ಬೆಳಗಾವಿ : ರೈಲಿನಲ್ಲಿ ಸೈನಿಕನ ಮೈಮೇಲಿರುವ ಚಿನ್ನ ಕಳ್ಳತನ ಮಾಡಿದ ಆರೋಪಿ ಬಂಧನ

0

ಬೆಳಗಾವಿ : ಉತ್ತರ ಪ್ರದೇಶದಿಂದ ಬೆಳಗಾವಿಗೆ ರೈಲಿನಲ್ಲಿ ಬರುತ್ತಿದ್ದ ಸೈನಿಕನ ಬಳಿ ಇದ್ದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಭಾನುವಾರ ಬೆಳಗಾವಿ ರೈಲ್ವೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿಯ ನೇಕಾರ ನಗರದ ಹೊಸ ಅಯೋಧ್ಯ ನಗರ ನಿವಾಸಿಯಾದ ಮೆಕ್ಯಾನಿಕ್, ಜಹೀರ್ ಹಯಾತಸಾಬ್ ಮುಲ್ಲಾ (32) ಬಂಧಿತ ಆರೋಪಿ.

ಸೈನಿಕ ಯತಿಂದ್ರಕುಮಾರ್ ಪುರಣಸಿಂಗ್(33) ಏ.14ರಂದು ತಮ್ಮ ಪತ್ನಿಯೊಂದಿಗೆ ಆಗ್ರಾದಿಂದ ನಿಜಾಮುದ್ದೀನ್ ವಾಸ್ಕೋ ಸ್ಪೇಶಲ್ ಎಕ್ಸಪ್ರೇಸ್ ರೈಲು ಗಾಡಿಯಲ್ಲಿ ಬೆಳಗಾವಿಗೆ ಆಗಮಿಸುತ್ತಿರುವ ವೇಳೆ ಘಟನೆ ನಡೆದಿದೆ.

ರೈಲು ಗಾಡಿ ಏ.15 ರಂದು ಕುಡಚಿ ರೈಲ್ವೆ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ರಾತ್ರಿ 11 ಗಂಟೆ ಸುಮಾರಿಗೆ 6 ಗ್ರಾಂನ ಚೈನ್, 2 ಬಂಗಾರದ ಉಂಗುರ ಒಟ್ಟು 40 ಸಾವಿರ ಬೆಲೆ ಚಿನ್ನಾಭರಣ ಕಳ್ಳತನವಾಗಿತ್ತು. ಎ.16 ರಂದು ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸೈನಿಕ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತನಿಂದ 57 ಗ್ರಾಂ ಚಿನ್ನ, ಒಂದು ಹೊಂಡಾ ಶೈನ್ ದ್ವಿ ಚಕ್ರ ವಾಹನ, ಒಟ್ಟು 1,97,000/- ಮೌಲ್ಯದ ಬೆಲೆ ಬಾಳುವ ಚಿನ್ನವನ್ನು ಬೆಳಗಾವಿ ರೈಲ್ವೆ ಪೊಲಿಸರು ಜಪ್ತಿ ಮಾಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.