ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಭರ್ಜರಿ ಜಯ ಎಲ್ಲ 8 ಮಹಾನಗರ ಪಾಲಿಕೆಗಳನ್ನೂ ತನ್ನ ತೆಕ್ಕೆಗೆ ತೆೆಗೆದುಕೊಂಡ ಕೈ

0

ಚಂಡೀಗಢ: ಪಂಜಾಬ್ ರಾಜ್ಯದ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿದೆ.

ರಾಜ್ಯದ ಏಳು ಮಹಾನಗರ ಪಾಲಿಕೆಗಳ ಫಲಿತಾಂಶ ನಿನ್ನೆಯೇ (ಬುಧವಾರ) ಪ್ರಕಟವಾಗಿತ್ತು. ಎರಡು ಮತಗಟ್ಟೆಗಳಲ್ಲಿ ಮರುಮತದಾನ ನಡೆದ ಹಿನ್ನೆಲೆಯಲ್ಲಿ ಮೊಹಾಲಿ ಮಹಾನಗರ ಪಾಲಿಕೆಯ ಮತ ಎಣಿಕೆಯನ್ನು ಇಂದಿಗೆ ಮುಂದೂಡಲಾಗಿತ್ತು. ಈಗ ಮೊಹಾಲಿ ಮಹಾನಗರ ಪಾಲಿಕೆಯಲ್ಲೂ ಜಯ ಸಾಧಿಸುವ ಮೂಲಕ ಕಾಂಗ್ರೆಸ್ ರಾಜ್ಯದ ಎಲ್ಲ 8 ಮಹಾನಗರ ಪಾಲಿಕೆಗಳನ್ನು ತನ್ನ ತೆಕ್ಕೆಗೆ ಹಾಕಿಕಕೊಂಡಿದೆ.

 

ಈ ಮುನ್ನವೂ ಕಾಂಗ್ರೆಸ್​ ಆಡಳಿತ ಇದ್ದ ಮೊಹಾಲಿ ಪಾಲಿಕೆಯ ಒಟ್ಟು 50 ವಾರ್ಡ್​ಗಳಲ್ಲಿ 37 ಕಾಂಗ್ರೆಸ್ ಪಾಲಾಗಿವೆ. ಉಳಿದ ಹದಿಮೂರು ವಾರ್ಡ್​ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆದ್ದಿದ್ದಾರೆ.

 

ಇದರೊಂದಿಗೆ ರಾಜ್ಯದಲ್ಲಿ ನಡೆದ 109 ನಗರ ಸ್ಠಳೀಯ ಸಂಸ್ಥೆಗಳ ಮತ್ತು ಎಂಟು ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿ ಕಾಂಗ್ರೆಸ್  ಜಯ ಸಾಧಿಸಿದಂತಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪಂಜಾಬ್​ನ ಬಹುತೇಕ ರೈತರು ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಚುನಾವಣೆಯಲ್ಲಿ ಬಿಜೆಪಿ ಭಾರೀ ಸೋಲು ಅನುಭವಿಸಿದೆ.