ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು ಪಿ ಎಸ್‌ ಐ ಬಿ.ಸಿ.ಮಗದುಮ್ ಹೇಳಿದರು.

0

ಜಮಖಂಡಿ: ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಕಾನೂನು ನಿಯಮ ಪಾಲಿಸಬೇಕು ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿರಬೇಕು ಹಾಗೂ ಅಗತ್ಯ ಸಂದರ್ಭಗಳಿಗಾಗಿ ಹೊಸದಾಗಿ ಬಂದಿರುವ ಕರೆ ಸಂಖ್ಯೆ 112 ಹೊಂದಿರುವ ವಾಹನವನ್ನು ಬಳಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕೆಂದು ಸಾವಳಗಿ ಪಿಎಸ್‌ಐ ಬಿ.ಸಿ.ಮಗದುಮ್ ಹೇಳಿದರು.

ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಬೈಕ್‌ ಜಾಗೃತಿ ಜಾಥಾ ನಡೆಸಿದ ನಂತರ ಮಾತನಾಡಿದರು. ಅನೇಕ ಅಪಘಾತಗಳು ಮಾನವ ತಪ್ಪಗಳಿಂದಲೇ ಆಗುತ್ತಿವೆ. ಸಾರ್ವಜನಿಕರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವ ಮೂಲಕ ತಮ್ಮನ್ನು ಅವಲಂಬಿಸಿರುವ ಕುಟುಂಬವನ್ನು ಬೀದಿಪಾಲು ಮಾಡುವುದನ್ನು ತಪ್ಪಿಸಿ ಹಾಗೂ ನಿಮ್ಮ ಸುರಕ್ಷತೆಯ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದಾಗಬೇಕು ಎಂದರು.

ಸಂಚಾರ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು, ವಾಹನ ಚಾಲಕರು ಹಾಗೂ ಮಾಲಕರು ತಮ್ಮ ವಾಹನಗಳಿಗೆ ಸಂಬಂಧಪಟ್ಟ ದಾಖಲೆಗಳಾದ ವಾಹನದ ಆರ್.ಸಿ, ವಿಮೆ ದಾಖಲೆ, ಎಮಿಷನ್ ಪ್ರಮಾಣ ಪತ್ರ ದಾಖಲೆಗಳನ್ನು ಕಡ್ಡಾಯವಾಗಿ ನಿಮ್ಮ ವಾಹನದಲ್ಲಿಡಬೇಕೆಂದು ಈ ಮೂಲಕ ಮನವಿ ಮಾಡಿಕೊಂಡರು.

ಅಪಘಾತ, ತುರ್ತುಸ್ಥಿತಿ ಮತ್ತು ಅಹಿತಕರ ಘಟನೆಗಳು ನಡೆಯುವ ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಇಲಾಖೆಯಿಂದ ಹೊಸದಾಗಿ ಬಂದಿರುವ ತುರ್ತು ವಾಹನ (112)ಕ್ಕೆ ಕರೆ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪಿಎಸೈ ಪಿ.ಬಿ.ಪೂಜಾರಿ, ಎಎಸೈ ಎಸ್.ಎಸ್.ಬೀಳಗಿ ಹಾಗೂ ಸಂಬಂಧಿಗಳಾದ ರವಿ ಬಸನ್ನವರ, ಎಮ್.ಸಿ. ಕೂಡಗಿ, ರವಿ ದೊಂಗನ್ನವರ, ಮಂಜುನಾಥ ಕಾರಜೋಳ, ಜೆ.ಡಿ.ಲಮಾಣಿ, ಎಸ್.ಎಸ್.ಹಳ್ಯಾಲ್. ಪಿ.ಎಸ್.ಮಾಳಿ. ಬಿ.ಎಸ್.ಮಾಳಿ, ಧರೆಪ್ಪ ಕುಂಬಾರ, ರಾಕೇಶ ಭೊಜಪ್ಪಗೋಳ ಹಾಗೂ ಹೊಸರು ಅವರು ಉಪಸ್ಥಿತರಿದ್ದರು.