ರಸ್ತೆ ಅಪಘಾತ: ಅಪರಿಚಿತ ವ್ಯಕ್ತಿ ಸಾವು

0

ಬೆಳಗಾವಿ, ಏ.22 : ಬೆಳಗಾವಿ-ಚೋರ್ಲಾ ರಸ್ತೆಯ ಬೈಲೂರ ಕ್ರಾಸ್ ಬಳಿ ಏಪ್ರಿಲ್ 2 ರಂದು ರಾತ್ರಿ 8 ಗಂಟೆಗೆ ಅಂದಾಜು 52 ವರ್ಷದ ಅಪರಿಚಿತ ವ್ಯಕ್ತಿಗೆ ಮೋಟಾರ ಸೈಕಲ ವಾಹನ ಸಂಖ್ಯೆ ಕೆ.ಎ-22 ಜಿ-0785 ಹಾಯಿಸಿ ಅಪಘಾತವಾಗಿತ್ತು.

ಅಪಘಾತದಲ್ಲಿ ತೀವ್ರ ಗಾಯಗೊಂಡ ಅಪರಿಚಿತ ವ್ಯಕ್ತಿಯನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಏ.8ರಂದು ಚಿಕಿತ್ಸೆ ಫಲಿಸದೆ ವ್ಯಕ್ತಿ ಮೃತಪಟ್ಟಿದ್ದಾನೆ. ಈ ಕುರಿತು ಖಾನಾಪೂರ ಪೆÇಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಅಪರಿಚಿತ ವ್ಯಕ್ತಿಯ ವಯಸ್ಸು ಅಂದಾಜು 52 ಆಗಿದ್ದು, 5 ಅಡಿ 2 ಇಂಚು ಎತ್ತರ, ಕೋಲು ಮುಖ, ಚೂಪಾದ ಮೂಗು, ಸಾದಾಗಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಬಿಳಿ ಕೂದಲು ಹಾಗೂ ಸದೃಡವಾದ ಮೈಕಟ್ಟು ಹೊಂದಿದ್ದಾನೆ.

ಕಂದು ಮತ್ತು ಕಪ್ಪು ಬಣ್ಣದ ಫುಲ್ ಶರ್ಟ್, ಬಿಳಿ ಬಣ್ಣದ ಅಂಗಿ, ಕೆಂಪು ಬಣ್ಣದ ಟಿ-ಶರ್ಟ್ ಹಾಗೂ ಬಿಳಿ ಮತ್ತು ನೀಲಿ ಮಿಶ್ರಿತ ಟಿ-ಶರ್ಟ್ ಧರಿಸಿರುತ್ತಾನೆ.

ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸದ ಕುರಿತು ಮಾಹಿತಿ ದೊರೆತಲ್ಲಿ ಖಾನಾಪೂರ ಪಿ.ಎಸ್.ಐ. ಮೊ. ಸಂ.-9480804086, ಸಿ.ಪಿ.ಐ. ಮೊ. ಸಂ.- 9480804033 ಗೆ ಸಂಪರ್ಕಿಸಲು ಖಾನಾಪೂರ ಪೆÇಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.