‘ಪಿಎಂ ಕೇರ್’ ನಿಧಿಗೆ 50 ಸಾವಿರ ಡಾಲರ್ ದೇಣಿಗೆ ನೀಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮಿನ್ಸ್

0

ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಹಾವಳಿ ತೀವ್ರವಾಗ್ತಿದ್ದು, ಆಕ್ಸಿಜನ್‌ ಕೊರತೆ ಉಂಟಾಗುತ್ತಿದೆ. ಈ ಮಧ್ಯೆ ಆಸ್ಟ್ರೇಲಿಯಾ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್, ದೇಶದ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪೂರೈಕೆ ಬಲಪಡಿಸಲು ‘ಪಿಎಂ ಕೇರ್ಸ್’ ನಿಧಿಗೆ 50,000 ಅಮೆರಿಕನ್ ಡಾಲರ್ ದೇಣಿಗೆಯಾಗಿ ನೀಡಿದ್ದಾರೆ.

ಈ ಕುರಿತು ಟ್ವಿಟ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕ್ರಿಕೆಟಿಗ ಪ್ಯಾಟ್ ಕಮ್ಮಿನ್ಸ್, ‘ಆಟಗಾರರಾಗಿ, ನಾವು ಒಳ್ಳೆಯದಕ್ಕಾಗಿ ಬಳಸಬಹುದಾದ ಲಕ್ಷಾಂತರ ಜನರನ್ನು ತಲುಪಲು ಅನುವು ಮಾಡಿಕೊಡುವ ವೇದಿಕೆಯನ್ನ ಹೊಂದುವ ಸುಯೋಗ ನಮಗೆ ಬಂದಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ನಾನು ‘ಪಿಎಂ ಕೇರ್ಸ್ ಫಂಡ್’ಗೆ ಕೊಡುಗೆಯನ್ನು ನೀಡಿದ್ದೇನೆ. ವಿಶೇಷವಾಗಿ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆಯನ್ನ ಖರೀದಿಸಲು ಸಹಾಯವಾಗುತ್ತೆ’ ಎಂದಿದ್ದಾರೆ.

ಪ್ರಸ್ತುತ ಕೆಕೆಆರ್ ಪರ ಆಡುತ್ತಿರುವ ಅವರು, ‘ಆಮ್ಲಜನಕದ ಕೊರತೆಯಿಂದಾಗಿ ಬಳಲುತ್ತಿರುವ ರೋಗಿಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನ ಮಾಡಬಹುದು ಎಂದು ಬರೆದುಕೊಂಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ” ಎಂದು ಪತ್ರಿಕಾ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.

‘ನಾನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿರುವ ದೇಶ ಭಾರತವಾಗಿದ್ದು, ಇಲ್ಲಿನ ಜನರು ನಾನು ಭೇಟಿಯಾದ ಅತ್ಯಂತ ದಯಾಪರರಾಗಿದ್ದಾರೆ. ಆದರೆ, ಈ ಸಧ್ಯ ಅನೇಕರು ಕೊರೊನಾದಿಂದ ಬಳಲುತ್ತಿದ್ದು, ನನಗೆ ತುಂಬಾ ದುಃಖವನ್ನುಂಟು ಮಾಡುತ್ತಿದೆ’ ಎಂದು ಕಮ್ಮಿನ್ಸ್ ತಮ್ಮ ಪೋಸ್ಟ್ ನಲ್ಲಿ ತಿಳಿಸಿದ್ದಾರೆ./////