ಸಮ್ಮುಖದಲ್ಲಿ ತೆರೆದ ಕೊಳವೆ ಬಾವಿ ಮುಚ್ಚಿಸಿ ಎಷ್ಟೋ ಮಕ್ಕಳ ಪ್ರಾಣ ಕಾಪಾಡಿದ ಕೀರ್ತಿ ಇಓ ಹಾಗೂ ಪಿಡಿಒ ತಲಾಟಿ ಗಳಿಗೆ ಸಲ್ಲುತ್ತದೆ.

0

ಹುಕ್ಕೇರಿ: ವರದಿ ತೆರೆದ ಕೊಳವೆ ಬಾವಿ ಮುಚ್ಚಿಸಿದ ಹುಕ್ಕೇರಿ EO ಭೀಮಪ್ಪ ಲಾಳೆ ಹಾಗೂ ಕೊಟಬಾಗಿ ಪಿಡಿಒ ನಿರಂಜನ ಕುರಬೆಟ್ ಹಾಗೂ ಸುಲ್ತಾನಪುರ ಪಿಡಿಒ ಮಹದೇವ್ ಜಿನರಾಳಿ ಮದಿಹಳ್ಳಿಪಿಡಿಒ ರಾಜು ಡಾಂಗೆ ಸಮ್ಮುಖದಲ್ಲಿ ತೆರೆದ ಕೊಳವೆ ಬಾವಿ ಮುಚ್ಚಿಸಿ ಎಷ್ಟೋ ಮಕ್ಕಳ ಪ್ರಾಣ ಕಾಪಾಡಿದ ಕೀರ್ತಿ ಇಓ ಹಾಗೂ ಪಿಡಿಒ ತಲಾಟಿ ಗಳಿಗೆ ಸಲ್ಲುತ್ತದೆ.

ಹೌದು ಹುಕ್ಕೇರಿ ತಾಲೂಕಿನ ಸ್ಥಳೀಯ ಕೊಟಬಾಗಿ ಶಿರಗಾವಿ ಅವರಗೋಳ ಗ್ರಾಮದ ತೊಟಗಳಲ್ಲಿ ತೆರೆದ ಕೊಳವೆ ಬಾವಿಗಳು ರಾಜಾರೋಷವಾಗಿ ರಾರಾಜಿಸುತ್ತಿದ್ದು ಕಂಡುಬಂದಿದ್ದು.ಅದು ಶಾಲಾ ಮಕ್ಕಳನ್ನು ಯಾವ ಸಂದಭ೯ದಲ್ಲಿ ಬಲಿತೆಗೆದುಕೊಳ್ಳುತದೆಯೋ ಎಂಬ ಭಯದ ವಾತಾವರಣ ನಿಮಾ೯ಣವಾಗಿತ್ತು. ಎಂದು ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದರು.

ತೆರೆದ ಅನುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಿಸುವ ಕ್ರಮಗಳನ್ನ ಹುಕ್ಕೇರಿ ಇಓ ಭೀಮಪ್ಪ ಲಾಳೆ ಇವರಿಗೆ ಮಾಹಿತಿ ನೀಡಿದಾಗ ಹಲೋ ಸರ್ ಇಲ್ಲಿ ತೆರೆದ ಕೊಳವೆ ಬಾವಿಗಳು ರಾಜಾರೋಷವಾಗಿ ರಾರಾಜಿಸುತ್ತಿದ್ದು ನಮ್ಮ ಪುಟಾಣಿ ಮಕ್ಕಳು ಶಾಲೆಗೆ ಹೋಗುವಾಗ ಆಟ ಆಡುವಾಗ ಅದರ ಸಮೀಪವೇ ಹೋಗುತ್ತಿದ್ದಾರೆ ಹಾಗಾಗಿ ತಾವು ದಯಾಳುಗಳು ಉನ್ನತ ಮಟ್ಟದ ಅಧಿಕಾರಿಗಳು ಇದನ್ನು ಪರಿಶೀಲಿಸಿ ಬೇಗ ಮುಚ್ಚುವ ಕ್ರಮವನ್ನು ಜರಗಿಸಲು ಫೋನ್ ಮಾಡಿದ ಕೆಲವೇ ಗಂಟೆಗಳಲ್ಲಿ ಪಿಡಿಓ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸುವ ಕೆಲಸ ಮಾಡಿದ್ದಾರೆ.

ಇನ್ನು ಗ್ರಾಮದ ತೋಟಗಳಲ್ಲಿ 3 ಕೊಳವೆಬಾವಿಗಳನ್ನು ಹೊಲದ ಮಾಲೀಕರಿಂದ ಮುಚ್ಚಿಸಿ ಹೊಲದ ಮಾಲೀಕರಿಗೆ ಸೂಕ್ತ ಕಾನೂನಿನ ಅರಿವನ್ನು ಮೂಡಿಸಿದ್ದಾರೆ. ತಾತ್ಕಾಲಿಕವಾಗಿ ಮುಚ್ಚುವುದು ಸೂಕ್ತವಲ್ಲ ಪೂರ್ಣ ಬಂದ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದರ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ತೆರೆದ ಕೊಳವೆ ಬಾವಿಗಳನ್ನು ಮುಚ್ಚಿಸಿ ಹುಕ್ಕೇರಿ ಕಾರ್ಯನಿರ್ವಾಹಕ ಅಧಿಕಾರಿಗಳು ಜನಮೆಚ್ಚುಗೆ ಕೆಲಸ ಮಾಡಿದ್ದಾರೆ. ಸ್ಥಳೀಯರು ಹೌದು ಇದು ತೆರೆದ ಕೊಳವೆ ಬಾವಿಗಳು ನಮ್ಮ ಪುಟಾಣಿ ಮಕ್ಕಳು ಕೂಡ ಇಲ್ಲೇ ಆಟವಾಡುತ್ತಿರುತ್ತಾರೆ

ಹಾಗಾಗಿ ಶಾಲೆಗೆ ಹೋಗುವಾಗ ಅದರ ಸಮೀಪವೇ ಹಾದು ಹೋಗಬೇಕಾಗಿತ್ತು. ಮುಂದೆ ಆಗುವ ಅಪಾಯಗಳನ್ನು ತಡೆದಿರುವ ಹುಕ್ಕೇರಿ ಇಓ ಇವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಕೊಟಬಾಗಿ ಗ್ರಾಮದ ಪಿಡಿಓ ನಿರಂಜನ ಕುರುಬೆಟ್ ಇವರಿಗೂ ಕೂಡ ಹಾಗೂ ಶಾನುಲ್ ನದಾಫ್ ಇವರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ವರದಿ ದಿನಪತ್ರಿಕೆಯ ಇಂಪ್ಯಾಕ್ಟ್ ವರದಿ. ಸರಿಪಡಿಸಿದ ಹುಕ್ಕೇರಿ ಅಧಿಕಾರಿಗಳಿಗೆ ಧನ್ಯವಾದಗಳು.