ಪೊಲೀಸ್ ನಿರೀಕ್ಷಕ ರಾಘವೇಂದ್ರ ಹಳ್ಳೂರ ರವರ ನೇತೃತ್ವದಲ್ಲಿ ಬಾರಿ ಸ್ಪೋಟಕಗಳ ವಶ

0

ಪೊಲೀಸ್ ನಿರೀಕ್ಷಕ ರಾಘವೇಂದ್ರ. ಹಳ್ಳೂರ ರವರ ನೇತೃತ್ವದಲ್ಲಿ ಬಾರಿ ಸ್ಪೋಟಕಗಳ ವಶ
…………..

 

ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಅವಘಡಗಳ ನಂತರ ಎಚ್ಚೆತ್ತುಕೊಂಡ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅಕ್ರಮವಾಗಿ ಸಾಗಿಸುವ ಹಾಗೂ ಶೇಖರಿಸುವ ಸ್ಫೋಟಕಗಳ ಮೇಲೆ ಭಾರಿ ಕಣ್ಣಿರಿಸಿದೆ.. ಆದರೂ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯತನ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವತೆ ಸಾಗಿಸುತ್ತಿದ ಅಂದಾಜು ಸುಮಾರು 4 ಲಕ್ಷ ಮೌಲ್ಯದ 6.675 ಟನ್ ಬಾರಿ ಸ್ಪೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮೆಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಕತಿ ಪೊಲೀಸ್ ನಿರೀಕ್ಷಕರು  ರಾಘವೇಂದ್ರ  ಹಳ್ಳೂರ ರವರ ನೇತೃತ್ವದ ತಂಡವು ಸ್ಪೋಟಕ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯವಾಗಿ ಹಾಗೂ ಮಾನವ ಪ್ರಾಣಕ್ಕೆ ಅಪಾಯವಾಗುವಂತೆ ಸಾಗಿಸುತ್ತಿದ್ದ ಅಂದಾಜು 4 ಲಕ್ಷ ಮೌಲ್ಯದ 6.675 ಟನ್ ಸ್ಪೋಟಕ ವಸ್ತುಗಳನ್ನು ಹೊನಗಾ ಗ್ರಾಮದ ಸ್ಪೂರ್ತಿ ದಾಬಾದ ಎದುರುಗಡೆ ಟಾಟಾ ಕ್ಯಾಂಟರ್ ನಂಬರ್‌ ಕೆಎ 23 ಬಿ 2509 ಮತ್ತು ಬೋಲೆರೊ ಪಿಕ್ ಅಪ್ ನಂಬರ್ ಕೆಎ 23 ಎ 8909 ವಾಹನಗಳನ್ನು ಸ್ಪೋಟಕ ವಸ್ತುಗಳೊಂದಿಗೆ ವಶಕ್ಕೆಪಡೆದು.
3 ಆರೋಪಿತ ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಕಾಕತಿ ಪೊಲೀಸ್ ಠಾಣೆ ನೆದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಇನ್ನು ಬಂಧಿತ ಆರೋಪಿಗಳನ್ನು ರಮೇಶ ರಾಯಪ್ಪ ಲಕ್ಕೊಟಿ, ರಾಜು ಈಶ್ವರ ಶಿರಗಾಂವಿ, ಅರುಣ ಶ್ರೀಶೈಲ ಮಠ್ಠದ ಹಾಗೂ ಸ್ಪೋಟಕ ವಸ್ತುಗಳ ಮ್ಯಾಗಜೀನ್ ಹೋಲ್ಡರ್ ವಿನಯ ಟ್ರೆಡರ್ಸನ ವಿನಯ ಸುಭಾಷ್ ಕಿನ್ನವರ ಎನ್ನಲಾಗಿದೆ.

*ವಶಕ್ಕೆ ಪಡೆದ ಸ್ಪೋಟಕ ವಸ್ತುಗಳನ್ನು ಕಾಕತಿ ವ್ಯಾಪ್ತಿಯ ನಿಂಗ್ಯಾನಟ್ಟಿಯ ಸ್ಪೋಟಕ ಮ್ಯಾಗಜೀನ್‌ನಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ* .
ಇನ್ನು ಪೊಲೀಸ್ ನಿರೀಕ್ಷಕರಾದ  ರಾಘವೇಂದ್ರ ಹಳ್ಳೂರ ರವರು ನಿಯಮ ಮೀರಿ ಅಕ್ರಮ ಸ್ಫೋಟಕಗಳನ್ನು ಸಾಗಿಸುವುದು ಅಥವಾ ಶೇಖರಿಸುವುದರ ಬಗ್ಗೆ ನಿರಂತರ ಬೇಟೆ ನಡೆಸಿದ್ದು, ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಅಕ್ರಮ ಸ್ಫೋಟಕಗಳ ವಶಕ್ಕೆ ಪಡೆದ ಪೋಲಿಸರ ಬಗೆಗೆ ಹಾಗೂ ಮುಂದೊಮ್ಮೆ ಸಂಭವಿಸಬಹುದಾದ ಅವಘಡ  ತಪ್ಪಿಸಿದ ಪೋಲಿಸರ ಬಗೆಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ