ಕೆಸಿಡಿ ಕ್ಯಾಂಪಸ್ ನ ಒಂಟಿ ಸಗಲ ಪ್ರತ್ಯಕ್ಷ

0

ಧಾರವಾಡ: ಇಲ್ಲಿನ ಪಾವಟೆನಗರದಲ್ಲಿರುವ ಕರ್ನಾಟಕ ವಿಶ್ವ ವಿದ್ಯಾಲಯ(ಕೆಸಿಡಿ) ಲ್ಲಿರುವ ವಿದ್ಯಾರ್ಥಿಗಳ ಕ್ಯಾಂಪಸ್ ನ ಆವರಣದಲ್ಲಿ   `ಒಂಟಿ ಸಗಲ’ ಪ್ರತ್ಯಕ್ಷವಾಗಿದ್ದು, ಬಂಧಿಸುವಂತೆ ವಿದ್ಯಾರ್ಥಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಕ್ಯಾಂಪಸ್ ನಲ್ಲಿ ಆನೆ ಅಲೆದಾಡಿರುವ ಶಂಕೆ ವ್ಯಕ್ತವಾಗಿದೆ. ಆದರೆ, ಮಳೆಯಾದರಿಂದ ಆನೆ ಹೆಜ್ಜೆ ಗುರುತು ಸಿಗುವುದು ಅರಣ್ಯಾಧಿಕಾರಿಗಳಿಗೆ ಕಷ್ಟವಾಗಿದೆ. ಈ ವ್ಯಾಪ್ತಿಯಲ್ಲಿ ಮೂರು ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಇಬ್ಬರು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ.

`ಆನೆ’ ಆಹಾರ ಅರಸಿ ಕ್ಯಾಂಪಸಗೆ ಬಂದಿರಬಹುದು ಎಂದು ಅಧಿಕಾರಿಗಳ ಮಾಹಿತಿ ತಿಳಿಸಿದ್ದಾರೆ.ಮರಗಳಡಿ ಆನೆ ಮರೆ ಮಾಚಿದೆ. ಒಂಟಿಸಲಗದ ಭಾವಚಿತ್ರವನ್ನ ತೆಗೆಯಲಾಗಿದ್ದು, ಇದೀಗ ಕಾಣಿಸದೇ ಇರುವುದು ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದ್ದು, ದ್ರೋಣ ಮೂಲಕ ಆನೆಯನ್ನ ಪತ್ತೆ ಹಚ್ಚಲು ಮುಂದಾಗಿದ್ದಾರೆ.////