ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇಂದು ಮಾಧ್ಯಮ ಮಾಡುತ್ತಿರುವುದು ಶ್ಲಾಘನೀಯ: ಶ್ರೀ ಮಹೇಶ ಟೆಂಗಿನಕಾಯಿ

0

 

ಬೆಳಗಾವಿ: ಸರ್ಕಾರದ ಸಾಧನೆಗಳು, ಜನಪರ ಯೋಜನೆಗಳು ಜನಸಾಮಾನ್ಯರಿಗೆ ತಲುಪಲು ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಇಂದು ಮಾಧ್ಯಮ ಮಾಡುತ್ತಿರುವುದು ಶ್ಲಾಘನೀಯ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ ಟೆಂಗಿನಕಾಯಿ ಹೇಳಿದರು.

ಸೋಮವಾರ ನಗರದ ಗೋಮಟೇಶ ಸಭಾಭವನದಲ್ಲಿ ಬೆಳಗಾವಿ ವಿಭಾಗದ ಮಾಧ್ಯಮ ಸಂಚಾಲಕರ ಒಂದು ದಿನದ “ಮಾಧ್ಯಮ ಮಂಥನ” ಕಾರ್ಯಾಗಾರದಲ್ಲಿ ಮಾತನಾಡಿ, ಮಾಧ್ಯಮ ಪ್ರಜಾಪ್ರಭುತ್ವದಲ್ಲಿ ನಾಲ್ಕನೇಯ ಆಧಾರ ಸ್ಥಂಬವಾಗಿದೆ. ಶಾಸಕಾಂಗ ಜನಪರ ಕಾಯ್ದೆಗಳನ್ನು ರೂಪಿಸಿದರೆ ಕಾರ್ಯಾಂಗ ಅವುಗಳನ್ನು ಅನುಷ್ಠಾನಕ್ಕೆ ತರುತ್ತದೆ. ತಪ್ಪಿತಸ್ತರನ್ನು ಸರಿದಾರಿಗೆ ತರಲು ನ್ಯಾಯಾಂಗ ಕಾರ್ಯನಿರ್ವಹಿಸಿದರೆ ಈ ಮೂರು ಅಂಗಗಳಿಗೆ ಜೋಡಣೆಯ ಕೊಂಡಿಯಾಗಿ ಕಾರ್ಯನಿರ್ವಹಿಸುವುದೇ ಮಾಧ್ಯಮವಾಗಿದೆ. ಇಂದಿನ ದಿನಮಾನಗಳಲ್ಲಿ ರಾಜಕೀಯ ಪಕ್ಷಕ್ಕೆ ಮಾಧ್ಯಮ ಅತ್ಯಂತ ಅವಶ್ಯಕವಾಗಿದೆ ಎಂದರು.

 

ಜಿಲ್ಲಾ ಉಸ್ತುವಾರಿಗಳು ರಾಜ್ಯದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಬ್ಬ ಸಾಮಾನ್ಯ ಚಹಾ ಮಾರುವ ವ್ಯಕ್ತಿ ಪ್ರಧಾನ ಮಂತ್ರಿಯಾಗಲು ಅವರು ಮಾಡಿದ ಸತ್ಕಾರ್ಯಗಳನ್ನು ದೇಶಾಧ್ಯಂತ ಮನೆ ಮನೆಗೆ ತಿಳಿಸುವ ಕಾರ್ಯ ಮಾಧ್ಯಮದಿಂದಾಗಿದೆ. ಒಂದು ಸುಭದ್ರ ಸರ್ಕಾರ ರಚನೆಯಾಗಲು ಹಾಗೂ ಯಾವುದೇ ಅಹಿತರ ನಿರ್ಧಾರಗಳು ತಕ್ಷಣವಾಗಿ ಗೊತ್ತಾಗುವುದು ಮಾಧ್ಯಮದಿಂದ. ಇಂದು ಬಿಜೆಪಿ ಪಕ್ಷದಲ್ಲಿ ಮಂಡಲ ಹಂತದಿದ ಜ್ಞಾನಿಗಳು ಸುಶಿಕ್ಷಿತರು ಪಕ್ಷದ ಮಾಧ್ಯಮ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ತಿಳುವಳಿಕೆ ಅತೀ ಅವಶ್ಯ ಅಂತಹ ಜ್ಞಾನವನ್ನು ಇಂತಹ ಕಾರ್ಯಾಗಾರದ ಮೂಲಕ ಪಡೆದು ಸರ್ಕಾರದ ಹಾಗೂ ಪಕ್ಷದ ತತ್ವಸಿದ್ಧಾಂತಗಳನ್ನು ಭಿತ್ತರಿಸುವ ಕಾರ್ಯ ತಮ್ಮ ಮೇಲಿದೆ ಎಂದರು.

 

ಆಹಾರ ಮತ್ತು ನಾಗರಿಕ ಸೇವಾ ಸಚಿವ ಉಮೇಶ ಕತ್ತಿ ಮಾತನಾಡಿ, ಇಂದು ಬಿಜೆಪಿ ಪಕ್ಷ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದಾದ ಪಕ್ಷವಾಗಿದ್ದು ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಆಡಳಿತಕ್ಕೆ ಬರಬೇಕಾದರೆ ವಿರೋಧಿಗಳು ಮಾಡಿರುವ ಜನವಿರೋಧಿ ಕಾರ್ಯ ಒಂದು ಕಡೆಯಾದರೆ ಬಿಜೆಪಿ ಪಕ್ಷ ರಾಷ್ಟಾçಭಿಮಾನದೊಂದಿಗೆ ಅತ್ಯುತ್ತಮ ಆಡಳಿತ ನೀಡುತ್ತಿರವು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದ ಶ್ರೇಯಸ್ಸು ಮಾಧ್ಯಮಕ್ಕಿದೆ. ಇಂತಹ ಗುರುತರವಾದ ಜವಾಬ್ದಾರಿ ಹೊತ್ತಿರುವ ಬಾಗಲಕೋಟ, ವಿಜಯಪುರ, ಬೆಳಗಾವಿ ಗ್ರಾಮಾಂತರ, ಚಿಕ್ಕೋಡಿ ಹಾಗೂ ಬೆಳಗಾವಿ ಮಹಾನಗರದ ಬಿಜೆಪಿ ಮಾಧ್ಯಮದ ಸಂಚಾಲಕರು ತಮಗೆ ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಪಕ್ಷವನ್ನು ಬೆಳೆಸುವಲ್ಲಿ ಸಹಕಾರಿಯಾಗಿ ಎಂದರು.

 

ಬೆಳಗಾವಿ ಗ್ರಾಮಾಂತರ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಒಂದು ದಿನದ ಕಾರ್ಯಾಗಾರದಲ್ಲಿ ಸಂಜೆಯವರೆಗೆ ವಿವಿಧ ವಿಷಯಗಳ ಮೇಲೆ ಪರಿಣಿತರಿಂದ ಗೋಷ್ಠಿಗಳು ನಡೆದವು, ವೇದಿಕೆಯ ಮೇಲೆ ರಾಜ್ಯ ಬಿಜೆಪಿ ವಕ್ತಾರ ಎಂ.ಬಿ.ಜಿರಲಿ, ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಬೆಳಗಾವಿ ವಿಭಾಗ ಮಾಧ್ಯಮ ಪ್ರಭಾರಿ ಸಿದ್ದು ಮೋಗಲಿಶೆಟ್ಟರ, ಚಿಕ್ಕೋಡಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೆರ್ಲಿ, ಉತ್ತರದ ಶಾಸಕ ಅನಿಲ ಬೆನಕೆ, ದಕ್ಷಿಣ ಶಾಸಕ ಅಭಯ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೋಹಿತೆ, ಸುಭಾಷ ಪಾಟೀಲ, ದಾದಾಗೌಡ ಬಿರಾದಾರ, ಗಿರೀಶ ದೋಂಗಡೆ, ಮುರಘೇಂದ್ರ ಪಾಟೀಲ ಇದ್ದರು.

 

ಕಾರ್ಯಾಗಾರದಲ್ಲಿ ಬೆಳಗಾವಿ ಗ್ರಾಮಾಂತರ ವಕ್ತಾರ ಸಂಜಯ ಕಂಚಿ, ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಹನುಮಂತ ಕೊಂಗಾಲಿ, ಡಾ. ನಾಗನಗೌಡ ದೊಡಗೌಡ, ಶಶಿ ಬಾಡಕರ, ಮೃಣಾಲಿ ದೇಶಪಾಂಡೆ, ಪ್ರವೀಣ ಕೊಪ್ಪದ ಹಾಗೂ ೫ ಜಿಲ್ಲೆಯ ಬಿಜೆಪಿ ಮಾಧ್ಯಮ ವಕ್ತಾರ ಮತ್ತು ಸಂಚಾಲಕರು ಪಾಲ್ಗೊಂಡಿದ್ದರು.