ಎಸಿಬಿ ಬಲೆಗೆ ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್

0

ಬೆಳಗಾವಿ, ಫೆ. 19- ಹೊಸ ಮೊಬೈಲ್ ಅಂಗಡಿ ತೆರೆಯಲು ಜಿ ಎಸ್ ಟಿ ನಂ ಮಂಜೂರು ಮಾಡಲು ಅರ್ಜಿದಾದರಿಂದ 2 ಸಾವಿರ ಲಂಚ ಕೇಳಿದ್ದ ಬೆಳಗಾವಿಯ ವಾಣಿಜ್ಯ ತೆರಿಗೆ ಇಲಾಖೆ ಇನ್ಸ್ ಪೆಕ್ಟರ್ ಹಣ ಸ್ವೀಕರಿಸುತ್ತಿದ್ದಾಗ ಇಂದು ಎಸ್ಬಿ ಬಲೆಗೆ ಬಿದ್ದಿದ್ದಾರೆ..

ಮೆಹಬೂಬ್ ಬಾಬುಲಾಲ್ ಸಿಪಾಯಿ ಬಂಧಿತ ಆರೋಪಿ ಆಗಿದ್ದು, 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದನು ಎಂದು ಪೊಲೀಸ್ ಮೂಲಗಳು ತಿಳಿ ಸಿವೆ..

ಕಾಕತಿ ಮೂಲದ ನದೀಮ್ ಮುಲ್ಲಾ ಎಂಬಾತರು ಜಿ ಎಸ್ ಟಿ ನೊಡನಿಗಾಗಿ ಅರ್ಜಿ ಸಲ್ಲಿಸಿದ್ದರು.. ಹಣ ಕೇಳಿದ್ದ ಬಗ್ಗೆ ಎಸಿಬಿ ದೂರು ಸಲ್ಲಿಸಿದ್ದರು. ಹಣ ಸ್ವೀಕರಿಸುತಿದ್ದಾಗ ಬಂಧನಕ್ಕೆ ಒಳಗಾಗಿದ್ದು, ಆರೋಪಿಯನ್ನು ಪೊಲೀಸರು ನ್ಯಾಯಾ ಲಯಕ್ಕೆ ಒಪ್ಪಿಸಿದ್ದಾರೆ.

ಎಸ್ಪಿ ಬಿ. ಎಸ್. ನ್ಯಾಮಗೌಡೆರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ವೇಣುಗೋಪಾಲ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಎ.  ಎಸ್. ಗುದಿಗೊಪ್ಪ, ಸುನಿಲ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.