ಕಾರು ಪಲ್ಟಿ : ಇಬ್ಬರು ಸಾವು, ಐವರಿಗೆ ಗಾಯ

0

ಉತ್ತರ ಕನ್ನಡ :  ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಾರವಾರ ತಾಲೂಕಿನ ಬೈರೆ ಗ್ರಾಮದ ಬಳಿ ನಡೆದಿದೆ.

ಸೈಯದ್​ ಹಾಗೂ ತಾಯವ್ವ ಮೃತ ದುರ್ದೈವಿಗಳು.

ಬೆಂಗಳೂರು ಮೂಲದ ಮೃತರು ಹಳಗಾ ಗ್ರಾಮದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸುತ್ತಿದ್ದರು. ಆದರೆ ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎನ್ನಲಾಗಿದೆ.

ಗಾಯಗೊಂಡ ಐವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕದ್ರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.