ಸತೀಶ್ ಜಾರಕಿಹೊಳಿ ಗನ್ ಮ್ಯಾನ್ ಕೊರೋನಾಕ್ಕೆ ಬಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವು

0

ಬೆಂಗಳೂರು – ಮಾಜಿ ಸಚಿವ, ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಗನ್ ಮ್ಯಾನ್ ಕೊರೋನಾದಿಂದಾಗಿ ಸಾವಿಗೀಡಾಗಿದ್ದಾರೆ.

ರಮೇಶ ಎನ್ನುವ 45 ವರ್ಷದ ವ್ಯಕ್ತಿ ಕೊರೋನಾದಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ರಮೇಶ್ ಬೆಂಗಳೂರಿನವರೇ ಆಗಿದ್ದು, ಸತೀಶ್ ಜಾರಕಿಹೊಳಿ ಈ ಹಿಂದೆ ಜವಳಿ ಸಚಿವರಾಗಿದ್ದಾಗಿನಿಂದಲೂ ಅವರ ಜೊತೆಗಿದ್ದರು.

3 ದಿನದ ಹಿಂದೆ ರಮೇಶ ಅವರಿಗೆ ಕೊರೋನಾ ಸೊಂಕು ದೃಢಪಟ್ಟಿತ್ತು.

ನಂತರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮಧ್ಯಾಹ್ನ 2 ಗಂಟೆಗೆ ಅವರು ಕೊನೆಯುಸಿರೆಳೆದರು.