ಪಾಲಕರು ಒಮ್ಮತದಿಂದ ಹೊಸ ಎಸ್ಡಿಎಂಸಿ ರಚನೆ

0

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯರಗಟ್ಟಿಯಲ್ಲಿ ದಿನಾಂಕ: 2/3 /2021ರಂದು ಮಂಗಳವಾರ ಮಧ್ಯಾಹ್ನ ಹೊಸ ಎಸ್ಡಿಎಂಸಿ ರಚನೆ ಮಾಡಲು ಪಾಲಕರ ಸಭೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ ಮಚ್ಚೇಂದ್ರ ಗುಬಚೆರವರ ಪರವಾಗಿ ಪಂಚಾಯಿತಿ ಸೆಕ್ರೆಟರಿ ಆದ ಶಶಿಧರ ರಾಥೋಡ್ ಸರ್ ಅವರು ಹಾಗೂ ಯರಗಟ್ಟಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಮತ್ತು ಜಮಖಂಡಿ ಬಿಆರ್ಸಿ ಸಮನ್ವಯ ಅಧಿಕಾರಿಗಳಾದ ಶ್ರೀ ವಂದಾಲ ಸರ್ ಅವರು, ಬಿಆರ್ಪಿ ಗಳಾಗಿ ಬಂದ ಶ್ರೀ ಅವಟಿ ಸರ್, ಶ್ರೀ ಮುದ್ನುರ್ ಸರ್ ಮತ್ತು ಶ್ರೀ ಯಾದವಾಡ ಸರ್ ಅದೇ ರೀತಿ ಚಿಮ್ಮಡ ಹೆಣ್ಣುಮಕ್ಕಳ ಶಾಲೆಯ ಮುಖ್ಯಗುರುಗಳಾದ ಶ್ರೀ ಆರ್ ಎಸ್ ರೋಣದ ಮುಖ್ಯಗುರುಗಳು ಹಾಗೂ ರಬಕವಿ ವಲಯ ಸಂಪನ್ಮೂಲ ಅಧಿಕಾರಿಗಳಾದ ಶ್ರೀ ಮೋಮಿನ್ ಗುರುಗಳು ಹಾಗೂ ಶಾಲೆಯ ಮುಖ್ಯಗುರುಗಳಾದ ಶ್ರೀ ನದಾಫ್ ಗುರುಗಳು ಭಾಗವಹಿಸಿದ್ದರು.

ಏಳನೇ ವರ್ಗದ ವಿದ್ಯಾರ್ಥಿನಿಯರ ಪ್ರಾರ್ಥನೆಯಿಂದ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ಶ್ರೀ ಬಿಬಿ ಲೋಕಾಪುರ್ ಇವರು ಎಲ್ಲರನ್ನೂ ಸ್ವಾಗತಿಸಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ರೋಣದ ಗುರುಗಳು ಎಸ್ಡಿಎಂಸಿ ರಚನಾ ಪ್ರಕ್ರಿಯೆಯನ್ನು ಪಾಲಕರಿಗೆ ವಿವರವಾಗಿ ತಿಳಿಸಿಕೊಟ್ಟರು. ಅದೇ ರೀತಿ ಎಲ್ಲ ಪಾಲಕರು ಒಮ್ಮತದಿಂದ ಹೊಸ ಎಸ್ಡಿಎಂಸಿ ರಚನೆಗೆ ಬೇಕಾದ 18 ಸದಸ್ಯರನ್ನು ಆಯ್ಕೆ ಮಾಡಿಕೊಟ್ಟರು.

ಕೊನೆಗೆ ಆಯ್ಕೆಗೊಂಡ 18 ಸದಸ್ಯರ ಪೈಕಿ ಶ್ರೀ ಪುಂಡಲಿಕ್ ಸಿದ್ದಪ್ಪ ಸೊರಗಾಂವಿ ಇವರನ್ನು ಎಸ್ಡಿಎಂಸಿ ಅಧ್ಯಕ್ಷರೆಂದು ಹಾಗೂ ಶ್ರೀಮತಿ ರೂಪಾ ಗೋಪಾಲ ಸನದಿ ಇವರನ್ನು ಎಸ್ಡಿಎಂಸಿ ಉಪಾಧ್ಯಕ್ಷರೆಂದು ಆಯ್ಕೆ ಮಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಶ್ರೀ ವಂದಾಲ್ ಗುರುಗಳು ಎಲ್ಲ ಎಸ್ಡಿಎಂಸಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮುಖಂಡರಾದ ಶ್ರೀ ಶ್ರೀಕಾಂತ ಗೂಳನ್ನವರ ಇವರು ಎಲ್ಲರನ್ನೂ ಹಸಿರು ಶಾಲು ಹೊದಿಸುವ ಮೂಲಕ ಸನ್ಮಾನಿಸಿದರು. ಶ್ರೀ ಎಮ್.ಎ. ಸೋರಗಾವಿ ಶಿಕ್ಷಕರು ವಂದಿಸಿದರು. ಮರುದಿನ ಬುಧವಾರ ಹೊಸದಾಗಿ ಆಯ್ಕೆಗೊಂಡ 18 ಸದಸ್ಯರಿಗೆ ಶಾಲೆಯಲ್ಲಿ ಒಂದು ದಿನದ ಎಸ್ಡಿಎಂಸಿ ತರಬೇತಿಯನ್ನು ಹಮ್ಮಿಕೊಳ್ಳಲಾಯಿತು. ತರಬೇತಿಯ ನೋಡಲ್ ಅಧಿಕಾರಿಗಳಾಗಿ ಶ್ರೀ ಮೋಮಿನ್ ಗುರುಗಳು ಮತ್ತು ಸಂಪನ್ಮೂಲ ಅಧಿಕಾರಿಗಳಾಗಿ ಶ್ರೀ ಎಂ. ಎಸ್. ಗಡೆನವರ ಸರ್ ಮತ್ತು ಶ್ರೀ ಬಿ.ಬಿ. ಲೋಕಾಪುರ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಎಸ್ಡಿಎಂಸಿ ಸದಸ್ಯರಿಗೆ ತಮ್ಮ ಕರ್ತವ್ಯಗಳು ಹಾಗೂ ಹಕ್ಕುಗಳು ಹಾಗೂ ಶಾಲೆ ಮತ್ತು ಸಮುದಾಯದ ಬಾಂಧವ್ಯದ ಬಗ್ಗೆ ತಿಳಿಸಿಕೊಡಲಾಯಿತು.

ಕಾರ್ಯಕ್ರಮದ ಕೊನೆಗೆ ಎಲ್ಲ ಎಸ್ಡಿಎಂಸಿ ಅವರ ಪರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಶಾಲೆಗೆ 65 ಸಾವಿರ ರೂಪಾಯಿಗಳನ್ನು ದೇಣಿಗೆ ನೀಡಿದರು. ಕಾರ್ಯಕ್ರಮದಲ್ಲಿ ಪಂಚಾಯತಿಯ ಎಲ್ಲ ಸದಸ್ಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ಎಂ.ವೈ. ತಿಮ್ಮನಾಯ್ಕರ ಸರ್, ಶ್ರೀಮತಿ ಎಸ್ ಡಿ ಬೆಳ್ಳೆನ್ನವರ, ಶ್ರೀಮತಿ ಎಸ್ ಎಚ್ ರಾಮದುರ್ಗ, ಶ್ರೀಮತಿ ಎಸ್ ಎಸ್ ಮಗದುಮ್, ಶ್ರೀಮತಿ ಎಲ್ ಡಿ ಬಾಣಕಾರ ಭಾಗವಹಿಸಿದ್ದರು. ಸಹ ಶಿಕ್ಷಕರಾದ ಶ್ರೀ ಜೆ.ಎಚ್. ಲಾಡಖಾನ್ ಶಿಕ್ಷಕರು ಎಲ್ಲರನ್ನೂ ವಂದಿಸಿದರು.