ಜನತೆಗೆ ಆಯುಷ್ಯಮಾನ ಭಾರತ-ಆರೋಗ್ಯ ಕರ್ನಾಟಕ ಕಾರ್ಡ. ಅಭಿಯಾನ

0

ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕಾರಾದ ಶ್ರೀ ಅಭಯ ಪಾಟೀಲ ರವರು ಕ್ಷೇತ್ರದ  ಜನತೆಗೆ ಆಯುಷ್ಯಮಾನ ಭಾರತ-ಆರೋಗ್ಯ ಕರ್ನಾಟಕ ಕಾರ್ಡ ಮಾಡಿಕೊಡುವ ಉದ್ದೇಶದಿಂದ ಸುಮಾರು ಒಂದು  ವರ್ಷದ ಹಿಂದಯೇ 17 ಕಡೆಗಳಲ್ಲಿ ಕ್ಯಾಂಪ ಮಾಡಿ, ಸದರಿ ಕ್ಯಾಂಪಗಳಿಗೆ  ಅವಶ್ಯವಿರುವ ಕಂಪ್ಯೂಟರ್, ಇಂಟರನೇಟ್, ಪೀಠೋಪಕರಣ, ಸಾರಿಗೆ ವ್ಯವಸ್ಥೆ, ಆಪರೇಟರುಗಳಿಗೆ  ಉಪಹಾರ, ಊಟದ ವ್ಯವಸ್ಥೆ ಹಾಗೂ ಮುಂತಾದ ಸೌಲಭ್ಯಗಳನ್ನು ಸ್ವಂತ ಖರ್ಚಿನಲ್ಲಿ ನೀಡುವ‌ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದರು. ಸದರಿ ಅಭಿಯಾನದಲ್ಲಿ ಆಯಾಭಾಗದ  ಸುಮಾರು 97 ಸಾವಿರಕ್ಕೂ ಹೆಚ್ಚು  ಜನರು ಇದರ ಸದುಪಯೋಗವನ್ನು ಪಡೆದುಕೊಂಡು ಕಾರ್ಡಗಳನ್ನು ಮಾಡಿಕೊಂಡಿದ್ದರು.

ಸದರಿ ಆಯುಷ್ಯಮಾನ ಭಾರತ-ಆರೋಗ್ಯ ಕರ್ನಾಟಕ ಕಾರ್ಡಗಳ ವಿತರಣೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಮೊದಲನೆ ಹಂತವಾಗಿ ಮಾನ್ಯ ಶಾಸಕರಾದ ಶ್ರೀ ಅಭಯ ಪಾಟೀಲ ರವರು ಶ್ರೀ ದೇವಾಂಗ ಮಂಗಲ ಕಾರ್ಯಾಲಯ, ಬಸವೇಶ್ವರ ವೃತ್ತ, ಖಾಸಭಾಗ, ಬೆಳಗಾವಿ ಇಲ್ಲಿ ಹಾಗೂ ಶ್ರೀ ಚಾಂಗಳೇಶ್ವರ ದೇವಸ್ಥಾನ, ಯಳ್ಳೂರ, ಬೆಳಗಾವಿ ಇಲ್ಲಿ  ತಲಾ 1000 ಸಾವಿರ ಜನರಿಗೆ ಕಾರ್ಡನ್ನು ವಿತರಣೆ ಮಾಡುವ ಮೂಲಕ ಚಾಲನೆ ನೀಡಿದರು.

ಸಂದರ್ಭದಲ್ಲಿ ಶ್ರೀಮತಿ ಗೀತಾ ಸುತಾರ, ಅಧ್ಯಕ್ಷರು ಬಿಜೆಪಿ, ಬೆಳಗಾವಿ ದಕ್ಷಿಣ, ನಾರಾಯಣ ಕುಲಗೋಡ ಹಾಗೂ ಯಳ್ಳೂರ ಗ್ರಾಮದ ಪಂಚಾಯತ ಸದಸ್ಯರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತಿತರಿದ್ದರು.

ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಕ್ಷೇತ್ರದಲ್ಲಿ ಉಳಿದಿರುವ ಕಾರ್ಡಗಳನ್ನು ವಿತರಿಸಲಾಗುವುದೆಂದು ಶಾಸಕರಾದ ಶ್ರೀ ಅಭಯ ಪಾಟೀಲ ಈ ಸಂದರ್ಭದಲ್ಲಿ ತಿಳಿಸಿದರು.