ಮಾ.20 ರ ವರೆಗೆ ವಿದ್ಯಾಸಿರಿ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ

0

ಮಾ.20 ರ ವರೆಗೆ ವಿದ್ಯಾಸಿರಿ ವಿದ್ಯಾರ್ಥಿವೇತನ ಅರ್ಜಿ ಅವಧಿ ವಿಸ್ತರಣೆ

ಬೆಳಗಾವಿ, 04 : ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ/ ಅರೆಅಲೆಮಾರಿ ವಿದ್ಯಾರ್ಥಿಗಳಿಂದ, 2020-21ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ “ಮೆಟ್ರಿಕ್-ನಂತರದ ವಿದ್ಯಾರ್ಥಿವೇತನ”, “ಶುಲ್ಕ ವಿನಾಯಿತಿ”, “ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ”, ಮತ್ತು “ನರ್ಸಿಂಗ್ ವಿದ್ಯಾರ್ಥಿಗಳಿಗೆ ಶಿಷ್ಯವೇತನ”, ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು.

ಮಾರ್ಚ್ 05 ರಂದು ಅರ್ಜಿ ಸಲ್ಲಿಸುವ ಅಂತಿಮ ದಿನಾಂಕವನ್ನು ನಿಗದಿಪಡಿಸಲಾಗಿತ್ತು, ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸುವಂತೆ ಪೋಷಕರು/ವಿದ್ಯಾರ್ಥಿಗಳು/ಸಂಸ್ಥೆಗಳು ಮನವಿ ಸಲ್ಲಿಸಿದ್ದು, ಪ್ರಯುಕ್ತ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮಾರ್ಚ್ 20 ರವರೆಗೆ ವಿಸ್ತರಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ : 8050770005 / 8050770004, ಇಮೇಲ್:      ,bcwd.scholarship@karnataka.gov.in, ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಸಹಾಯವಾಣಿ ಸಂಖ್ಯೆ: 080-35254757, ಇಮೇಲ್:  postmetrichelpdesk@karnataka.gov.in    ಅನ್ನು ಸಂಪರ್ಕಿಸಬಹುದು.////

ಮಾ. 6 ಕ್ಕೆ ಬಾರ್ ಬೆಂಡಿಂಗ್ ಮತ್ತು ಪೇಟಿಂಗ್ ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆ

ಬೆಳಗಾವಿ, 04 : ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಬಾರ್ ಬೆಂಡಿಂಗ ಮತ್ತು ಪೆಂಟೀಂಗ್ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸುವ ಕಾರ್ಯಕ್ರಮವನ್ನು ಮಾ. 6 ರಂದು ಬೆಳಿಗ್ಗೆ 11.30 ಕ್ಕೆ ಮಜಗಾಂವ್ ರಸ್ತೆ, ಉದ್ಯಬಾಗ್‍ನ ಐ.ಟಿ.ಐ ಆವರಣದಲ್ಲಿರುವ ಕಾರ್ಮಿಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ್ ಅಧ್ಯಕ್ಷತೆ ವಹಿಸಿ ಉದ್ಘಾಟನೆ ಮಾಡಲಿದ್ದಾರೆ. ಬೆಳಗಾವಿ ಪ್ರಾದೇಶಿಕದ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅ. ಶಿಂದಿಹಟ್ಟಿ ಹಾಗೂ ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಮೊಹಮ್ಮದ ಬ. ಅನ್ಸಾರಿ ಅವರು ಮುಖ್ಯ ಅಥಿತಿಗಳಾಗಿ ಆಗಮಿಸಿಲಿದ್ದಾರೆ ಎಂದು ಉಪವಿಭಾಗ-1&2 ರ ಕಾರ್ಮಿಕ ಅಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ವಿದ್ಯುತ ವ್ಯತ್ಯಯ

ಬೆಳಗಾವಿ, 04 : ಹುವಿಸಕಂನಿ ವತಿಯಿಂದ 33 ಕೆ.ವ್ಹಿ ಮಾರ್ಗಗಳ ಬಲವರ್ಧನೆ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಖಾನಾಪೂರ ಉಪಕೇಂದ್ರದಿಂದ ಮಾ. 06 ರಂದು ಬೆಳಿಗ್ಗೆ 10.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ ಸರಬರಾಜು ಆಗುವ ಲೈಲಾ ಶುಗರ ಕಾರ್ಖಾನೆ, ದೇವಲತ್ತಿ, ಬಿದರಭಾವಿ, ಭಂಡಾರಗಾಳಿ, ಗರ್ಲಗುಂಜಿ, ತೋಪಿನಕಟ್ಟಿ, ಬೋರಗಾಂವ, ನಿಡಗಲ, ದೊಡ್ಡಹೊಸೂರ, ಸಣ್ಣಹೊಸೂರ, ಕರಂಬಳ, ಜಳಗಾ, ಕುಪ್ಪಟಗಿರಿ, ಲೋಕೋಳ್ಳಿ, ಲಕ್ಕೇಬೈಲ, ಯಡೋಗಾ, ಬಳೋಗಾ, ಜೈನಕೊಪ್ಪ, ಗಾಂಧಿನಗರ, ಹಲಕರ್ಣಿ, ಕೋರ್ಟ ಪ್ರದೇಶ, ಕೈಗಾರಿಕಾ ಪ್ರದೇಶ, ಬಾಚೋಳ್ಳಿ, ಕೌಂದಲ, ಝಾಡನಾವಗಾ, ಲಾಲವಾಡಿ, ಹೆಬ್ಬಾಳ, ನಂದಗಡ, ಕಸಬಾ ನಂದಗಡ, ಕಾರಲಗಾ, ಶಿವೊಳ್ಳಿ ಹಾಗೂ ಚಾಪಗಾಂವ ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯನಿರ್ವಾಹಕ ಇಂಜಿನೀಯರ ಹುವಿಸಕಂನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಕನ್ನಡ ಸಾಹಿತ್ಯ ಪರಿಷತ್‍ನ ವಿವಿಧ ಪರೀಕ್ಷೆಗಳ ಫಲಿತಾಂಶ ಪ್ರಕಟ

ಬೆಳಗಾವಿ, 04 : ಕನ್ನಡ ಸಾಹಿತ್ಯ ಪರಿಷತ್ತು 2020-21 ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ, ಕಾವ್ಯ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ಫಲಕದಲ್ಲಿ, ಹಾಗೂ  www.kasapa.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಅಂಕಪಟ್ಟಿ ಹಾಗೂ ಪ್ರಮಾಣ ಪತ್ರವನ್ನು ಶಿಘ್ರದಲ್ಲಿಯೇ ಎಲ್ಲ ಅಭ್ಯರ್ಥಿಗಳಿಗೆ ಕಳುಹಿಸಿ ಕೊಡಲಾಗುವದು ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿಸಲ್ಲಿಸುವವರು ಅಂಕಪಟ್ಟಿಗಳು ಕಳುಹಿಸಿದ ದಿನಾಂಕದಿಂದ ಒಂದು ತಿಂಗಳೊಳಗಾಗಿ ಅಜಿಗಳನ್ನು ಸಲ್ಲಿಸಬೇಕು ಹೆಚ್ಚಿನ ಮಾಹಿತಿಗಾಗಿ ಗೌರವ ಕಾರ್ಯದರ್ಶಿ ಕನ್ನಡ ಸಾಹಿತ್ಯ ಪರಿಷತ್ತು, 2662584 ಸಂಪರ್ಕಿಸಲು ಗೌರವ ಕಾರ್ಯದರ್ಶಿ ಡಾ. ಪದ್ಮರಾಜ ದಂಡಾವತಿ ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.////