ಕೆಲಸಗಾರರನ್ನು ಕೆಲಸದಿಂದ ವಜಾಗೊಳಿಸದಿರಲು, ವೇತನ ಕಡಿತಗೊಳಿಸದಿರಲು ಮನವಿ

0

ಬೆಳಗಾವಿ: ಯಾವುದೇ ಉದ್ಯೋಗದಾತರು ತನ್ನ ಉದ್ಯೋಗಸ್ಥರನ್ನು ಕಫ್ರ್ಯೂ ಅವಧಿಯಲ್ಲಿ ಕೆಲಸದಿಂದ ವಜಾಗೊಳಿಸದಿರಲು ಹಾಗೂ ಕೆಲಸಗಾರರ ವೇತನವನ್ನು ಕಡಿತಗೊಳಿಸಬಾರದು ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಪಿ.ರವಿಕುಮಾರ್ ಮನವಿ ಮಾಡಿದ್ದಾರೆ.

ಕೋವಿಡ್-19 ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆ ರಾಜ್ಯದಲ್ಲಿ ಸರ್ಕಾರ ಜನತಾ ಕಫ್ರ್ಯೂ ಘೋಷಿಸಿದೆ.ಈ ಕರ್ಪ್ಯೂ ಅವಧಿಯಲ್ಲಿ ಉದ್ಯೋಗದಾತರು ತನ್ನ ಉದ್ಯೋಗಸ್ಥರನ್ನು ಕೆಲಸದಿಂದ ತೆಗೆದು ಹಾಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಕೋವಿಡ್ 19 ರ ಪ್ರಕರಣಗಳ ಸಂಖ್ಯೆ ಹಾಗೂ ಕೋವಿಡ್ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿರುವುದನ್ನು ಗಮನಿಸಿದ ಸರಕಾರವು ಪ್ರಸರಣದ ಸರಪಳಿಯನ್ನು ತುಂಡರಿಸಲು ಅತ್ಯಂತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆ ಕಂಡುಬಂದಿದೆ ಹಾಗೂ ಎಪ್ರಿಲ್ 26ರಿಂದ ಮೇ 10ರ ವರೆಗೆ ಜನತಾ ಕಫ್ರ್ಯೂ ಘೋಷಿಸಿದೆ.

ಅಲ್ಲದೆ ಇಂತಹ ದುಸ್ಥಿತಿಯಲ್ಲಿ ಹಲವು ಭೂಮಾಲೀಕರು, ಮನೆ ವಸತಿ, ಅಂಗಡಿ ಮಾಲೀಕರು, ಬಾಡಿಗೆ ಆಧಾರದ ಮೇಲೆ ಇರುವ ಸ್ಥಳಗಳು ಗೃಹಗಳನ್ನು ಬಾಡಿಗೆದಾರರು ತೆರವುಗೊಳಿಸುವ ಕ್ರಮಕ್ಕೆ ಮುಂದಾಗಿರುವದು ಗಮಕ್ಕೆ ಬಂದಿರುತ್ತದೆ. ಮನೆ ಮಾಲೀಕರು ಮನೆಗಳನ್ನು, ಪಿಜಿ, ಅಂಗಡಿಗಳನ್ನು ಬಾಡಿಗೆ ಅಥವಾ ಭೋಗ್ಯದ ಆಧಾರದ ಮೇಲೆ ನೀಡಿರುವ ಮೆಲ್ಕಂಡವರ ಸರದಿ ವಾಸದಿಂದ ಬಲವಂತವಾಗಿ ತೆರವುಗೊಳಿಸದಿರಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಪಿ. ರವಿಕುಮಾರ್ ಮನವಿ ಮಾಡಿದ್ದಾರೆ.////