ರೈತ ಚಳುವಳಿ, ಕೃಷಿ ಕಾಯಿದೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಹೇಳಿಕೆ ಕೃಷಿ ಕಾಯಿದೆಗಳು ಅನ್ನ ತಿನ್ನುವ ಜನಗಳ ವಿರೋಧಿ: ಶಿವಾಜಿ ಕಾಗಣೆಕರ

0

 

ಬೆಳಗಾವಿ: ಸಾಮಾನ್ಯ ಜನರಿಗೆ ಒಂದು ದಿನ ಮನೆಬಿಟ್ಟು ಹೊರಗಿರಲಾಗುವುದಿಲ್ಲ, ಅಂಥದರಲ್ಲಿ ಉತ್ತರದ ಹಲವು ರಾಜ್ಯಗಳ ರೈತರು ದೆಹಲಿಯ ಗಡಿಗಳಲ್ಲಿ ಮನೆ ಮಠ ಬಿಟ್ಟು ಮಳೆ – ಚಳಿಯಲ್ಲಿ ಕುಟುಂಬ ಸಮೇತರಾಗಿ ಎಂಬತ್ತು ದಿನಗಳಿಂದ ಮುಷ್ಕರ ನಡೆಸುತ್ತಿದ್ದಾರೆ ಎಂದರೆ ಸರಕಾರ ಜಾರಿಗೆ ತರಲು ಹೊರಟಿರುವ ನೂತನ ಕೃಷಿ ಕಾಯಿದೆಗಳು ರೈತ ವಿರೋಧಿಯಾಗಿವೆ ಎಂದರ್ಥವಲ್ಲವೇ? ಎಂದು ದೇವರಾಜ್ ಅರಸು ಪ್ರಶಸ್ತಿ ಪುರಸ್ಕøತರಾದ ಸಾಮಾಜಿಕ ಹೋರಾಟಗಾರ ಶಿವಾಜಿ ಕಾಗಣೆಕರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಂಡಾಯ ಸಾಹಿತ್ಯ ಸಂಘಟನೆಯ ವಿದ್ಯಾರ್ಥಿ ಜಿಲ್ಲಾ ಘಟಕವು ರವಿವಾರ ಮಾನವ ಬಂಧುತ್ವ ವೇದಿಕೆಯ ಕೇಂದ್ರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ “ರೈತ ಚಳುವಳಿ ಮತ್ತು ಕೃಷಿ ಕಾಯಿದೆಗಳು-2020: ವಿದ್ಯಾರ್ಥಿಗಳೊಂದಿಗೆ ಸಂವಾದ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿ,

ಈ ಕಾಯಿದೆಗಳು ಜಗಕೆ ಅನ್ನ ಕೊಡುವ ರೈತರಿಗೆ ವಿರೋಧಿಯಾಗಿವೆ ಎಂದರೆ ಅನ್ನ ತಿನ್ನುವ ಎಲ್ಲ ಜನಗಳಿಗೂ ವಿರುದ್ಧವಾಗಿವೆ ಎಂದಲ್ಲವೇ? ಎಂದು ಸರಕಾರಕ್ಕೆ ಪ್ರಶ್ನೀಸಿದರು.
ಇಡೀ ದೇಶವೇ ರೈತರ ಕೃಷಿ ಉತ್ಪಾದನೆಯ ಮೇಲೆ ಅವಲಂಬಿತವಾಗಿದೆ, ಇಂಥದರಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆಂದರೆ ಅವರು ಯಾವುದೋ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರ್ಥ. ನಮ್ಮ ದೇಶಕ್ಕೆ ಸ್ವರಾಜ್ಯ ಬಂದು ಎಪ್ಪತ್ತು ವರ್ಷ ಕಳೆದು ಹೋಗಿವೆ, ನಮ್ಮನ್ನಾಳುವ ಸರ್ಕಾರಗಳು ಮೃತ ರೈತರಿಗೆ ಪರಿಹಾರದ ಚೆಕ್ ವಿತರಸಿ ಫೆÇೀಟೋ ತೆಗೆದುಕೊಳ್ಳುವುದಕ್ಕಾಗಿ ಮಾತ್ರ ಇರಬೇಕೇ ಎಂದು ಪ್ರಶ್ನಿಸಿದರು. ಸಂವಾದದಲ್ಲಿ ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ಕೃಷಿಗೆ ಸಂಬಂಧಿಸಿದ ಕಾಯಿದೆಗಳು ರಾಜ್ಯ ಸರ್ಕಾರದ ಅಧೀನಕ್ಕೆ ಒಳಪಡುತ್ತವೆ, ಆದರೆ ಕೇಂದ್ರ ಸರ್ಕಾರ ಏಕಸ್ವಾಮ್ಯವಾಗಿ ಅದನ್ನು ನಿಯಂತ್ರಿಸಲು ಹೊರಟಿದೆ, ರೈತರ ಕೃಷಿ ಭೂಮಿಯನ್ನು ಮುಂದಿನ ದಿನಗಳಲ್ಲಿ ದುಡ್ಡಿರುವ ಉದ್ದಿಮೆದಾರರು ದೋಚುವಂತೆ ಮಾಡಲು ಈ ಕಾಯಿದೆಗಳು ದುಷ್ಪರಿಣಾಮವಾಗಿ ಪರಿಣಮಿಸಲಿವೆ ಎಂದು ವಿವರಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಂಡಾಯ ಸಾಹಿತಿ ಡಾ. ಯಲ್ಲಪ್ಪ ಹಿಮ್ಮಡಿ ಮಾತನಾಡಿ ಈ ಹಿಂದೆ ರಾಜಕಾರಣ ಸಮಾಜ ಬದಲಾವಣೆಯ ವೃತ್ತಿಯಂತಾಗಿತ್ತು, ಈಗ ಅದು ಉದ್ಯಮವಾಗಿದೆ. ವೃತ್ತಿಯಲ್ಲಿ ಪಾವಿತ್ರ್ಯತೆ ಮತ್ತು ನೈತಿಕತೆ ಇದ್ದರೆ, ಉದ್ಯಮದಲ್ಲಿ ಲಾಭಕೋರತನ ಮತ್ತು ಅನೈತಿಕ ಸ್ಪರ್ಧೆ ಇರುತ್ತದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು ಕಡ್ಡಿಗಳೆಲ್ಲ ಒಟ್ಟುಗೂಡಿ ಪೆÇರಕೆಯಾದಂತೆ ಒಟ್ಟಾಗಿ ಅಸಮಾನತೆಯನ್ನು ಗುಡಿಸಿಹಾಕಲು ಒಗ್ಗಟ್ಟಾಗಬೇಕಿದೆ ಮತ್ತು ಚಳುವಳಿಯ ನೈತಿಕತೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು. ಸಂವಾದದ ಆಶಯ ನುಡಿಗಳನ್ನಾಡಿದ ಶಂಕರ ಬಾಗೇವಾಡಿ ಅವರು ಕೃಷಿ ಕಾಯಿದೆಗಳನ್ನು ತಿದ್ದುಪಡಿ ಮಾತ್ರ ಮಾಡುತ್ತಿಲ್ಲ ಖಾಸಗೀಕರಣಗೊಳಿಸಲು ಸರಳಗೊಳಿಸಲಾಗುತ್ತಿದೆ ಎಂದರು.

ಸಂವಾದದಲ್ಲಿ ನೀಲಕಂಠ ಭೂಮಣ್ಣವರ, ಸರಸ್ವತಿ ಆಲಖನೂರೆ, ನೇಮಿಚಂದ್ರಾ, ಮೆಹಬೂಬಸಾಬ್ ನತ್ತುಪಸಾರಿ, ಸುಧಾ ಕೊಟಬಾಗಿ, ಪ್ರಿಯಾಂಕಾ ಉಪ್ಪಾರ, ನಾಗರಾಜ ಕೊಡ್ಲಿ, ಸದಾಶಿವ ಗಾಣಿಗೇರ, ದೀಪಕ್ ನಾಯಿಕ, ಸುರೇಶ್ ಹಾದಿಮನಿ ಮುಂತಾದವರು ಪಾಲ್ಗೊಂಡಿದ್ದರು. ಹಿರಿಯ ನಾಟಕಕಾರ ಡಾ. ಡಿ ಎಸ್ ಚೌಗಲೆ, ಕವಿಗಳಾದ ನದೀಮ್ ಸನದಿ, ಸಂತೋಷ ನಾಯಕ, ಮಲ್ಲಿಕಜಾನ ಗದಗಿನ ಉಪಸ್ಥಿತರಿದ್ದರು. ಸುರೇಖಾ ಕೊಟ್ರೆ, ಅಶ್ವಿನಿ ಪಂಡ್ರೋಳಿ, ರೇಖಾ ಕಾಂಬಳೆ, ನಂದೇಶ ಗೊಲಬಾವಿ, ರಾಯಿಸಾಬ ನದಾಫ್ ಅವರು ರೈತಪರ ಹೋರಾಟದ ಹಾಡುಗಳನ್ನು ಹಾಡಿದರು. ವಿದ್ಯಾರ್ಥಿ ಘಟಕದ ಜಿಲ್ಲಾ ಸಂಚಾಲಕ ಮಹೇಶ್ ಸಿಂಗೆ ಸಂವಾದ ನಡೆಸಿಕೊಟ್ಟರು. ಪ್ರಾರಂಭದಲ್ಲಿ ವಿದ್ಯಾರ್ಥಿ ಘಟಕದ ಮಂಜುನಾಥ್ ಪಾಟೀಲ ಸ್ವಾಗತಿಸಿದರು. ದಿವ್ಯಾ ಕಾಂಬಳೆ ಕಾರ್ಯಕ್ರಮ ನಿರ್ವಹಿಸಿದರು, ಜಿಲ್ಲಾ ಸಂಚಾಲಕ ಡಾ. ಅಡಿವೆಪ್ಪ ಇಟಗಿ ವಂದಿಸಿದರು.