ಪೊಲೀಸ್ ಭರ್ಜರಿ ಕಾರ್ಯಾಚರಣೆ

0

ಬೆಳಗಾವಿ, ಫೆ. 17- ಗೋವಾದಿಂದ ಅಕ್ರಮವಾಗಿ ಸಾಗಾಟ ನಡೆಸಿದ್ದ ಲಕ್ಷಾಂತರ ಮದ್ಯವನ್ನು ಪೊಲೀಸ್ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡು ದಿನಗಳ ಕಾರ್ಯಾಚರಣೆಯಲ್ಲಿ ಅಪಾರ ಮೌಲ್ಯದ ಅಕ್ರಮ ಸಾರಾಯಿ ಮಾರಾಟ ಬೆಳಕಿಗೆ ಬಂದಿದೆ. ಬುಧವಾರ ಕಾರ್ಯಾಚರಣೆಯಲ್ಲಿ ೭೫೦ ಬಾಟಲ್ ಗೋವಾ ಮದ್ಯ ಸಮೇತ ಆರೋಪಿಯನ್ನು ಬಂಧಿಸಲಾಗಿದೆ.

ಬಾದರವಾಡಿಯ ಬ್ರಹ್ಮಲಿಂಗ ಗಲ್ಲಿ ಲಕ್ಷ್ಮಣ (ಅಲಿಯಾಸ್) ಬಾಳು ಸಾತೇರಿ ಪಾಟೀಲ (೫೦) ಬಂಧಿತ ವ್ಯಕ್ತಿ ಆಗಿದ್ದು, , ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಗೋವಾ ರಾಜ್ಯದ ವಿವಿದ ಕಂಪನಿಯ 750 ಲೀ, 476 ಬಾಟಲಿಗಳು ಮತ್ತು 7850 ರೂ. ನಗದು 3 ಮೊಬೈಲ್‌ಗಳನ್ನು ಜಪ್ತಿ ಮಾಡಿಲಾಗಿದೆ.

ಡಿಸಿಪಿ ವಿಕ್ರಂ ಆಮಟೆ ಮಾರ್ಗದರ್ಶನಲ್ಲಿ ಎಸಿಪಿ ಗಣಪತಿ ಗುಡಾಜೀ ನೇತೃತ್ವದಲ್ಲಿ ಪಿಐ ಸುನೀಲಕುಮಾರ ನಂದೀಶ್ವರ, ಪಿಎಸ್‌ಐ ಆನಂದ ಆದಗೊಂಡ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.