ಬಲಹೀನವಾದ ಎ.ಪಿ.ಎಂ.ಸಿ ಮಾರ್ಕೆಟ್ ರಸ್ತೆ

0

ಬಲಹೀನವಾದ ಎ.ಪಿ.ಎಂ.ಸಿ ಮಾರ್ಕೆಟ್ ರಸ್ತೆ

ನಗರದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಚಾಲನೆಯಾಗಿ  ವರ್ಷಗಳು ಕಳೆದರೂ ಕೆಲವು ಕಾಮಗಾರಿಗಳು ಇವರಿಗೂ ಪೂರ್ಣವಾಗಿಲ್ಲ. ಇನ್ನೂ ಕೆಲವು ಭಾಗಗಳಲ್ಲಿ ಕಾಮಗಾರಿಗಳು  ಚಾಲನೆಯಲ್ಲಿದ್ದು, ಹಲವೆಡೆ ಕಳಪೆ ಕಾಮಗಾರಿಗಳು ತಲೆದುಗುತ್ತುವೆ ಇದಕ್ಕೆ ಉದಾಹರಣೆಯಾಗಿ ನಗರದ ಎ.ಪಿ.ಎಂ.ಸಿ ಮಾರ್ಕೆಟ್ ರಸ್ತೆಯ ಕಾಮಗಾರಿಯಾಗಿದೆ.
ಆಜಮ್ ನಗರ ಕ್ರಾಸ್ ನಿಂದ ಪ್ರಾರಂಭವಾದ ರಸ್ತೆ ಎ.ಪಿ.ಎಂ.ಸಿ ಮಾರ್ಕೆಟ್ ರಸ್ತೆ ಹಾಗೂ ಕಂಗ್ರಾಳಿ ವರೆಗೂ ರಸ್ತೆ ನಿರ್ಮಾಣವಾಗಿದ್ದು, ಸ್ಮಾರ್ಟ್ ಸಿಟಿ ಕುರಿತು ಹೇಳುವಂತಹ ಕಾಮಗಾರಿಯಾಗಿಲ್ಲ.
ರಸ್ತೆ ಮೇಲೆ ವಾಹನ ಚಾಲನೆ ಮಾಡುವಾಗ ಸರಳ ರಸ್ತೆಯಾಗದೇ ಡ್ಯಾನ್ಸಿಂಗ್ ರಸ್ತೆಯಾಗಿ ಮಾರ್ಪಟ್ಟಿದೆ ಹಾಗೂ ಕಂಗ್ರಾಳಿಯ ತಲಪುವ ಮದ್ಯ ರಸ್ತೆ ಇನ್ನಷ್ಟು ದುರಸ್ಥಿಗೆ ಬಂದಿದ್ದು, ಹೊಸ ಸ್ಮಾರ್ಟ್ ಸಿಟಿ ರಸ್ತೆ ಕಳಪೆ ಕಾಮಗಾರಿಯಿಂದ ಕೂಡಿದೆ ಎಂದು ತೋರುತ್ತಿದೆ.
ಸಾರ್ವಜನಿಕರು ಈ ಬಗ್ಗೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಜನ ಪ್ರತಿನಿಧಿಗಳು ಯಾವುದೇ ಸ್ಪಂದನೆ ನೀಡಿಲ್ಲ ಎಂದು ವಾಹನ ಸಂಚಾರಾರು ಹಾಗೂ ಸಾರ್ವಜನಿಕರು ಪರದಾಡುವಂತಾಗಿದೆ.
ರಸ್ತೆಯ ಬದಿಯಲ್ಲಿ ಗುಂಡಿಗಳು, ಪೈಪ್ಲೈನ್ ಚರಂಡಿಗಳು ಯಾವುದೇ ಬದಲಾವಣೆ ಹೊಂದಿಲ್ಲ ಹಾಗೂ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿ ಎಂದು ಸಾರ್ವಜನಿಕರ ಬೇಡಿಕೆಯಾಗಿದೆ.
ಸ್ಮಾರ್ಟ್ ಸಿಟಿ ಪ್ರಾರಂಭದಿಂದ ಯಾವುದೇ ಬದಲಾವಣೆ ಹೊಂದಿಲ್ಲ, ಅವಧಿ ಮುಗಿದು ಹೋದರು ಕಾಮಗಾರಿಗಳು ನಡೆಯುತ್ತಿವೆ ಈ ಕುರಿತು ಸಂಭಂದಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ ಎಂದು ಜನರ ಅಭಿಪ್ರಾಯವಾಗಿದೆ.
ರಸ್ತೆಯ ಎರಡೂ ಬದಿಯಲ್ಲಿ ತೆಗ್ಗು ಗುಂಡಿಗಳಿಂದ ಕೂಡಿದೆ. ರಸ್ತೆಯ ಮೇಲೆ ವಾಹನ ಚಾಲನೆ ಸಮಯದಲ್ಲಿ ಸಮತೋಲನ ಕಳೆದುಕೊಳ್ಳುವ ಸ್ಥಿತಿಯಲ್ಲಿ ರಸ್ತೆ ನಿರ್ಮಾಣವಾಗಿದ್ದು ವಾಹನ ಸಂಚಾರರು ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಬದಿಯ ಹಾಗೂ ತೆಗ್ಗು ಗುಂಡಿಗಳ ಜೊತೆಗೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವುದು ಹಾಗೂ ಅದರ ಕುರಿತು ಗಮನ ಹರಿಸುವುದು ಸಂಬಂಧಿಸಿದ ಅಧಿಕಾರಿಗಳ ಕರ್ತವ್ಯವಾಗಿದ್ದು, ಇನ್ನುಮುಂದಾದರು ಕಾಮಗಾರಿ ಪ್ರಗತಿ ಹೊಂದಲಿದೆಯೇ ಎಂದು ಕಾದು ನೋಡಬೇಕಾಗಿದೆ.