ಹಾಸಿಗೆ ಸಾಮರ್ಥ್ಯ 30 ಕಿಂತ ಕಡಿಮೆ ಇರುವ ಆಸ್ಪತ್ರೆಗಳು ಚಿಕಿತ್ಸೆ ನೀಡುವಂತಿಲ್ಲ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿಕೆ

0
ಹಾಸಿಗೆ ಸಾಮರ್ಥ್ಯ 30 ಕಿಂತ ಕಡಿಮೆ ಇರುವ ಆಸ್ಪತ್ರೆಗಳು ಚಿಕಿತ್ಸೆ ನೀಡುವಂತಿಲ್ಲ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿಕೆ
ಕೋವಿಡ್ ರೋಗಿಗಳ ಚಿಕಿತ್ಸೆಗೆ ಸರಕಾರ ಹೆಚ್ಚು ಹಣ ಕೊಡುತ್ತದೆ ಎಂದು ಆಮ್ಲ ಜನರ ಘಟಕವಿಲ್ಲದ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳನ್ನು ದಾಖಲಿಸಿಕೊಳ್ಳಲಾಗುತ್ತದೆ.
 ಇದು ನಿಲ್ಲಬೇಕು ಹೀಗಾಗಿ ರಾಜ್ಯದಲ್ಲಿ ಆಮ್ಲಜನಕ ಘಟಕ ಹೊಂದಿಲ್ಲದ 30 ಹಾಸಿಗೆ ಸಾಮರ್ಥ್ಯಕ್ಕಿಂತ ಕಡಿಮೆ ಇರುವ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳನ್ನು ದಾಖಲಿಸಬಾರದು. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡುವಂತೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರು ಸೂಚಿಸಿದ್ದಾರೆ
ಇನ್ನು ಆಮ್ಲಜನಕ ಘಟಕ ಇಲ್ಲದ ಆಸ್ಪತ್ರೆಗಳಲ್ಲಿ ಕೋವಿಡ್ ದಾಖಲಿಸಿಕೊಂಡು ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದರೆ ಸರಕಾರ ಸಹಿಸುವುದಿಲ್ಲ ಎಂದು ಕೆ ಸುಧಾಕರ್ ಹೇಳಿದರು
ಆಮ್ಲಜನಕದ ಕೊರತೆಯಾಗದಂತೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಈಗಾಗಲೇ ಜೆ ಎಸ್ ಡಬ್ಲ್ಯೂ ಸಂಸ್ಥೆಯು ನಗರ ಕಾಗಿ 40 ಮೆಟ್ರಿಕ್ ಟನ್ ಆಮ್ಲಜನಕ ಪೂರೈಸಿದ್ದಾರೆ 5 ಸಾವಿರ ಸಿಲಿಂಡರ್ ಹೆಚ್ಚುವರಿಯಾಗಿ ದೊರೆಯಲಿದೆ ಹೀಗಾಗಿ ಪ್ರಸಕ್ತ ಮಾಸದಲ್ಲಿ ನಗರಕ್ಕೆ ಆಮ್ಲಜನಕ ಸಮಸ್ಯೆಯಾಗುವುದಿಲ್ಲ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದರು