ರೂ. 53.30 ಲಕ್ಷ ಮೌಲ್ಯದ ಗಾಂಜಾ ವಶ

0

ವಿಜಯಪುರ, ಮಾ. 3-: ಅಬಕಾರಿ ಇಲಾಖೆ ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ರತ್ನಾಪುರ ಗ್ರಾಮದ ಹೊಲವೊಂದರಲ್ಲಿ ಬೆಳೆಯಲಾಗಿದ್ದ 315 ಗಾಂಜಾ ಗಿಡಗಳು ಹಾಗೂ 3 ಕೆ.ಜಿ.ಒಣ ಗಾಂಜಾ ಸೊಪ್ಪು ಸೇರಿದಂತೆ ಒಟ್ಟು ರೂ. 53.30 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಅಬಕಾರಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ ವೇಳೆ ಹೊಲದ ಮಾಲೀಕ ರಾಮು ಗಗನಮಾಲಿ ಪರಾರಿಯಾಗಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಬಕಾರಿ ಪಿಎಸ್‌ಐ ಪ್ರಕಾಶ ಜಾಧವ್‌, ಅಬಕಾರಿ ಕಾನ್‌ಸ್ಟೆಬಲ್‌ಗಳಾದ ಆಶ್ರೀತ್‌, ಈರಗೊಂಡ ಹಟ್ಟಿ, ಭೀಮಣ್ಣ ಕುಂಬಾರ, ವಾಹನ ಚಾಲಕ ಪರಶುರಾಮ ತೆಲಗಿ ಮತ್ತು ಪ್ರಜ್ವಲ್‌ ಭಜಂತ್ರಿ ದಾಳಿಯಲ್ಲಿ ಪಾಲ್ಗೊಂಡಿದ್ದರು.