ಉರಿ ಬಿಸಿಲು; ಭುಜದ ಮೇಲೆ ಮಗುಹೊತ್ತು ಕರ್ತವ್ಯ ನಿರತರಾದ ಮಹಿಳಾ ಟ್ರಾಫಿಕ್ ಪೊಲೀಸ್

0

ಚಂಡೀಗಢ: ಮಹಿಳಾ ಟ್ರಾಫಿಕ್ ಪೊಲೀಸ್ ಓರ್ವರು ಮಗುವನ್ನು ಭುಜದ ಮೇಲೆ ಮಲಗಿಸಿಕೊಂಡು ರಸ್ತೆಯಲ್ಲಿ ನಿಂತು ಟ್ರಾಫಿಕ್ ನಿಯಂತ್ರಣ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪ್ರಿಯಾಂಕಾ ಎಂಬ ಟ್ರಾಫಿಕ್ ಪೊಲೀಸ್ ಚಂಡೀಗಢ ಸೆಕ್ಟರ್ 15/23 ರಸ್ತೆಯಲ್ಲಿ ತಮ್ಮ ಪುಟ್ಟ ಕಂದನನ್ನು ಭುಜದ ಮೇಲೆ ಮಲಗಿಸಿಕೊಂಡು ಸಂಚಾರ ನಿಯಂತ್ರಣವನ್ನು ಮಾಡುತ್ತಿದ್ದರು. ಉರಿ ಬಿಸಿಲಲ್ಲಿ ಮಗುವನ್ನು ಎತ್ತಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಪೊಲೀಸ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.