ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಇಂದು ನಡೆಸಿದ್ದ ಪ್ರತಿಭಟನೆ ನಡೆಸಿದ ಗಮನಹರಿಸಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ

0

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಪ್ರತಿಭಟನೆ ನಡೆಸಿದ ಗಮನಹರಿಸಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ

ಮಹಾರಾಷ್ಟ್ರದ ಕೊಲ್ಹಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಹಾಗೂ ಅವರ ಸಂಗಡಿಗರಿಗೆ ಮಾರ್ಚ 7ರಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ 9ರಂದು ಬೆಳಿಗ್ಗೆ 6 ಗಂಟೆವರೆಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.

ಹೌದು ಬೆಳಗಾವಿ ಪಾಲಿಕೆ ಮುಂಭಾಗದಲ್ಲಿ ಕನ್ನಡ ಧ್ವಜ ಹಾರಿಸಿದ್ದನ್ನು ವಿರೋಧಿಸಿ ಎಂಇಎಸ್ ಮಾರ್ಚ 8ರಂದು ಪ್ರತಿಭಟನಾ ರ್ಯಾಲಿ ನಡೆಸಲು ಮುಂದಾಗಿದೆ. ಇನ್ನು ಪ್ರತಿಭಟನೆಯಲ್ಲಿ ಕೊಲ್ಹಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ಸೇರಿದಂತೆ ಶಿವಸೇನೆ ಕಾರ್ಯಕರ್ತರು ಭಾಗಿಯಾಗುತ್ತೇವೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪ್ರತಿಭಟನೆಯಲ್ಲಿ ಮಹಾರಾಷ್ಟ್ರದ ನಾಯಕರು ಭಾಗಿಯಾದ್ರೆ ಗಡಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಪ್ರಚೋದನಕಾರಿ ಭಾಷಣ ಮಾಡುವುದರಿಂದ ವಿವಿಧ ಕನ್ನಡಪರ ಸಂಘಟನೆಯವರು ಕೆರಳುವ ಸಾಧ್ಯತೆಯೂ ಇದೆ.

ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲಾಧಿಕಾರಿಗಳು ವಿಜಯ್ ದೇವಣೆ ಮತ್ತು ಅವರ ಸಂಗಡಿಗರಿಗೆ ಮಾರ್ಚ 7ರಂದು ಬೆಳಿಗ್ಗೆ 6 ಗಂಟೆಯಿಂದ ಮಾರ್ಚ 8 ತಾರಿಕಿನಿಂದಾ- 9ರಂದು ಬೆಳಿಗ್ಗೆ 6 ಗಂಟೆವರೆಗೆ ಬೆಳಗಾವಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ತುರ್ತು ಆದೇಶ ಹೊರಡಿಸಿದ್ದಾರೆ.

ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಕೆಲ ಸಂಘಟನೆಗಳು ಸೋಮವಾರ (ಮಾ.8) ನಡೆಸಲು ಉದ್ಧೇಶಿಸಿರುವ ಮೋರ್ಚಾ ಕೈಬಿಡುವಂತೆ ಮುಖಂಡರಿಗೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.
ಪಾಲಿಕೆ ಎದುರಿನ ಧ್ವಜ ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಶನಿವಾರ (ಮಾ.6) ತಮ್ಮನ್ನು ಭೇಟಿ ಮಾಡಿದ ಮರಾಠಾ ಸಮಾಜ ಹಾಗೂ ಎಂ.ಇ.ಎಸ್.ನ ಮುಖಂಡರ ಜತೆ ಚರ್ಚಿಸಲಾಯಿತು.
ಎಲ್ಲ ಕನ್ನಡಪರ ಸಂಘಟನೆಗಳ ಜತೆಯೂ ಮಾತುಕತೆಯನ್ನು ನಡೆಸಿ ಈ ವಿಷಯವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು.
ಆದ್ದರಿಂದ ವಿವಿಧ ಸಂಘಟನೆಗಳು ಸೋಮವಾರ ನಡೆಸಲು ಉದ್ಧೇಶಿಸಿರುವ ಮೋರ್ಚಾ ಕೈಬಿಡಬೇಕು ಎಂದು ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದ್ದಾರೆ.