ರಮೇಶ ಜಾರಕಿಹೊಳಿ ತಲೆದಂಡ ಖಚಿತ ಎನ್ನುತ್ತಿವೆ ಬಿಜೆಪಿ ವಲಯ..!

0

ಬೆಂಗಳೂರು: ಸಚಿವ ರಮೇಶ್‌ ಜಾರಕಿಹೊಳಿ ಸೆಕ್ಸ್‌ ಸಿಡಿಗೆ ಸಂಬಂಧಪಟ್ಟಂತೆ ಸಿಟ್ಟಾಗಿರುವ ಬಿಜೆಪಿ ಹೈಕಮಾಂಡ್‌ ಸೂಚನೆ ನೀಡಲಾಗಿದೆ ಎನ್ನಲಾಗಿದೆ.

ಸೆಕ್ಸ್ ಸಿಡಿ ಬಿಡುಗಡೆ ಆಗುತ್ತಿದ್ದಂತೆಯೇ ಬಿಜೆಪಿ ಪಡಸಾಲೆಯಲ್ಲಿ ರಮೇಶ ಜಾರಕಿಹೊಳಿ ಅವರ ತಲೆದಂಡ ಖಚಿತ ಎಂಬ ಮಾತುಗಳು ಗುಸುಗುಸು ಚರ್ಚೆಗೆ ಕಾರಣವಾಗಿವೆ.

ಪಂಚರಾಜ್ಯದ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಬಿಜೆಪಿಗೆ ಮುಜುಗರ ಉಂಟಾಗುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ. ಈ ಕೂಡಲೇ ರಮೇಶ್‌ ಜಾರಕಿಹೊಳಿ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಂತ ಈಗಾಗಲೇ ಸಿಎಂ ಬಿಎಸ್‌ವೈ ಸೇರಿ ರಾಜ್ಯ ನಾಯಕರುಗಳಿಗೆ ಬಿಜೆಪಿಯಿಂದ ಆದೇಶ ಬಂದಿದ್ದು, ಇಂದು  ಬೆಳಗ್ಗೆ ರಮೇಶ ಜಾರಕಿಹೊಳಿಯವರು ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಕೆಲವೇ ದಿನದಲ್ಲಿ ವಿಧಾನಸಭಾ ಬಜೆಟ್ ಅಧಿವೇಶನ ನಡೆಯಲಿದ್ದು, ಸದನದಲ್ಲಿ ವಿರೋಧ ಪಕ್ಷಗಳು ಸಹಜವಾಗಿ ಅಡಳಿತ ಪಕ್ಷದ ಮೇಲೆ ಮುಗಿ ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಸದನದಲ್ಲಿ ರಾಜೀನಾಮೆ ಕೂಗು ಕೇಳಿ ಬರಲಿದೆ ಎನ್ನುವುದನ್ನು ಕೂಡ ಬಿಜೆಪಿ ಗಮನಿಸಿ, ಹೈಕಮಾಂಡ್‌ ಈ ಕೂಡಲೇ ಸಚಿವ ರಮೇಶ ಜಾರಕಿಹೊಳಿಯವರಿಂದ ರಾಜೀನಾಮೆ ಪಡೆದುಕೊಳ್ಳಬೇಕು ಅಂತ ಸೂಚನೆ ನೀಡಿದೆ ಎನ್ನಲಾಗಿದೆ.