ನಿರೂಪಕ ಅರುಣ ಬಡಿಗೇರ ತಂದೆ, ತಾಯಿ ಕೊರೊನಾಗೆ ಬಲಿ

0

ಧಾರವಾಡ: ಕನ್ನಡದ ಖಾಸಗಿ ಸುದ್ದಿ ವಾಹಿನಿ (ಪಬ್ಲಿಕ್ ಟಿವಿ) ನಿರೂಪಕ ಅರುಣ ಬಡಿಗೇರ ಅವರ ತಂದೆ ಮತ್ತು ತಾಯಿ ಇಬ್ಬರೂ ಕೊರೊನಾ ಸೋಂಕಿಗೆ ಪ್ರಾಣ ತೆತ್ತಿದ್ದಾರೆ.

ಮೂರು ದಿನಗಳ ಹಿಂದೆ ಅರುಣ ಅವರ ತಾಯಿ ಕಸ್ತೂರಮ್ಮ ಬಡಿಗೇರ ಕೊರೊನಾಕ್ಕೆ ಬಲಿಯಾಗಿದ್ದರು. ಇದೀಗ ಅವರ ತಂದೆ ಚಂದ್ರಶೇಖರ ಬಡಿಗೇರ (68) ಕೂಡ ಸಾವನ್ನಪ್ಪಿದ್ದಾರೆ.

ನಿವೃತ್ತ ಶಿಕ್ಷಕರಾಗಿದ್ದ ಚಂದ್ರಶೇಖರ ಬಡಿಗೇರ ನಗರದ ರೈಟರ್ ಗಲ್ಲಿಯ ನಿವಾಸಿಯಾಗಿದ್ದರು. ಕೊರೊನಾ ಪೀಡಿತರಾಗಿದ್ದ ಅವರನ್ನು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ಅಸ್ವಸ್ಥರಾಗಿದ್ದ ಅವರ ಆರೋಗ್ಯದಲ್ಲಿ ಚೇತರಿಕೆಯಾಗದೆ ಮೃತಪಟ್ಟಿದ್ದಾರೆ.////