ಬಿಮ್ಸ್ ಆಸ್ಪತ್ರೆಯಲ್ಲಿ ಎಡವಟ್ಟು; ಕೊರೊನಾ ಸೋಂಕಿತರ ಆರೈಕೆಗೆ ಕುಟುಂಬಸ್ಥರಿಗೆ ಅವಕಾಶ

0

ಬೆಳಗಾವಿ: ಇಲ್ಲಿನ ಬಿಮ್ಸ್ ಆಸ್ಪತ್ರೆಯಲ್ಲಿ ಕುಟುಂಬಸ್ಥರೇ ಕೊರೊನಾ ಸೋಂಕಿತರ ಆರೈಕೆ ಮಾಡುತ್ತಿರುವ ಪೋಟೊ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ಚರ್ಚೆಗೆ ಗ್ರಾಸವಾಗಿದೆ.

ಕೊರೋನಾ ಸೋಂಕಿತರಾದಂತವರಿಗೆ ಕೋವಿಡ್ ಕೇರ್ ಸೆಂಟರ್ ಗಳಲ್ಲಿ ಪಿಪಿಇ ಕಿಟ್ ಹಾಕೊಂಡು, ವೈದ್ಯರು, ನರ್ಸ್ ಗಳು ಚಿಕಿತ್ಸೆ ನೀಡುತ್ತಾರೆ. ಆರೈಕೆ ಮಾಡುತ್ತಾರೆ. ಆದರೆ, ಬಿಮ್ಸ್ ನಲ್ಲಿ ಸೋಂಕಿತರ ಸಂಬಂಧಿಕರು, ಅವರ ಬೆಡ್ ನಲ್ಲಿಯೇ ಕುಳಿತು ಆರೈಕೆ ಮಾಡುತ್ತಿದ್ದಾರೆ. ನಂತರ ಅವರು ಹೊರಗಡೆಯೂ ತಿರುಗಾಡುತ್ತಿದ್ದಾರೆ. ಇದರಿಂದ ಕೊರೊನಾ ಮತ್ತಷ್ಟು ಜನರಿಗೆ ಹರಡುವ ಭೀತಿ ಎದುರಾಗಿದೆ.

ಬಿಮ್ಸ್ ನ ದೃಶ್ಯಗಳನ್ನು ಗಮನಿಸಿರುವ ನೆಟ್ಟಿಗರು, “ಆಸ್ಪತ್ರೆಗಳೇ ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರಿದರೇ ಕೊರೋನಾ ನಿಯಂತ್ರಣ ಆಗೋದು ಹೇಗೆ” ಎಂದು ಪ್ರಶ್ನಿಸುತ್ತಿದ್ದಾರೆ.

ಹೀಗಾಗಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.////