ಬಿಮ್ಸ್ ಆಸ್ಪತ್ರೆ, ಹೊರ ರೋಗಿಗಳ ವಿಭಾಗ ಏಪ್ರಿಲ್ 26 ರಿಂದ ಪ್ರಾರಂಭ

0

ಬೆಳಗಾವಿ, ಏ.22 : ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ (ಬಿಮ್ಸ್ ಬೋಧಕ) ಆಸ್ಪತ್ರೆಯಲ್ಲಿರುವ ಬೆಳಗಾವಿಯ ತುರ್ತುಚಿಕಿತ್ಸಾ ವಿಭಾಗ/ಶಸ್ತ್ರ ಚಿಕಿತ್ಸಾ ವಿಭಾಗದಲ್ಲಿಯ ಕೋವಿಡ್-19 ರೋಗಿಗಳನ್ನು ಏ.23ರಿಂದ ವೈದ್ಯಕೀಯ ವಿಭಾಗಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಬಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ತಿಳಿಸಿದ್ದಾರೆ.

ಎಲ್ಲ ರೋಗಿಗಳನ್ನು ಸ್ಥಳಾಂತರಿಸಿದ ನಂತರ ಸದರಿ ವಿಭಾಗದಲ್ಲಿ ಹೊರ ರೋಗಿಗಳ ವಿಭಾಗವನ್ನು ಏಪ್ರಿಲ್ 26 ರಿಂದ ಪ್ರಾರಂಭಿಸಲಾಗುವುದು.

ತುರ್ತುಚಿಕಿತ್ಸಾ ವಿಭಾಗ/ಶಸ್ತ್ರ ಚಿಕಿತ್ಸಾ ವಿಭಾಗವನ್ನು ಶುಚಿಗೊಳಿಸಿ,ಸ್ಯಾನಿಟೈಜೇಶನ್ ಮಾಡಲಾಗುವುದರಿಂದ ಏಪ್ರಿಲ್ 23 ರಿಂದ ಏ.25ರವರೆಗೆ ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಹೊರತು ಪಡಿಸಿ ಹೊರ ರೋಗಿಗಳ ವಿಭಾಗವನ್ನು ಸ್ಥಗಿತಗೊಳಿಸಲಾಗಿದೆ.

ಹಾಗೂ ಬಿಮ್ಸ್ ಆಸ್ಪತ್ರೆ ಮೆಡಿಕಲ್ ಬ್ಲಾಕ್‍ನಲ್ಲಿ ಒಟ್ಟು 300 ಹಾಸಿಗೆಗಳನ್ನು ಅಳವಡಿಸಲಾಗಿದೆ. ಕೋವಿಡ್ ಪಾಸಿಟಿವ್ ರೋಗಿಗಳಿಗೆ 200 ಮತ್ತು 100 ಹಾಸಿಗೆಗಳನ್ನು ಸಾರಿ ರೋಗಿಗಳಿಗೆ ಹಾಗೂ 20 ಹಾಸಿಗೆಯನ್ನು ಐಸಿಯುನಲ್ಲಿ ಅಳವಡಿಸಲಾಗಿದೆ ಎಂದು ಬಿಮ್ಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆÉಯಲ್ಲಿ ತಿಳಿಸಿದ್ದಾರೆ.