ಕೊರೊನಾ ನಿಯಮ ಪಾಲನೆಗೆ ವಲಯವಾರು ಪೊಲೀಸ್ ಅಧಿಕಾರಿಗಳ ನೇಮಕ; ಬೆಳಗಾವಿ ವಲಯಕ್ಕೆ ಭಾಸ್ಕರ್ ರಾವ್ ಉಸ್ತುವಾರಿ

0

ಬೆಂಗಳೂರು: ಬೆಳಗಾವಿ‌ ವಲಯದಲ್ಲಿ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಹಾಗೂ ನಿಯಮ ಪಾಲನೆಗಾಗಿ ಉಸ್ತುವಾರಿ ಅಧಿಕಾರಿಯಾಗಿ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರನ್ನು ನೇಮಕ ಮಾಡಿ ರಾಜ್ಯ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ  ರಾಜ್ಯ ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳುವ ನಿರ್ಧಾರಗಳನ್ನು ಪರಾಮರ್ಶಿಸಲು ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಪೊಲೀಸ್ ಪ್ರಧಾನ ಕಚೇರಿಯಿಂದ ಏಳು ವಲಯಗಳಿಗೆ ಒಬ್ಬೊಬ್ಬ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಡಿಜಿಪಿ ಪ್ರವೀಣ ಸೂದ್ ಅವರು ನೇಮಕ ಮಾಡಿದ್ದಾರೆ.

ಉತ್ತರ ವಲಯಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರರಾವ್ ಅವರನ್ನು ನೇಮಕ ಮಾಡಲಾಗಿದೆ. ಭಾಸ್ಕರರಾವ್ ಅವರು ಬೆಳಗಾವಿ ಉತ್ತರ ವಲಯದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಎ.ಎಸ್.ಎನ್. ಮೂರ್ತಿ-ಬಳ್ಳಾರಿ ವಲಯ, ಅಮೃತ್ ಪೌಲ್- ದಕ್ಷಿಣ ವಲಯ, ಅರುಣ ಚಕ್ರವರ್ತಿ- ಈಶಾನ್ಯ ವಲಯ, ಸೀಮಂತಕುಮಾರ ಸಿಂಗ್- ಕೇಂದ್ರ ವಲಯ, ಉಮೇಶಕುಮಾರ- ಪೂರ್ವ ವಲಯ, ಹೇಮಂತ ನಿಂಬಾಳ್ಕರ್- ಪಶ್ಚಿಮ ವಲಯಕ್ಕೆ ನಿಯೋಜನೆ ಮಾಡಲಾಗಿದೆ.