ಬಿಜೆಪಿ ಕಾರ್ಯದರ್ಶಿ ಯುವಕರಿಬ್ಬರು ಕೊರೋನಾರ್ಭಟಕ್ಕೆ ಬಲಿ

0

ಕೊರೊನಾ: ಕೊರೋನಾರ್ಭಟಕ್ಕೆ ಯುವಕರಿಬ್ಬರು ಅಸುನೀಗಿರುವ ಹೃದಯ ವಿದ್ರಾವಕ ಘಟನೆ ಗುರುವಾರ ನಡೆದಿದೆ.

ಕಾಗವಾಡ ತಾಲ್ಲೂಕಿನ ಉಗಾರ ಬುದ್ರುಕ ಗ್ರಾಮದ ರಾಹುಲ್ ಪದ್ಮಣ್ಣಾ ತಾರದಾಳೆ(22) , ಸಾಹಿಲ್ ಅಜಿಂ ಅವಟಿ (22) ಮೃತ ದುರ್ದೈವಿಗಳು, ಎಂಟು ದಿನಗಳ ಹಿಂದೆ ಇವರಿಬ್ಬರು ಕೊರೋನಾ ವರದಿ ಪಾಟಿಸಿವ್ ಬಂದಿತ್ತು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಉಸಿರಾಟ ತೊಂದರೆಯಿಂದ ಗುರುವಾರ  ಕೊರೋನಾಗೆ ಬಲಿಯಾಗಿದ್ದಾರೆ.

ಯುವಕರಿಬ್ಬರು ಸಾಮಾಜಿಕ ಸೇವೆ ಜತೆ , ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸುತ್ತಿದ್ದರು ಎನ್ನಲಾಗಿದೆ.

ಈ ಇಬ್ಬರು ಯುವಕರು ತಂದೆ-ತಾಯಿಗೆ ಒಬ್ಬರೆ ಸುಪುತ್ರರಾಗಿದ್ದು. ಅಲ್ಲದೇ, ಉಗಾರ ಗ್ರಾಮದ ಪ್ರತಿಯೊಂದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಈ ಇಬ್ಬರ ನಿಧನದಿಂದ ಉಗಾರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಅಂತ್ಯಕ್ರೀಯೆ ಸಮಯದಲ್ಲಿ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.////