ಬಿ.ಕಾಂ ಪಠ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ” ರಾಜ್ಯಮಟ್ಟದ ಕಾರ್ಯಗಾರ.

0

ಬೆಳಗಾವಿ.ಫೆ.15: ದಿನಾಂಕ 14.02.2021 ರವಿವಾರದಂದು ಎಸ್. ಎಸ್. ಎಸ್. ಸಮಿತಿಯ, ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಮಹಾವಿದ್ಯಾಲಯಗಳ ಶಿಕ್ಷಕರ ಸಂಘ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಸ್ನಾತಕೋತ್ತರ ವಿಭಾಗದ ಸಹಯೋಗದೋದಿಗೆ “ ಬಿ.ಕಾಂ ಪಠ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ” ಎಂಬ ವಿಷಯದ ಮೇಲೆ ಒಂದು ದಿನದ ರಾಜ್ಯ ಮಟ್ಟದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪ –ಕುಲಪತಿಗಳಾದ ಪ್ರೊ. ಎಮ್ ರಾಮಚಂದ್ರಗೌಡಾ ಅಗಮಿಸಿ, “ಇಂದಿನ ವಿದ್ಯಾಥಿಗಳಿಗೆ ಪ್ರಾಯೋಗಿಕ ಶಿಕ್ಷಣ ಕೊಡುವ ಅವಶ್ಯಕತೆ ಇದೆ, ಇದರಿಂದ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯಲು ಸಹಕಾರಿಯಾಗುತ್ತದೆ ”ಎಂದು ಹೇಳಿದರು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸನ್ಮತಿ ಶಿಕ್ಷಣ ಸಹಕಾರಿ ಸಮಿತಿಯ ಅಧ್ಯಕ್ಷರಾದ ಜಗದೀಶ ಎ. ಸವದತ್ತಿ ಅವರು ವಹಿಸಿದ್ದರು. ಮಹಾವಿದ್ಯಾಲಯ ಪ್ರಾಂಶುಪಾಲರಾದ ಪ್ರೋ. ಶ್ರೀಮತಿ ನಿರ್ಮಲಾ ಆಯ್. ಗಡಾದ, ಅದ್ಯಕ್ಷರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ವ್ಯವಹಾರ ಮಹಾವಿದ್ಯಾಲಯಗಳ ಪ್ರಾದ್ಯಾಪಕರ ಸಂಘ, ಡಾ. ಸಿ. ಆರ್. ಗುಡಸಿ, ಡಾ. ಎಮ್ ಜಯಪ್ಪಾ, ಡಾ. ಎಚ್. ವಾಯ್. ಕಾಂಬಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೊದಲನೆ ಅಧಿವೇಶನದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಬಿ. ಎಮ್. ಎಸ್ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ. ಬಿ. ಮರಿಯಪ್ಪಾ ಮತ್ತು ಎರಡನೆ ಅಧಿವೇಶದ ಸಂಪನ್ಮೂಲ ವ್ಯಕ್ತಿಗಳಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೋ. ಬಿ. ಎಸ್. ನಾವಿ ಜೊತೆಗೆ ಆರ್. ಪಿ. ಡಿ. ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸಹಾಯಕ ಪ್ರಾದ್ಯಾಪಕರಾದ ಸುಧೀರ ಎಸ್. ಶಿಂದೆ ಹಾಗೂ ಮೂರನೇ ಅಧಿವೇಶನದ ಸಂಪನ್ಮೂಲ ವ್ಯಕ್ತಿಗಳಾಗಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ

ಕಾಗವಾಡದ ನಿವೃತ್ತ ಪ್ರಾಂಶುಪಾಲರಾದ ಎಸ್. ಓ. ಹಲಸಗಿ, ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ಡಾ. ಎಮ್. ಎಲ್. ಲಮಾಣಿ ಹಾಗೂ ಕೆಎಲ್‍ಇ ಎಸ. ಎಮ್. ಎಸ್. ಮಹಾವಿದ್ಯಾಲಯದ ಅಥಣಿಯ ಡಾ. ಬಿ. ಎಮ್. ಹಿರೆಮಠ ಇವರು ಅಧಿವೇಶನಗಳಲ್ಲಿ ಬಿ. ಕಾಂ. ಸಿ. ಬಿ. ಸಿ . ಎಸ್ ಪಠ್ಯಕ್ರಮದ ಕುರಿತು ಸವಿವರವಾಗಿ ಮಾಹಿತಿ ನೀಡಿದರು.ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ಡೀನ್. ಪ್ರೋ. ಎಸ್. ಬಿ. ಆಕಾಶ ಅಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್. ಎಸ್. ಎಸ್. ಸಮಿತಿಯ, ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದ

ಪ್ರಾಂಶುಪಾಲರಾದ ಪ್ರೋ. ಶ್ರೀಮತಿ ನಿರ್ಮಲಾ ಆಯ್. ಗಡಾದ ಅವರು ವಹಿಸಿದ್ದರು. ಅತಿಥಿಗಳ ಪರಿಚಯವನ್ನು. ಸಹಾಯಕ ಪ್ರಾದ್ಯಾಪಕರುಗಳಾದ ರವಿ ಎಸ್. ದಂಡಗಿ, ಪೂನಮ ಪಾಟೀಲ, ಮಹೇಶ ಪೂಜಾರಿ ಅವರು ಮಾಡಿದರು. ಸ್ವರಾಂಜಲಿ ಗುಂಪಿನವರು ಪ್ರಾರ್ಥನೆ ಹೇಳಿದರು, ಸಹಾಯಕ ಪ್ರಾದ್ಯಾಪಕರಾಗಳಾದ ನಾಗವೇಣಿ ಡಿ. ಧರೆಣ್ಣವರ, ವಿಜಯಲಕ್ಷ್ಮೀ ಆರ್. ವಾಲಿಶೆಟ್ಟಿ ಮತ್ತು ಪೂನಮ ಪಾಟೀಲ ಕಾರ್ಯಕ್ರಮ ನಿರೂಪಣೆ ಮಾಡಿದರು.

ಸಹಾಯಕ ಪ್ರಾಧ್ಯಪಕರುಗಳಾದ ಡಾ. ಸುಪ್ರಿಯಾ ಎಸ್. ಬೆಳವಿ ಮತ್ತು ವಿಜಯಲಕ್ಷ್ಮೀ ಆರ್. ವಾಲಿಶೆಟ್ಟಿ ವಂದನಾರ್ಪಣೆ ಮಾಡಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಮಹಾವಿದ್ಯಾಲಯಗಳ ಒಂದು ನೂರಕ್ಕೂ ಹೆಚ್ಚು ವಾಣಿಜ್ಯ ಸಹಾಯಕ ಪ್ರಾದ್ಯಾಪಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆರು ಜೊತೆಗೆ ಮಹಾವಿದ್ಯಾಲಯದ ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳು ಕಾರ್ಯಗಾರದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.///

ವೇಣುಗ್ರಾಮ್ ಆಸ್ಪತ್ರೆಯಲ್ಲಿ ಬಾಲಕಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ಬೆಳಗಾವಿ.ಫೆ.15: ಬೆಳಗಾವಿಯ ವೇಣುಗ್ರಾಮ ಆಸ್ಪತ್ರೆಯಲ್ಲಿ ಪಾಶ್ರ್ವವಾಯುವಿನಿಂದ ಬಳಲುತ್ತಿರುವ 1.5 ವರ್ಷದ ಬಾಲಕಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಯಿತು. ಮಗುವಿಗೆ ದೇಹದ ಎಡಭಾಗದ ಪಾಶ್ರ್ವವಾಯು ಕಾಣಿಸಿಕೊಂಡಿತು. ಮಗುವಿಗೆ ಕುಳಿತುಕೊಳ್ಳಲು ಅಥವಾ ನಿಲ್ಲಲು ಸಾಧ್ಯವಾಗಲಿಲ್ಲ. ಮಗುವಿನನ್ನು ಪರೀಕ್ಷಿಸಿದ ಶಿಶುವೈದ್ಯ ಡಾ. ಪ್ರಿಯದರ್ಶಿನಿ ಕುಲಕರ್ಣಿ, ಎಂಡಿ, ಎಫ್‍ಪಿಎಂ ಇವರು ಈ ಬಾಲಕಿಗೆ ಯಶಸ್ವಿ ಚಿಕಿತ್ಸೆ ನೀಡಿದರು. ಯಶಸ್ವಿ ಚಿಕಿತ್ಸೆಯ ನಂತರ ಮಗುವಿಗೆ ಕುಳಿತುಕೊಳ್ಳಲು, ನಿಲ್ಲಲು, ನಡೆಯಲು ಮತ್ತು ಓಡಲು ಸಾಧ್ಯವಾಗುತ್ತದೆ. ಅವರ ಚಿಕಿತ್ಸೆಗೆ ಎಂಪಿಟಿ (ನ್ಯೂರೋಫಿಸಿಯೋಥೆರಪಿಸ್ಟ್) ಡಾ. ಕರುಣಾ ಹೆರವಾಡಕರ ಸಹಾಯ ಮಾಡಿದರು. ಪಾಶ್ರ್ವವಾಯು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ಕೆಲವೊಮ್ಮೆ ಈ ಪಾಶ್ರ್ವವಾಯು ಸ್ಟ್ರೋಕ್ ಮಕ್ಕಳಲ್ಲಿಯೂ ಕಂಡುಬರುತ್ತದೆ. ಈ ಪಾಶ್ರ್ವವಾಯುವಿನ ಶಾಶ್ವತ ಹಾನಿಯನ್ನು ತಡೆಗಟ್ಟಲು ಇದನ್ನು ತ್ವರಿತವಾಗಿ ಪತ್ತೆ ಹಚ್ಚಬೇಕು ಮತ್ತು ಚಿಕಿತ್ಸೆ ನೀಡಬೇಕು ”ಎಂದು ಡಾ. ಪ್ರಿಯದರ್ಶಿನಿ ಕುಲಕರ್ಣಿ ಹೇಳಿದ್ದಾರೆ. ಡಾ. ಪ್ರಿಯದರ್ಶಿನಿ ಕುಲಕರ್ಣಿ ಅವರು ಬೆಳಗಾವಿಯ ವೇಣುಗ್ರಾಮ್ ಆಸ್ಪತ್ರೆಯಲ್ಲಿ ಮಕ್ಕಳು ಮತ್ತು ನವಜಾತ ಶಿಶುಗಳ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.///