭೀಮಪ್ಪ ಖಾಸಾಯಿ, ಸಿದ್ದಣ್ಣ ಕುಂಬಾರ, ಚನ್ನಬಸಪ್ಪ ಮಸೂತಿ, ಮುದಕಪ್ಪ ಚಿನಗುಡಿ, ವಕೀಲರಾದ ನೀರಲಕೇರಿ ಹಾಗೂ ಬೈಲಹೊಂಗಲ, ಸವದತ್ತಿ, ಖಾನಾಪೂರ ತಾಲೂಕಿನ ರೈತರು ಭಾಗವಹಿಸುವರು.

ಕಾರಣ ರೈತ ಮುಖಂಡರ ಸಮಾಲೋಚನಾ ಸಭೆಗೆ ಕಿತ್ತೂರು ತಾಲೂಕಿನ ಸಮಸ್ತ ರೈತರು ಸೇರಬೇಕು ಎಂದು ಅಖಂಡ ರೈತ ಸಂಘದ ಕಿತ್ತೂರು ತಾಲೂಕಾ ಅಧ್ಯಕ್ಷ ಬೈಲಪ್ಪ ದಳವಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ