ಸಿಡಿ ಪ್ರಕರಣ: 100 ಕೋಟಿ ರೂ. ಮಾನನಷ್ಟ ಮೊಕದ್ದಮೆಗೆ ಚಿಂತನೆ – ಬಾಲಚಂದ್ರ ಜಾರಕಿಹೊಳಿ

0

ಯಡಿಯೂರಪ್ಪ ನಿವಾಸಕ್ಕೆ ಧಾವಿಸಿರುವ ಬಾಲಚಂದ್ರ

 ಬೆಂಗಳೂರು – ರಾಜ್ಯದಲ್ಲಿ ಭಾರಿ ಸುದ್ದಿ ಮಾಡಿರುವ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಇದೇ ವೇಳೆ ಮಾಜಿ ಸಚಿವ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಯಡಿಯೂರಪ್ಪ ನಿವಾಸಕ್ಕೆ ಧಾವಿಸಿದ್ದಾರೆ. ಯಡಿಯೂರಪ್ಪ ಜೊತೆಗೆ ಚರ್ಚಿಸಲಿರುವ ಬಾಲಚಂದ್ರ, ಇದೊಂದು ಫೇಕ್ ವಿಡೀಯೋ ಎಂದಿದ್ದಾರೆ.

ಇಂತಹ ಫೇಕ್ ವೀಡಿಯೋ ಮಾಡುತ್ತ ಹೋದರೆ ಅಂಸೆಂಬ್ಲಿಯೇ ಖಾಲಿಯಾಗುತ್ತೆ. ಈ ಬಗ್ಗೆ ತನಿಖೆಯಾಗಲಿ. ಇದರಲ್ಲಿ ಯಾವುದೇ ಸಂತ್ರಸ್ತರು ಕಂಪ್ಲೇಂಟ್ ಕೊಟ್ಟಿಲ್ಲ. ಹಾಗಾಗಿ ರಮೇಶ್ ಜಾರಕಿಹೊಳಿ ರಾಜಿನಾಮೆ ನೀಡುವ ಪ್ರಶ್ನೆಯೇ ಇಲ್ಲ. 100 ಕೋಟಿ ರೂ. ಮಾನನಷ್ಟ ಮೊಕದ್ಧಮೆ ಹೂಡುವ ಬಗ್ಗೆ ಚರ್ಚಿಸಲಾಗುವುದು ಎಂದು ಬಾಲಚಂದ್ರ ತಿಳಿಸಿದ್ದಾರೆ.

ರಮೇಶ್ ಜಾರಕಿಹೊಳಿ ತಪ್ಪು ಮಾಡಿದ್ದರೆ ರಾಜಿನಾಮೆ ಕೊಡ್ಡು ಮನೆಗೆ ಹೋಗಲಿ. ಸಚಿವಸಂಪುಟದ ಎಲ್ಲ ಸಚಿವರೂ ಸೇರಿ ಈ ಪ್ರಕರಣದ ಕುರಿತು ಚರ್ಚಿಸಲಾಗುವುದು. ತನಿಖೆ ನಡೆಯಲಿ. ಸುಳ್ಳು ಮೊಕದ್ದಮೆಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಾಲಚಂದ್ರ ತಿಳಿಸಿದ್ದಾರೆ.