ವಿಧಾನ ಸಭೆಯಲ್ಲಿ ಶರ್ಟ್ ಬಿಚ್ಚಿ ಸಂಗಮೇಶ್ ಅಗೌರವ: ಸ್ಪೀಕರ್ ಕಿಡಿ…. ಒಂದು ವಾರ ಸದನದಿಂದ ಸಸ್ಪೆಂಡ್….

0

 

ವಿಧಾನ ಸಭೆಯಲ್ಲಿ ಶರ್ಟ್ ಬಿಚ್ಚಿ ಸಂಗಮೇಶ್ ಅಗೌರವ: ಸ್ಪೀಕರ್ ಕಿಡಿ…. ಒಂದು ವಾರ ಸದನದಿಂದ ಸಸ್ಪೆಂಡ್….

ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದು ಮತ್ತೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಸಿಎಂ ಬಿಎಸ್ ವೈ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿದ್ದಾರೆ.

ಬೆಂಗಳೂರು, ಮಾ. 4- ರಾಜ್ಯ ವಿಧಾನ ಮಂಡಲ ಅಧಿವೇಶನ ಇಂದು ಮತ್ತೊಂದು ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಸಿಎಂ ಬಿಎಸ್ ವೈ ವಿರುದ್ಧ ಪ್ರತಿಭಟನೆ ಮಾಡುವ ವೇಳೆ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರು ಸದನದಲ್ಲಿ ಅಂಗಿ ಬಿಚ್ಚಿದ್ದು, ಇದನ್ನು ಕಂಡ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಿಡಿಕಾರಿದರು.

ವಿಧಾನಸಭೆಯಲ್ಲಿ ಒಂದು ದೇಶ ಒಂದು ಚುನಾವಣೆ ಕುರಿತಾಗಿ ಚರ್ಚೆ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿ ಭಟನೆ ನಡೆಸುತ್ತಿದ್ದರು. ಈ ವೇಳೆ ಭದ್ರಾವತಿ ಶಾಸಕ ಸಂಗಮೇಶ್, ಸಿಎಂ ಬಿಎಸ್ ವೈ ವಿರುದ್ದ ವೈಯಕ್ತಿಕ ವಿಚಾರಗಳ ಬಗ್ಗೆ ಆರೋಪ ಮಾಡಿ ದರು. ಪ್ರತಿಭಟನೆ ಮಾಡುವ ಭರದಲ್ಲಿ ಸಂಗಮೇಶ್ ಶರ್ಟ್ ತೆಗೆದರು.

ಸಂಗಮೇಶ್ವರ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮೊದಲಿಗೆ ಕಲಾಪ ವನ್ನು ಮುಂದೂಡಿದ್ದರು. ಮತ್ತೆ ಸದನ ಸೇರುತ್ತಿದ್ದಂತೆ, ಸಂಗಮೇಶ್ವರ್ ಅವರು ಅಗೌರವದಿಂದ ನಡೆದುಕೊಂಡಿದ್ದರಿಂದ ಅವರ ವಿರುದ್ಧ ಪ್ರಸ್ತಾವನೆ ಮಂಡಿಸಲಾಯಿತು.

ಧ್ವನಿ ಮತದ ಮೂಲಕ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ಕಾಗೇರಿ ಅವರು, ‘ಸಂಗಮೇಶ್ವರ್ ಅಸಭ್ಯತೆ ಮತ್ತು ಅಗೌರವದಿಂದ ನಡೆದು ಕೊಂಡಿ ರುವುದರಿಂದ ಒಂದು ವಾರಗಳ ಕಾಲ ಸದನದಿಂದ ಹೊರ ನಡೆಯುತ್ತಾರೆ ಎಂದು ಪ್ರಕಟಿಸಿದರು.

ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಿಯಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಚ್‌ 12ರ ವರೆಗೂ ಸಂಗಮೇಶ್ವರ್ ಅವರು ಸದನಕ್ಕೆ ಹಾಜರಾಗುವುದರಿಂದ ತಡೆಯಲಾಗಿದೆ