ಭೂ ಸ್ವಾಧೀನ ಪರಿಹಾರ ವಿತರಣೆ ಮಾಡಿರಲಿಲ್ಲ. 10 ರೈತರಿಗೆ 5.5ಕೋಟಿಯಷ್ಟು ಪರಿಹಾರ ಬರಬೇಕಿತ್ತು. ಈ ಕುರಿತು ರೈತರು 4ನೇ ಹೆಚ್ಚುವರಿ ಹಿರಿಯ ನ್ಯಾಯಾಲಯದ ಮೊರೆ

0

ಬೆಳಗಾವಿ : ರೈತರಿಗೆ ಸಮರ್ಪಕ ಪರಿಹಾರ ನೀಡದೆ ಇರುವ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿಗಳ (ಎಸಿ) ಕಚೇರಿಯನ್ನು ಜಪ್ತಿ ಮಾಡಲು ಕೋರ್ಟ್ ಆದೇಶ ನೀಡಿದೆ.

ಸಾಂಬ್ರಾ ವಿಮಾನ ನಿಲ್ದಾಣದ ಭೂ ಸ್ವಾಧೀನ ಪರಿಹಾರ ವಿತರಣೆ ಮಾಡಿರಲಿಲ್ಲ. 10 ರೈತರಿಗೆ 5.5ಕೋಟಿಯಷ್ಟು ಪರಿಹಾರ ಬರಬೇಕಿತ್ತು. ಈ ಕುರಿತು ರೈತರು 4ನೇ ಹೆಚ್ಚುವರಿ ಹಿರಿಯ ನ್ಯಾಯಾಲಯದ ಮೊರೆ ಹೋಗಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಎಸಿ ಕಚೇರಿಯಲ್ಲಿನ ಕಂಪ್ಯುಟರ್, ಖುರ್ಚಿ, ಟೇಬಲ್, ಫೋನ್ ಸೇರಿ ಪೀಠೋಪಕರಣ ಹಾಗೂ ಹಲವು ವಸ್ತುಗಳ ಜಪ್ತಿಗೆ ಆದೇಶ ನೀಡಿದೆ.