ಮೇ 2 ರಂದು ಮತ ಎಣಿಕೆ; ಕೋವಿಡ್ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ

17 ಕೊಠಡಿಗಳಲ್ಲಿ ಮತ ಎಣಿಕೆ; ಬಿಗಿ ಭದ್ರತೆ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್

0

ಬೆಳಗಾವಿ : ಭಾರತ ಚುನಾವಣಾ ಆಯೋಗದ ನಿರ್ದೇಶನ ಹಾಗೂ ಕೋವಿಡ್-19 ಮಾರ್ಗಸೂಚಿಯ ಪ್ರಕಾರ ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಮತ ಎಣಿಕೆಗೆ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಳಗಾವಿ ನಗರದ ಟಿಳಕವಾಡಿಯ ಆರ್ಪಿ.ಡಿ. ಮಹಾವಿದ್ಯಾಲಯದಲ್ಲಿ ಭಾನುವಾರ(ಮೇ 2) ಬೆಳಿಗ್ಗೆ 8 ಗಂಟೆಯಿಂದ ಇವಿಎಂ ಮತ ಎಣಿಕೆ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಚುನಾವಣಾ ವೀಕ್ಷಕರು ಹಾಗೂ ಮತ ಎಣಿಕೆ ಏಜೆಂಟರುಗಳ ಸಮ್ಮುಖದಲ್ಲಿ ಅಂದು ಬೆಳಿಗ್ಗೆ 7 ರಿಂದ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಮತಕ್ಷೇತ್ರಗಳ ಸ್ಟ್ರಾಂಗ್ ರೂಮ್ ತೆರೆಯಲಾಗುವುದು.ಸರಿಯಾಗಿ ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ.

ಅದೇ ರೀತಿ 8 ಗಂಟೆಗೆ ಹೇರೆಕರ್ ಬಿಲ್ಡಿಂಗ್ ನ ಹಾಲ್ ಸಂಖ್ಯೆ -40 ರಲ್ಲಿ ಪೆಸ್ಟಲ್ ಬ್ಯಾಲೆಟ್ ಹಾಗೂ ಇಪಿಬಿಎಸ್ ಮತ ಎಣಿಕೆ ಕೂಡ ಆರಂಭಗೊಳ್ಳಲಿದೆ.

ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ಧೇಶದಿಂದ ಪ್ರತಿ ಕೊಠಡಿಗೆ ಎರಡು ಟೇಬಲ್ ಗಳನ್ನು ಅಳವಡಿಸಲು ಚುನಾವಣಾ ಆಯೋಗದ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಎರಡು ಕೊಠಡಿಗಳಂತೆ 16 ಮತ್ತು ಪೆಸ್ಟಲ್ ಬ್ಯಾಲೆಟ್-ಇಟಿಪಿಬಿಎಸ್ ಮತ ಎಣಿಕೆಯ ಒಂದು ಕೊಠಡಿ ಸೇರಿದಂತೆ ಒಟ್ಟು 17 ಕೊಠಡಿಗಳಲ್ಲಿ ಮತ ಎಣಿಕೆ ನಡೆಯಲಿದೆ.

ಒಟ್ಟು17 ಕೊಠಡಿಗಳಲ್ಲಿ ತಲಾ ಎರಡು ಟೇಬಲ್ ಗಳನ್ನು ಅಳವಡಿಸಿ ಸಾಮಾಜಿಕ ಅಂತರವನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿರುತ್ತದೆ. ಇದಲ್ಲದೇ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರುವ ಮತ ಎಣಿಜೆ ಏಜೆಂಟರಿಗೆ ಪಿಪಿಇ ಕಿಟ್ ಒದಗಿಸಲು ತಾಲ್ಲೂಕು ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ.

 
ಬಿಗಿಭದ್ರತೆಯಲ್ಲಿ ಪೆಸ್ಟಲ್ ಬ್ಯಾಲೆಟ್ ಸಾಗಾಣಿಕೆ:

ಈಗಾಗಲೇ ವಿಧಾನಸಭಾ ಕ್ಷೇತ್ರವಾರು ಖಜಾನೆಯಲ್ಲಿ ಇರಿಸಲಾಗಿರುವ ಪೆಸ್ಟಲ್ ಬ್ಯಾಲೆಟ್ ಮತ ಪೆಟ್ಟಿಗೆಗಳನ್ನು ಭಾನುವಾರ(ಮೇ 2) ಬೆಳಿಗ್ಗೆ6 ಗಂಟೆಗೆ ಶಸ್ತ್ರಸಜ್ಜಿತ ಪೆಸ್ ಪಹರೆಯೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ತರಲಾಗುವುದು.

ಬೆಳಗಾವಿ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ತಹಶೀಲ್ದಾರರು ಮುಚ್ಚಿದ ಕಂಟೇನರ್ ಮೂಲಕ ಪೆಸ್ಟಲ್ ಬ್ಯಾಲೆಟ್ ಸಾಗಾಣಿಕೆಗೆ ಕ್ರಮ ಕೈಗೊಳ್ಳಲಿದ್ದಾರೆ.
ಇವಿಎಂ ಮತ ಎಣಿಕೆ ಮುಗಿದ ತಕ್ಷಣವೇ ಅದೇ ಕೊಠಡಿಯಲ್ಲಿ ವಿವಿಪ್ಯಾಟ್ ಎಣಿಕೆ ನಡೆಯಲಿದೆ.

ದೇ ರೀತಿ 5831 ಪೆಸ್ಟಲ್ ಬ್ಯಾಲೆಟ್ ಕೌಂಟಿಂಗ್ ಮುಗಿದ ಬಳಿಕ 964 ಇಟಿಬಿಪಿಎಸ್ ಮತ ಎಣಿಕೆ ನಡೆಯಲಿದೆ.
ಪೆಸ್ಟಲ್ ಬ್ಯಾಲೆಟ್ ಎಣಿಕೆಗೆ ಸಂಬಂಧಿಸಿದಂತೆ ಬೆಳಗಾವಿ ಉಪ ವಿಭಾಗಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.

 
ಕೋವಿಡ್ ನೆಗೆಟಿವ್ ವರದಿ ಕಡ್ಡಾಯ:

ಅಭ್ಯರ್ಥಿಗಳು, ಮತ ಎಣಿಕೆ ಸಿಬ್ಬಂದಿ, ಮತ ಎಣಿಕೆ ಏಜೆಂಟರು ಹಾಗೂ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಮತ ಎಣಿಕೆ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಮತ ಎಣಿಕೆ ಸಿಬ್ಬಂದಿ ಹಾಗೂ ಏಜೆಂಟರು ಬೆಳಿಗ್ಗೆ 6.30 ಗಂಟೆಯೊಳಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿರಬೇಕು.
ಕೋವಿಡ್ ವರದಿ ನೆಗೆಟಿವ್ ಇದ್ದು, ಅಂದು ಸೋಂಕಿನ ಲಕ್ಷಣ ಹೊಂದಿರುವವರ ರ್ಯಾಪಿಡ್ ಆಂಟಿಜೆನ್ ಟೆಸ್ಟ್ (ಆರ್.ಎ.ಟಿ) ನಡೆಸಲು ಹತ್ತು ಕೌಂಟರ್ ಗಳನ್ನು ಸ್ಥಾಪಿಸಲಾಗಿದೆ.

ಸೋಂಕಿನ ಲಕ್ಷಣ ಹೊಂದಿದವರ ಆರ್.ಎ.ಟಿ. ನೆಗೆಟಿವ್ ವರದಿ ಇದ್ದರೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು
ಮತ ಎಣಿಕೆ ಕೇಂದ್ರದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಅವರನ್ನು
ಕೋವಿಡ್-19 ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿರುತ್ತದೆ.

ಅದೇ ರೀತಿ ಆರ್.ಎ.ಟಿ. ತಂಡದ ನೋಡಲ್ ಅಧಿಕಾರಿಯಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಇದಲ್ಲದೇ ಮತ ಎಣಿಕೆ ಕೇಂದ್ರದ ಒಳಭಾಗದಲ್ಲಿ ಸ್ಥಾಪಿಸಿರುವ ಚಿಕಿತ್ಸಾ ಘಟಕದ ಮೇಲುಸ್ತುವಾರಿ ಯಾಗಿ ಹಿರಿಯ ಫಿಜಿಷಿಯನ್ ಡಾ.ಮಕಾನದಾರ ಅವರನ್ನು ನಿಯೋಜಿಸಲಾಗಿರುತ್ತದೆ.

ಮತ ಎಣಿಕೆ ಸಿಬ್ಬಂದಿಗೆ ಕೋವಿಡ್ ಮಾರ್ಗಸೂಚಿ ಪ್ರಕಾರ ಸ್ಯಾನಿಟೈಸರ್, ಕೈಗವಸ, ಮುಖಗವಸಗಳನ್ನು ನೀಡಲಾಗುವುದು.
ಒಟ್ಟಾರೆಯಾಗಿ ಕೋವಿಡ್ ಮಾರ್ಗಸೂಚಿ ಪಾಲನೆ ಸೇರಿದಂತೆ ವೈದ್ಯಕೀಯ ಸೌಲಭ್ಯಗಳನ್ನು ಮತ ಎಣಿಕೆ ಕೇಂದ್ರದಲ್ಲಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.

 

ಪ್ರತಿ ಸುತ್ತಿನ ಫಲಿತಾಂಶದ ನೇರ ಪ್ರಸಾರ:

ಮತ ಎಣಿಕೆ ಕೇಂದ್ರದ ಪ್ರವೇಶ ದ್ವಾರ ಹಾಗೂ ವೀಕ್ಷಕರ ಕೊಠಡಿಗಳಲ್ಲಿ ಅಳವಡಿಸಲಾಗಿರುವ ಟಿ.ವಿ ಪರದೆಗಳ ಮೂಲಕ ಪ್ರತಿ ಸುತ್ತಿನ ಮತ ಎಣಿಕೆಯ ವಿವರಗಳನ್ನು ಎನ್.ಐ.ಸಿ.ಸಹಯೋಗದೊಂದಿಗೆ ಪ್ರಕಟಿಸಲಾಗುವುದು.

ಮತ ಎಣಿಕೆ ಸಿಬ್ಬಂದಿಗೆ ಉಚಿತ ಉಪಹಾರ ಕೌಂಟರ್ ಹಾಗೂ ಏಜೆಂಟರಿಗೆ ಪಾವತಿ ಆಧಾರದ ಮೇಲೆ ಉಪಾಹಾರ ಒದಗಿಸಲು ಕೌಂಟರ್ ಸ್ಥಾಪಿಸಲಾಗಿದೆ.

ಏಜೆಂಟರು ಹಾಗೂ ಎಣಿಕೆ ಸಿಬ್ಬಂದಿಯನ್ನು ಎರಡು ಪಾಳಿಗಳಲ್ಲಿ ಕರ್ತವ್ಯಕ್ಕೆ ನಿಹೋಜಿಸಲಾಗಿದ್ದು, ಬೆಳಿಗ್ಗೆ 6 ರಿಂದ 12.30 ರವರೆಗೆ ಮೊದಲ ತಂಡ ಕಾರ್ಯನಿರ್ವಹಿಸಲಿದೆ.

 
ಮೂರು ಹಂತದ ಭದ್ರತಾ ವ್ಯವಸ್ಥೆ:

ಮತ ಎಣಿಕೆ ಕೇಂದ್ರದಲ್ಲಿ ಪೆಲೀಸ್ ಇಲಾಖೆಯು ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಿದ್ದು, 450 ಸಿಬ್ಬಂದಿಯನ್ನು ನಿಯೋಜಿಸಿರುತ್ತದೆ. ಅಂದು ಜನತಾ ಕಫ್ರ್ಯೂ ಇರುವುದರಿಂದ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಪೆಲೀಸ್ ಇಲಾಖೆಯು ನಿಗದಿಪಡಿಸಿದ ಮಾರ್ಗದಲ್ಲಿ ಮಾತ್ರ ತೆರಳಲು ಅವಕಾಶ ಕಲ್ಪಿಸಲಾಗಿರುತ್ತದೆ.

ಮತ ಎಣಿಕೆ ಕಾರ್ಯಕ್ಕೆ ನಿಯೋಜಿತ ಏಜೆಂಟರು, ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳು ತಮಗೆ ನೀಡಿರುವ ಪ್ರವೇಶಪತ್ರ ಅಥವಾ ಗುರುತಿನ ಚೀಟಿ ತೋರಿಸಿ ಮತ ಎಣಿಕೆ ಕೇಂದ್ರ ಬರಬಹುದು.

ವಿಜಯೋತ್ಸವ-ಸಂಭ್ರಮಾಚರಣೆ ನಿಷೇಧ:

ಕೋವಿಡ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ದಿನ ಯಾವುದೇ ರೀತಿಯ ವಿಜಯೋತ್ಸವ ಅಥವಾ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಗೆಲುವು ಸಾಧಿಸುವ ಅಭ್ಯರ್ಥಿಯು ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ಅಭ್ಯರ್ಥಿ ಜತೆ ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗುವುದು.
ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಕೋವಿಡ್ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಆದ್ದರಿಂದ ಎಲ್ಲ ಪಕ್ಷಗಳ ಅಭ್ಯರ್ಥಿಗಳು, ಮತ ಎಣಿಕೆ ಏಜೆಂಟರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಮನವಿ ಮಾಡಿಕೊಂಡಿದ್ದಾರೆ./////