ಎಂಇಎಸ್ ರ್ಯಾಲಿಗೆ ಬರ್ತಾರಂತೆ ಕೊಲ್ಹಾಪುರ ಶಿವಸೈನಿಕರು..!

0

ಮಹಾನಗರ ಪಾಲಿಕೆ ಆವರಣದಲ್ಲಿ ಭಗವಾ ಧ್ವಜ ಹಾರಿಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ಮಾರ್ಚ್ 8ರಂದು ಎಂಇಎಸ್ ನಡೆಸುವ ಮೆರವಣಿಗೆಯಲ್ಲಿ ಕೊಲ್ಹಾಪುರ ಶಿವಸೇನೆಯ ನೂರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕೊಲ್ಹಾಪುರ ಜಿಲ್ಲಾ ಶಿವಸೇನೆಯ ಅಧ್ಯಕ್ಷ ವಿಜಯ ದೇವನೆ ತಿಳಿಸಿದರು.

ಮಾಧ್ಯಮಗಳಿಗೆ ಗುರುವಾರ ಕೊಲ್ಹಾಪುರ ಜಿಲ್ಲಾ ಶಿವಸೇನೆಯ ಅಧ್ಯಕ್ಷ ವಿಜಯ ದೇವನೆ ಮಾತನಾಡಿ, ಮಹಾನಗರ ಪಾಲಿಕೆ ಆವರಣದಲ್ಲಿ ಭಗವಾ ಧ್ವಜ ಹಾರಿಸಬೇಕೆಂದು ಆಗ್ರಹಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮಾರ್ಚ್ 8ರಂದು ಮೆರವಣಿಗೆ ನಡೆಸಲಿದೆ. ಈ ಮೆರವಣಿಗೆಯಲ್ಲಿ ಕೊಲ್ಹಾಪುರ ಶಿವಸೇನೆಯ ನೂರಾರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದು, ಹಳದಿ, ಕೆಂಪು ಧ್ವಜ ತೆರವುಗೊಳಿಸಿ ಮೊದಲಿನಂತೆ ಭಗವಾ ಧ್ವಜ ಹಾರಿಸಲಿದ್ದಾರೆ. ಬೆಳಗಾವಿ ಜಿಲ್ಲಾಡಳಿತ, ಪೊಲೀಸರು ನಮಗೆ ಅನುಮತಿ ನೀಡಲಿ, ಬಿಡಲಿ ಲೆಕ್ಕಿಸದೇ ಶಿವಸೇನೆ ಕಾರ್ಯಕರ್ತರು ಭಗವಾ ಧ್ವಜ ಹಾರಿಸಲಿದ್ದಾರೆ ಎಂದರು.

ಒಟ್ಟಿನಲ್ಲಿ ಸರಕಾರದ ಪರವಾನಗಿ ನೀಡದಿದ್ದರೂ ಭಗವಾ ಧ್ವಜ ಹಾರಿಸಲಾಗುವುದು ಎಂದು ಕೊಲ್ಹಾಪುರ ಜಿಲ್ಲಾ ಶಿವಸೇನೆಯ ಅಧ್ಯಕ್ಷ ವಿಜಯ ದೇವನೆ ಹೇಳಿಕೆ ವಿವಾದಕ್ಕೆ ಎಡೆಮಾಡಿದೆ. ಕನ್ನಡ ಪರ ಸಂಘಟನೆಗಳಿಗೆ ಇನ್ನಷ್ಟು ಪ್ರಚೋದನೆ ನೀಡಿದೆ.