ಪಿ.ಡಿ.ಓ ಅಮಾನತ್ತಿಗೆ ಆಗ್ರಹಿಸಿದ: ಓಬಳಾಪೂರ್ ಪಂಚಾಯತಿ ಸದಸ್ಯರು, ಸಾರ್ವಜನಿಕರು.

0

ರಾಮದುರ್ಗ ತಾಲೂಕಿನ ಓಬಳಾಪೂರ ಗ್ರಾಮಪಂಚಾಯತಿ ಅಧಿಕಾರಿಗಳು ನಿರ್ಲಕ್ಷ್ಯದಿಂದ ಕಾಮಗಾರಿಗಳ ಬಿಲ್ಲುಗಳು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗಾರರಿಗೆ ದುಡಿದ ಕುಲಿ ನೀಡುವಲ್ಲಿ ವಿಫಲವಾಗಿದ್ದಾರೆ.‌ ಓಬಳಾಪುರ ಗ್ರಾಮ ಪಂಚಾಯತಿ ಪಿಡಿಓ ಅಮಾನತ್ತು ಮಾಡಬೇಕು ಎಂದು ಬೆಳಗಾವಿ ಜಲ್ಲಾ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹನುಮಂತ ತಿಪ್ಪಾರೆಡ್ಡಿ ಗ್ರಾಮ ಪಂಚಾಯತಿ ಸದಸ್ಯರು ಕರ್ಣಾಟಕ ರಕ್ಷಣಾ ವೇಧಿಕೆ, ಹ್ಯೂಮನ್ ರೈಟ್ಸ್, ಮಾನವ ಭಂದುತ್ವ ವೇಧಿಕೆ ಅವರ ಸಂಯುಕ್ತ ಆಸ್ಪತ್ರೆಯಲ್ಲಿ ನಾವು ಇಂದು ಪ್ರತಿಭಟನೆ ಮಾಡುತ್ತಿದ್ದೇವೆ.  ಕಳೆದ 5 ವರ್ಷಗಳ ಹಿಂದೆ ಓಬಳಾಪೂರ ಗ್ರಾಮ ಪಂಚಾಯತಿ ನಿರ್ಮಾಣ ಆಗಿದೆ. ಆದರೆ ಆ ಗ್ರಾಮ ಪಂಚಾಯತಿಯಲ್ಲಿಯ ಅಧಿಕಾರಿಗಳು ಜನರಿಗೆ ಸ್ಪಂದಿಸಲು ಹಿಂದೇಟ್ಟು ಹಾಕುತ್ತಿದ್ದಾರೆ. ಸರ್ಕಾರದಿಂದ ಸಾಕಷ್ಟು ಹೋಜನೆಗಳು ಬಂದರು ಅಧಿಕಾರಿಗಳು ಜನರಿಗೆ ತಲುಪಿಸಲು ಹಿಂದೇಟು ಹಾಕುತ್ತಿದ್ದಾರೆ. ಸಾಕಷ್ಟು ಬಾರಿ ರಾಮದುರ್ಗ ಇಓ ಅವರಿಗೆ ಮನವಿ ಸಲ್ಲಿಸಿದರು ಉಪಯೋಗ ಆಗಲಿಲ್ಲ ಹಾಗಾಗಿ ಸಿ.ಇ.ಓ ಅವರು ಈ ಕುಡಲೆ ಓಬಳಾಪೂರ ಗ್ರಾಮಪಂಚಾಯತಿ ಪಿ.ಡಿ.ಓ ಅವರಿಗೆ ಅಮಾನತ್ತು ಮಾಡಬೇಕು ಎಂದು ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.

ಈ ವೇಳೆ ರಾಘವೇಂದ್ರ ದೊಡ್ಡಮನಿ,ದುಂಡಯ್ಯ ಹಿರೇಮಠ, ಸಿದ್ದಪ್ಪ ಮಾದರ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.