ಕಾಕತಿ ಅರಣ್ಯ ಪ್ರದೇಶ ನಗರದ ಜನತೆಗೆ ಆಮ್ಲಜನಕ ನೀಡುವ ಕೇಂದ್ರ: ಅನಂತ ಹೆಗಡೆ ಅಶೀಸರ

0

ಬೆಳಗಾವಿ ಫೆ.15  : ಕಾಕತಿ ಪ್ರದೇಶದಲ್ಲಿ ಎರಡು ಸಾವಿರ ಎಕರೆ ಅರಣ್ಯವಿದೆ. ಸುತ್ತಲಿನ ಹಳ್ಳಿಗಳ ರೈತರ ಸಹಭಾಗಿತ್ವದ ಕಾಕತಿ ಅರಣ್ಯ ಸಂರಕ್ಷಣೆ ವಿಶೇಷ ಯೋಜನೆಯನ್ನು ಜಾರಿ ಮಾಡಬೇಕು ಎಂದು ಜೀವವೈವಿಧ್ಯ ಮಂಡಳಿ ಅಧ್ಯಕ್ಷರು ಶ್ರೀ ಅನಂತ ಹೆಗಡೆ ಅಶೀಸರ ಬೆಳಗಾವಿ ಜಿಲ್ಲಾ ಸಿ.ಸಿ.ಎಫ್ ರವರಿಗೆ ಸೂಚನೆ ನೀಡಿದ್ದಾರೆ.
ಅವರು ಇತ್ತೀಚೆಗೆ ಬೆಳಗಾವಿ ಕಾಕತಿ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ನರೇಗಾ ಅರಣ್ಯ ಅಭಿವೃದ್ಧಿ ಕಾಮಗಾರಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಡಿ.ಸಿ.ಎಫ್. ಟೆರಿಟೋರಿಯಲ್ ಅಮರನಾಥ್, ಡಿ.ಸಿ.ಎಫ್. ಸಾಮಾಜಿಕ ಅರಣ್ಯ ಕೋಳಿಕರ್ ಮತ್ತು ಆರ್.ಎಫ್.ಒ ಪಾಲ್ಗೊಂಡಿದ್ದರು.
ಇಲ್ಲಿನ ಹಳ್ಳಿಗಳ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಬಂದು ನರೇಗಾ ಯೋಜನೆಯಲ್ಲಿ ಕೆಲಸ ಪಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಗ್ರಾಮೀಣ ಮಹಿಳೆಯರ ಜೊತೆ ಸಂವಾದ ನಡೆಸಿದರು.
ಕಾಕತಿ ಪ್ರದೇಶದ ಅರಣ್ಯ ಕುರ್ಚಲು ಕಾಡು ಇಲ್ಲಿರುವ ಸುಮಾರು ಐದು ಲಕ್ಷ ಗಿಡ ಮರಗಳು ಬೆಳಗಾವಿ ನಗರಕ್ಕೆ ಆಮ್ಲಜನಕ ನೀಡುವ ನೈಸರ್ಗಿಕ ತಾಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಬೆಳಗಾವಿ ಮಹಾನಗರ ಸಮಿತಿ ಸಭೆಯಲ್ಲಿ ಪಾಲ್ಗೊಂಡ ಶ್ರೀ ಅನಂತ ಹೆಗಡೆ ಅಶೀಸರ, ಜೀವವೈವಿಧ್ಯ ಮಂಡಳಿ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಬೆಳಗಾವಿ ಮಹಾನಗರ ಪಾಲಿಕೆಯ ಜೀವವೈವಿಧ್ಯ ಸಮಿತಿ ಸಭೆ ನಗರದ ಅಸಿ ತ್ಯಾಜ್ಯದಿಂದ ಬಯೋಗ್ಯಾಸ್ ತಯಾರಿ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಿತು.

ಮೇ 22 ಜಾಗತಿಕ ಜೀವವೈವಿಧ್ಯ ದಿನದಂದು ಸಸಿಸಂತೆ, ವೃಕ್ಷಾರೋಪಣಾ ಅಭಿಯಾನ ನಡೆಸಲು ಸಭೆ ನಿರ್ಣಯಿಸಿತು. ಪ್ಲಾಸ್ಟಿಕ್, ಮಾಲಿನ್ಯ ತಡೆಗೆ ವಿಶೇಷ ಕಾರ್ಯಾಚಾರಣೆ ನಡೆಸಲು ನಿರ್ಧರಿಸಲಾಯಿತು. ತಜ್ಞರನ್ನು ವಿಶೇಷ ಆಹ್ವಾನಿತರಾಗಿ ಸೇರ್ಪಡೆ ಮಾಡಲು ಜೀವವೈವಿಧ್ಯ ಸಮಿತಿ ಸಭೆ ನಿರ್ಧರಿಸಿತು. ಮಹಾನಗರದ ಸ್ಮಶಾನ ಕೆರೆ ಸುತ್ತ ಪಾಕ್ರ್ಗಳಲ್ಲಿ ಬಹು ವಾರ್ಷಿಕ ಸ್ಥಳೀಯ ಜಾತಿಯ ವೃಕ್ಷಗಳನ್ನು ನೆಡಬೇಕು ಎಂದು ತೀರ್ಮಾನ ಕೈಗೊಳ್ಳಲಾಯಿತು.
ಸ್ಮಾಟ್ರ್ಸಿಟಿ ಯೋಜನೆಯಲ್ಲಿ ಕಾಂಕ್ರೀಟಿಕರಣ ಕಡಿಮೆ ಮಾಡಬೇಕು ಎಂದು ಶ್ರೀ ಅನಂತ ಹೆಗಡೆ ಅಶೀಸರ ಸೂಚಿಸಿದರು.
ಮಹಾನಗರ ಪಾಲಿಕೆ ಕಮೀಷನರ್ ಜಗದೀಶ್ ಅವರು ಸ್ವಾಗತಿಸಿದರು.
ಕೆ.ಎಲ್.ಇ ವಿಶ್ವವಿದ್ಯಾನಿಲಯದಲ್ಲಿ ನಡೆದ ವಿಜ್ಞಾನಿಗಳು, ವೈದ್ಯರು, ಸಂಶೋಧಕರ ಸಭೆಯಲ್ಲಿ ಜೀವವೈವಿಧ್ಯ ಸಂರಕ್ಷಣೆ ಹಾಗೂ ಸಂಶೋಧನೆ ಎಂಬ ವಿಷಯ ಕುರಿತು ಶ್ರೀ ಅನಂತ ಹೆಗಡೆ ಅಶೀಸರ ಉಪನ್ಯಾಸ ಹಾಗೂ ಸಂವಾದ ನಡೆಸಿದರು. ಪಿ.ಹೆಚ್.ಡಿ ಅಧ್ಯಯನದ ಮುಖ್ಯ ಅಂಶಗಳು ಹಾಗೂ ಶಿಫಾರಸ್ಸುಗಳು ಸರ್ಕಾರಕ್ಕೆ ಲಭ್ಯವಾಗಬೇಕು. ಸುಸ್ಥಿರ ಅಭಿವೃದ್ಧಿ ಯೋಜನೆ ತಯಾರಿಸಲು ಸಂಶೋಧನೆಗಳು ಸಹಾಯ ಮಾಡಬೇಕು ಎಂದು ವಿಜ್ಞಾನಿಗಳಿಗೆ ಕರೆ ನೀಡಿದರು.