ನಾನು ತಪ್ಪು ಮಾಡಿಲ್ಲ: ರಮೇಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ

0

ನನ್ನ ವಿರುದ್ಧ ಬಂದಿರುವ ಗಂಭೀರ ಆರೋಪವಿದು. ನಾನು ಅತ್ಯಂತ ಸೂಕ್ಷ್ಮ ಮನಸ್ಥಿತಿಯ ಮನುಷ್ಯ ಇದನ್ನು ಕೇಳಿ ನಾನು ಶಾಕ್ ಸ್ಥಿತಿಯಲ್ಲಿದ್ದೇನೆ. ತಪ್ಪು ಮಾಡಿದ್ರೆ ನನ್ನನ್ನು ಗಲ್ಲಿಗೇರಿಸಿ.  ಸಿಎಂ ಜೊತೆ    ನಾನು ಮಾತನಾಡಿದ್ದೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಖುದ್ದು ಮುಖ್ಯಮಂತ್ರಿಯವರ ಭೇಟಿ ಮಾಡಿ ದೆಹಲಿಗೆ ತೆರಳಲಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮೊದಲ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ ಈ ಸುದ್ದಿ ಕೇಳಿ ಶಾಕ್ ನಲ್ಲಿದ್ದೇನೆ ಪ್ರಕರಣದ ಬಗ್ಗೆ ಸೂಕ್ತ ತನಿಖೆಯಾಗಬೇಕು. ವಿಡಿಯೋನಲ್ಲಿ ಎಡಿಟ್ ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.

ದಿನೇಶ್ ಕಲ್ಲಹಳ್ಳಿ ಯಾರು ಎಂಬುದು ನನಗೆ ಗೊತ್ತಿಲ್ಲ ಇದು ಅತ್ಯಂತ ಗಂಭೀರ ಆರೋಪ . ನಾನು ದೈವದ ಮೇಲೆ ನಂಬಿಕೆ ಇಟ್ಟವನು. ರಾಜಿನಾಮೆ ಕೊಡುವ ಬಗ್ಗೆ ಯೋಚನೆಯೇ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಾನು ಧಾರ್ಮಿಕತೆಯಲ್ಲಿ ನಂಬಿಕೆ ಇಟ್ಟವನು. ನಾನೇನೂ ತಪ್ಪು ಮಾಡಿಲ್ಲ. ನನ್ನ ತಪ್ಪಿದ್ದರೆ ಗಲ್ಲಿಗೇರಿಸಲಿ.ಬದುಕಿನಲ್ಲಿ ನಾನು ಯಾವತ್ತೂ ಹೊಲಸು ಕೆಲಸ ಮಾಡಿಲ್ಲ. ಘಟನೆಯ ಬಗ್ಗೆ ತಿಳಿದಾಗ ನನಗೆ ಆಘಾತವಾಯಿತು. ಅದಕ್ಕಾಗಿ ಬೆಂಗಳೂರಿಗೆ ಬಂದಿದ್ದೇನೆ. ಘಟನೆ ಬಗ್ಗೆ ತನಿಖೆಯಾಗಲಿ – ರಮೇಶ ಜಾರಕಿಹೊಳಿ