ಪ್ರೊ. ಅನಂತನ್ ಆರ್‌ಸಿಯು ಏಳ್ಗೆಗೆ ಶ್ರಮಿಸಿದವರು

0

ಬೆಳಗಾವಿ, ಫೆ. 23- ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಂಸ್ಥಾಪಕ ಕುಲಪತಿ ಆಗಿದ್ದ ಪ್ರೊ. ಬಿ. ಆರ್.ಅನಂತನ್ ಅವರು ನೀಡಿದ ಕೊಡುಗೆ ಅಪಾರ. ಆರಂಭದ ದಿಸೆಯಲ್ಲಿ ವಿಶ್ವವಿದ್ಯಾಲಯದ ಏಳ್ಗೆಗೆ ಸತತ ಶ್ರಮಿಸಿದ್ದಾರೆ. ವಿವಿಗೆ ಅವರ ಕೊಡುಗೆ ದೊಡ್ಡದು ಎಂದು ಕುಲಪತಿ ಪ್ರೊ. ಎಂ. ರಾಮಚಂದ್ರೇಗೌಡ ಹೇಳಿದರು.

 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದವು ಆಯೋಜಿಸಿದ್ದ ಪ್ರೊ. ಬಿ. ಆರ್.ಅನಂತನ್ ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾಲಯದ ಮಾನವ ಸಂಪನ್ಮೂಲಾಭಿವೃದ್ಧಿಯಲ್ಲಿ ಅಮೋಘವಾದ ಕೊಡುಗೆಯನ್ನು ನೀಡಿರುವ ಪ್ರೊ. ಅನಂತನ ಅವರು ಹಾಕಿಕೊಟ್ಟ ಯೋಜನೆಗಳು ಇಂದು ನಮಗೆ ಆದರ್ಶಪ್ರಾಯವಾಗಿವೆ. ನೇರ ನುಡಿಯ ಸಜ್ಜನಿಕೆಯ ವ್ಯಕ್ತಿತ್ವ ಅವರದ್ದಾಗಿತ್ತು. ಅವರಿಂದು ಭೌತಿಕವಾಗಿ ನಮ್ಮೊಂದಿಲ್ಲ. ಆದರೆ ಅವರ ಆಲೋಚನೆಗಳು ವಿಶ್ವವಿದ್ಯಾಲಯದಲ್ಲಿ ಚಿರಸ್ಥಾಯಿಯಾಗಿ ಉಳಿದಿವೆ ಎಂದು ಕುಲಪತಿ ಬಣ್ಣಿಸಿದರು.

 

ವಿತಾವಿ ಕುಲಪತಿ ಪ್ರೊ. ಕರಿಸಿದ್ದಪ್ಪ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಬಸವರಾಜ ಪದ್ಮಶಾಲಿ, ಕುಲಸಚಿವರು (ಮೌಲ್ಯಮಾಪನ)ರಾದಪ್ರೊ. ಎಸ್. ಎಮ್. ಹುರಕಡ್ಲಿ, ಹಣಕಾಸು ಅಧಿಕಾರಿಗಳಾದ ಪ್ರೊ. ಡಿ. ಎನ್. ಪಾಟೀಲ, ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.

 

ಪುಣ್ಯಸ್ಮರಣೆಯ ಅಂಗವಾಗಿ ವಿಶ್ವವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಏರ್ಪಡಿಸ ಲಾಗಿತ್ತು.