ಕೊರೋನಾ ರೌದ್ರನರ್ತನ: ದೇಶದಲ್ಲಿಂದು 3.79 ಲಕ್ಷ ಕೊರೋನಾ ಕೇಸ್ ಪತ್ತೆ

0

ಐದು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ

 

ನವದೆಹಲಿ:ದೇಶಾದ್ಯಂತ ಕೊರೋನಾ ರೌದ್ರನರ್ತನ ತಾಳಿದ್ದು, 24 ತಾಸಿನಲ್ಲಿ 3.79 ಲಕ್ಷ ಕೇಸ್ ಪತ್ತೆಯಾದರೆ, ಸಾವಿನ ಸಂಖ್ಯೆ 3645 ಗಡಿ ದಾಟ್ಟಿದೆ.

ಹೆಮ್ಮಾರಿ ನಾಗಾಲೋಟಕ್ಕೆ  ಸೋಂಕು ಮತ್ತು ಸಾವು ಎರಡರಲ್ಲೂ ಸಾರ್ವಜಕಾಲಿಕ ದಾಖಲೆ ಸೃಷ್ಟಿಸಿದೆ. ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ದಾಖಲೆಯ 3,79,257 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಆತಂಕಕ್ಕಾರಿ ಬೆಳವಣಿಗೆಯಾಗಿದೆ.

ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಸೋಂಕಿತರ ತ್ರಿಶತಕ ಭಾರಿಸುತ್ತಿದೆ. ಆದರೂ ಜನತೆ ಎಚ್ಚತ್ತಕೊಳ್ಳದಿರುವುದು ಆತಂಕ ಸೃಷ್ಟಿಸುತ್ತಿದೆ.

ಮಾರುಕಟ್ಟೆಯಲ್ಲಿ ಜನಸಂದಣಿ: ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,83,76,524ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 2 ಲಕ್ಷ ಗಡಿ ದಾಟಿ 2,04,832ಕ್ಕೆ ತಲುಪಿದೆ.

ಊಹಿಸಲಾಗದಷ್ಟು ಕೋವಿಡ್ ವ್ಯಾಪಕವಾಗಿ ವಿಸ್ತಾರಗೊಳ್ಳುತ್ತಿದೆ. ಆದರೂ ಜನತೆ ಬೇಕಾಬಿಟ್ಟಿಯಾಗಿ ಜನಸಂಚಾರ ನಡೆಸುತ್ತಿದ್ದಾರೆ. ಗುರುವಾರ ಮಾರ್ಕೇಟ್ ಯಲ್ಲಿ  ಸಾಮಗ್ರಿಗಳನ್ನು ಖರೀದಿಸಲು ಗುಂಪು-ಗುಂಪುಗಾಗಿ ಸೇರಿಕೊಂಡಿದ್ದರು.

ಖರೀದಿ ಭರಾಟೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾರೆ ಎನ್ನದೇ, ಸಾಮಾಜಿಕ ಅಂತರ ಮರೆತ್ತಿದ್ದರು. ಅಂಗಡಿ ಮುಗ್ಗಟ್ಟು ಹಾಗೂ ಮಾಲ್ ಮಾರ್ಟ್ ನಲ್ಲಿ ಜನತೆ  ನೂಕು ನೂಗ್ಗತ್ತಿರುವ ದೃಶ್ಯಗಳು ಕಂಡು ಬಂತು.