ಭ್ರಷ್ಟಾಚಾರ ಆರೋಪ: ನೈರುತ್ಯ ರೈಲ್ವೆ ಎಂಜಿನೀಯರ್ ಇತರರ ವಿರುದ್ಧ ಕೇಸ್ ದಾಖಲಿಸಿದ ಸಿಬಿಐ

0

ಬೆಂಗಳೂರು, ಮಾ. 2- ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಹಿರಿಯ ವಿಭಾಗೀಯ ನಿವೃತ್ತ ಎಂಜಿನೀಯರ್ ನೀರಜ್ ಬಾಪ್ನಾ, ಗುತ್ತಿಗೆದಾರ ಅಶ್ವತ್ಥ ನಾರಾಯಣ ಮತ್ತು ಕೆಲವು ಅಪರಿಚಿತ ವ್ಯಕ್ತಿಗಳ ವಿರುದ್ಧ ಸಿಬಿಐ ಕೇಸ್ ದಾಖಲಿಸಿದೆ.

ಸಿಬಿಐ ಎಸ್‌ಡಬ್ಲ್ಯುಆರ್ ಅಧಿಕಾರಿ ಮತ್ತು ಇತರರ ವಿರುದ್ಧ ಭ್ರಷ್ಟಾಚಾರ ತಡೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಹಳೆಯ ವಸ್ತುಗಳನ್ನು ಬಳಸಿ ಕೊಂಡು ಅಂಡರ್ ಬ್ರಿಡ್ಜ್ ರಸ್ತೆ ನಿರ್ಮಿಸಿದ್ದಕ್ಕಾಗಿ ಗುತ್ತಿಗೆದಾರನಿಗೆ ನಕಲಿ ಪಾವತಿ ಮಾಡಿರುವುದಾಗಿ ಆರೋಪಿಸಿದೆ.

ಇದಕ್ಕಾಗಿ ಯಾವುದೇ ಹೊಸ ರಚನಾತ್ಮಕ ಉಕ್ಕನ್ನು ಖರೀದಿಸದಿದ್ದರೂ, ಗುತ್ತಿಗೆದಾರನಿಗೆ ಪಾವತಿಗಳನ್ನು ಮಾಡ ಲಾಗಿದೆ ಎಂದು ಸಿಬಿಐ ತಿಳಿಸಿದೆ.

ಗುತ್ತಿಗೆದಾರರಿಂದ ತನ್ನ ಸಂಬಂಧಿಕರು / ಸ್ನೇಹಿತರ ಖಾತೆಗಳಿಗೆ ಹಣ ವರ್ಗಾಯಿಸಿದ ಅಕ್ರಮ ಹಣ ಪಡೆದಿದ್ದಾನೆ” ಎಂದು ಸಿಬಿಐ ತಿಳಿಸಿದೆ.