8.17 ಕೋಟಿ ರೂ ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ .

0

 

ಮೂಡಲಗಿ : ತಾಲೂಕಿನ ರಾಜಾಪುರ ಗ್ರಾಮದಲ್ಲಿ 8.17 ಕೋಟಿ ರೂ ವೆಚ್ಚದ ಜಲಜೀವನ ಮಿಷನ್ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ .
ಜಲ ಜೀವನ ಮಿಷನ್ ಕಾಮಗಾರಿಗಾಗಿ ರಾಜಾಪೂರ, ದಂಡಾಪುರ ,ದುರದುಂಡಿ ,ತುಕ್ಕಾನಟ್ಟಿ ,ಬಡಿಗವಾಡ ಗ್ರಾಮ ಪಂಚಾಯಿತಿಗಳಿಗೆ 8.17ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು ಇದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕೆ ಮತ್ತಷ್ಟು ಅನುಕೂಲವಾಗಲಿದೆ ಎಂದು ಅರಬಾವಿ ಮತಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿ.

ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳಿ ನೀರು ಅಮೂಲ್ಯವಾದದ್ದು ರೈತರ ಕೃಷಿ ಜಮೀನುಗಳಿಗೆ ನೀರು ಹರಿಸಲು ಈಗಾಗಲೇ ಘಟಪ್ರಭಾ ಕಾಲುವೆಗಳಿಂದ ನೀರು ಹರಿಯುತ್ತಿದೆ .ದೇವರ ದಯದಿಂದ ಇದುವರೆಗೂ ಕುಡಿಯುವ ನೀರಿನ ಸಮಸ್ಯೆ ತಲೆದೋರಿಲ್ಲ .ಎಪ್ರಿಲ್-ಮೇ ತಿಂಗಳಲ್ಲಿ ಹಿಡಕಲ್ ಜಲಾಶಯದಿಂದ ಮತ್ತಷ್ಟು ನೀರನ್ನು ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು
ಈ ಸಂದರ್ಭದಲ್ಲಿ ತುಕ್ಕಾನಟ್ಟಿ ಜಿಲ್ಲಾ ಪಂಚಾಯಿತಿ ಸದಸ್ಯ ಕಸ್ತೂರಿ ಕಮತಿ, ತಾಲೂಕ್ ಪಂಚಾಯಿತಿ ಸದಸ್ಯ ಸಂಗೀತ ಎಕ್ಕುಂಡಿ ,ರಾಜ್ಯ ಕೃಷಿ ಮತ್ತು ಗ್ರಾಮಾಭಿವೃದ್ಧಿ ಬ್ಯಾಂಕ್ ನಿರ್ದೇಶಕ ರಾಜು ಬೈರುಗೋಳ, ಟಿಎಪಿಸಿಎಂಎಸ್ ಉಪಾಧ್ಯಕ್ಷ ವಿಠ್ಠಲ್ ಪಾಟೀಲ್ ,ಎಪಿಎಂಸಿ ಅಧ್ಯಕ್ಷ ಶ್ರೀಪತಿ ಗಣೇಶವಾಡಿ, ಪ್ರಭಾಸ್ ಶುಗರ್ ಮಾಜಿ ನಿರ್ದೇಶಕ ಬಸವಂತ ಕಮತಿ ,ಗ್ರಾಮ ಪಂಚಾಯತಿಅಧ್ಯಕ್ಷ ಸಿದ್ದರಾಮ ಮರಿಸಿದ್ದಪ್ಪಗೋಳ ,ಪ್ರಭಾ ಶುಗರ್ ನಿರ್ದೇಶಕರಾದ ಲಕ್ಷ್ಮಣ್ ಗಣಪಗೋಳ ,ಶಿವಲಿಂಗ ಪೂಜಾರಿ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷರು ಶಿವಮೂರ್ತಿ ಹುಕ್ಕೇರಿ , ಬಸು ಸನದಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಮರ್ದಿ, ಮಹಾದೇವ ತುಕ್ಕನಟ್ಟಿ,ಬಿಜೆಪಿ ಯುವ ಮೋರ್ಚಾ ಅರಭಾವಿ ಮಂಡಲ ಪ್ರಧಾನ ಕಾರ್ಯದರ್ಶಿ ವಿಲಾಸ್ ಗಾಡಿವಡ್ಡರ ,ಇನ್ನಿತರರು ಉಪಸ್ಥಿತರಿದ್ದರು.