ಬೆಳಗಾವಿ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವ ನಿರೀಕ್ಷೆಯ ಲೆಕ್ಕಾಚಾರ

0

ಬೆಳಗಾವಿ- ರಾಜ್ಯ ಸರ್ಕಾರ ಸೋಮವಾರ ಬಜೆಟ್ ಮಂಡಿಸಲಿದ್ದು ಪ್ರಸಕ್ತ ಸಾಲಿನ ಬಜೆಟ್‌ ನಲ್ಲಿ ಬೆಳಗಾವಿ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವ ನಿರೀಕ್ಷೆಯ ಲೆಕ್ಕಾಚಾರ ಈಗ ಶುರುವಾಗಿದೆ.

ರಾಜ್ಯ ಸರ್ಕಾರದ ಬಜೆಟ್ ಕೊಡುಗೆಯಾಗಿ ಈಗಾಗಲೇ ಬೆಳಗಾವಿಯಲ್ಲಿ ಸೂಪರ್ ಸ್ಪೇಶ್ಯಾಲಿಟಿ ಆಸ್ಪತ್ರೆ,ಹೈಟೆಕ್ ಕೇಂದ್ರ ಬಸ್ ನಿಲ್ಧಾಣ ನಿರ್ಮಾಣ ಆಗುತ್ತಿದೆ.ಈ ಬಾರಿಯ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಏನೇನು ಸಿಗಬಹುದು ಎನ್ನುವದಕ್ಕೆ ಬೆಟ್ಟದಷ್ಟು ನಿರೀಕ್ಷೆಗಳಿವೆ.

ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಹೆಚ್ಚಾಗುತ್ತಲೇ ಇದೆ.ಈಸಮಸ್ಯೆ ನಿವಾರಣೆಗೆ ಬೆಳಗಾವಿ ನಗರಕ್ಕೆ ರಿಂಗ್ ರಸ್ತೆ ತುಂಬಾ ಅಗತ್ಯವಿದ್ದು ಸ್ಥಳೀಯ ಶಾಸಕರಾದ ಅಭಯ ಪಾಟೀಲ,ಮತ್ತು ಅನೀಲ ಬೆನಕೆ ಅವರು ರಿಂಗ್ ರಸ್ತೆ ಮಂಜೂರಾತಿ ಮಾಡಿ ಬಜೆಟ್ ನಲ್ಲಿ ಘೋಷಣೆ ಮಾಡುವಂತೆ ಮುಖ್ಯಂತ್ರಿಗಳನ್ನು ಭೇಟಿಯಾಗಿ,ಮನವಿ ಅರ್ಪಿಸಿ ಎಲ್ಲ ರೀತಿಯಿಂದಲೂ ಈ ಬಗ್ಗೆ ಒತ್ತಡ ಹೇರಿದ್ದಾರೆ.

ಬೆಳಗಾವಿ ನಗರದ ನಾಲೆಗಳನ್ನು ಅಭಿವೃದ್ಧಿ ಪಡಿಸಿ ಈ ನಾಲೆಗಳಲ್ಲಿ ಜಲ ಸಾರಿಗೆ ಆರಂಭಿಸುವ ಮಹತ್ವದ ಯೋಜನೆ ರೂಪಿಸಿ ನೀರಾವರಿ ಇಲಾಖೆಗೆ ಶಾಸಕ ಅಭಯ ಪಾಟೀಲ ಪ್ರಸ್ತಾವನೆ ಸಲ್ಲಿಸಿದ್ದಾರೆ.

ಈ ಬಾರಿಯ ಬಜೆಟ್ ನಲ್ಲಿ ಬೆಳಗಾವಿ ಜಿಲ್ಲೆಗೆ ಏನೇನು ಸಿಗಬೇಕು,ಬೆಳಗಾವಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಯಾವ,ಯಾವ ಯೋಜನೆಗಳನ್ನು ಘೋಷಣೆ ಮಾಡಬೇಕು,ಜಿಲ್ಲೆಯ ಜನರ ಪ್ರಮುಖ ಬೇಡಿಕೆಗಳು ಏನು..? ಇಲ್ಲಿದೆ ಸಮಗ್ರ ಯೋಜನೆಗಳ ಪಟ್ಟಿ

1) ಬೆಳಗಾವಿ ನಗರಕ್ಕೆ ರಿಂಗ್ ರಸ್ತೆ ನಿರ್ಮಿಸಲು ಅನುದಾನ ನೀಡಬೇಕು
2) ಮಹಾದಾಯಿ ಕಾಮಗಾರಿ ಆರಂಭಿಸಲು ಅನುದಾನ ನೀಡಬೇಕು
3) ಬೆಳಗಾವಿ ನಗರದ ನಾಲೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು.
4) ಸವದತ್ತಿ ಯಲ್ಲಮ್ಮ ದೇವಿ ದೇವಸ್ಥಾನ ವನ್ನು ಶಿರಡಿ ಸಾಯಿ ಮಂದಿರದ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು.
5) ಬೆಳಗಾವಿಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಂಶೋಧನಾ ಕೇಂದ್ರ ಅಥವಾ ಯುನಿವರ್ಸಿಟಿ ನಿರ್ಮಾಣ ಮಾಡಬೇಕು
6) ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು.
7) ಬೆಳಗಾವಿ ಜಿಲ್ಲೆಯನ್ನು ವಿಭಜನೆ ಮಾಡಬೇಕು
8) ಬೈಲಹೊಂಗಲದಲ್ಲಿ ಇರುವ ವೀರರಾಣಿ ಕಿತ್ತೂರು ಚೆನ್ನಮ್ಮನ ಸಮಾಧಿ ಸ್ಥಳವನ್ನು ಅಭಿವೃದ್ಧಿ ಪಡಿಸಲು ವಿಶೇಷ ಅನುದಾನ ನೀಡಬೇಕು.

9) ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಹತ್ತಿರವಾಗಿರುವ ಕೆರೆಗಳ ಅಭಿವೃದ್ಧಿ ಪಡಿಸಬೇಕು ಇದಕ್ಕೆ ಅನುದಾನ ನೀಡಬೇಕು

ಇಂತಹ ಹತ್ತು ಹಲವು ಯೋಜನೆಗಳು ಬೆಳಗಾವಿ ಜಿಲ್ಲೆಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಸಿಗುವ ನಿರೀಕ್ಷೆಗಳಿದ್ದು ಸರ್ಕಾರ ಇದಕ್ಕೆ ಸ್ಪಂದಿಸುತ್ತದೆಯೋ ಇಲ್ಲವೋ ಎನ್ನುವದನ್ನು ಕಾದು ನೋಡಬೇಕು