ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ 24×7 ಸಹಾಯವಾಣಿ ಆರಂಭ

0

ಬೆಳಗಾವಿ : ಲಾಕ್ ಡೌನ್ & ಕೋವಿಡ್ – 19 ರೋಗ ಹರಡುತ್ತಿರುವ ಸಂದರ್ಭದಲ್ಲಿ ಯಾವ ವ್ಯಕ್ತಿಯೂ ಸಹಾ ಕಾನೂನಿನ ನೆರವಿನಿಂದ ವಂಚಿತನಾಗಬಾರದು ಎನ್ನುವ ಕಾರಣಕ್ಕೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಅವರು ಸಹಾಯವಾಣಿ ಒಂದನ್ನು ತೆರೆದಿದ್ದು, ಅದು ದಿನದ 24 x 7 ಕಾರ್ಯನಿರ್ವಹಿಸುತ್ತಿದ್ದು, ಹಾಗೂ ಇಂತಹ ಸಂದರ್ಭದಲ್ಲಿ ಯಾವುದೇ ವ್ಯಕ್ತಿಯನ್ನು ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದಾಗ, ಆತನಿಗೆ ಕಾನೂನಿನ ಸಲಹೆ ಮತ್ತು ಕಾನೂನಿನ ನೆರವು ಬೇಕೆಂದಾಗ ಹಾಗೂ ಅಂತಹ ವ್ಯಕ್ತಿಗೆ ವಕೀಲರನ್ನು ಸಂಪರ್ಕಿಸಲು

 ಸಾಧ್ಯವಾಗದಂತಹ ಸಂದರ್ಭದಲ್ಲಿ ಹಾಗೂ ಸಿವಿಲ್ ಹಾಗೂ ಇತರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ವ್ಯಕ್ತಿ / ಜನ ಸಾಮಾನ್ಯರಿಗೆ ಕಾನೂನಿನ ನೆರವು ಬೇಕಾದಾಗ, ಅಂತಹವರು ವಕೀಲರನ್ನು ಭೇಟಿ ಮಾಡಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಆತನಿಗೆ ಕಾನೂನು ಸಲಹೆ & ಕಾನೂನು ನೆರವನ್ನು ನೀಡಲು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಾ ಸಿದ್ಧವಾಗಿರುತ್ತದೆ. ಇಂತಹ ಸಂದರ್ಭದಲ್ಲಿ,

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ, ಬೆಂಗಳೂರು ಇವರ ಆದೇಶದ ಮೇರೆಗೆ ಜನ ಸಾಮಾನ್ಯರಿಗೆ ಹಾಗೂ ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ ನಾಗರೀಕರಿಗೆ ಕರೋನಾ ಪೆಂಡಾಮಿಕ್ ಸಂದರ್ಭದಲ್ಲಿ ಕಾನೂನಿನ ಹಕ್ಕನ್ನು ಚಲಾಯಿಸುವ ದಿಕ್ಕಿನಲ್ಲಿ ನಮ್ಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳಿಗೆ ಭೇಟಿ ನೀಡಿ ತಮ್ಮ ಅವಹಾಲುಗಳನ್ನು ಹೇಳಿಕೊಳ್ಳಲು ಸಾದ್ಯವಾಗದೇ ಇರುವ ಕಾರಣಕ್ಕೆ ವಿಷಾಧವ್ಯಕ್ತ ಪಡಿಸುತ್ತಾ, ಈ ಪೆಂಡಾಮಿಕ್ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಜನಸಾಮಾನ್ಯರಿಗೆ ಕಾನೂನು

ಸಹಾಯ ಮಾಡುವ ಉದ್ದೇಶದಿಂದ ಗೌರವಾನ್ವಿತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಅವರು ಸಹಾಯವಾಣಿ ಒಂದನ್ನು ತೆರೆದಿದ್ದು, ಅದು ದಿನದ 24 x 7 ಕಾರ್ಯನಿರ್ವಹಿಸುತ್ತಿದ್ದು, ಸದರಿ ಸಹಾಯವಾಣಿಯನ್ನು 3 ಜನ ನುರಿತ ವಕೀಲರು ಸಂಭಾಳಿಸುತ್ತಿದ್ದು, ಅದರ ಸದುಪಯೋಗವನ್ನು ಪಡೆಯಬೇಕೆಂದು ಜನ ಸಾಮಾನ್ಯರಲ್ಲಿ ವಿನಂತಿ.

ಪೆಂಡಾಮಿಕ್ ಸಂದರ್ಭದಲ್ಲಿ ನಾಗರೀಕರಿಗೆ ಅನೇಕ ರೀತಿಯ ಕಾನೂನಿನ ಅಡೆತಡೆಗಳು ಉಂಟಾಗುವ ಸಂದರ್ಭಗಳಿದ್ದು ಸದರಿ ಸಂದರ್ಭದಲ್ಲಿ ಅವರು ಕಾನೂನಿನ ಹಕ್ಕನ್ನು ಚಲಾಯಿಸಲು ತೊಂದರೆಯಾಗದಂತೆ ನಮ್ಮ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೂಡಾ ಸಹಾಯವಾಣಿಯನ್ನು ತೆರೆದಿದ್ದು, ಅದು ಬೆಳಿಗ್ಗೆ 10-00 ರಿಂದ ಸಂಜೆ 6-00 ಘಂಟೆಯವರೆಗೆ ಕಾರ್ಯನಿರ್ವಹಿಸಲಿದ್ದು ಹಾಗೂ ಸಂಜೆ 6-00 ರಿಂದ ಮಾರನೆಯ ದಿನ ಬೆಳಿಗ್ಗೆ 10-.00 ಘಂಟೆಯವರೆಗೆ ಕೂಡಾ ಸಹಾಯವಾಣಿ ತೆರೆದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕು.

ಕಾನೂನು ಸಲಹಾ ಸಹಾಯವಾಣಿಗಳು ಈ ಕೆಳಕಂಡಂತೆ ಇರುತ್ತದೆ:

ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ – 15100

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸಹಾಯವಾಣಿ – 18004230300, ಮೂಲಕ 24 x 7 ಸಂಪರ್ಕಿಸಬಹುದು

ಮೊದಲನೇಯ ಪಾಳೆ ಸಮಯ ಬೆಳಿಗ್ಗೆ 10-00 ರಿಂದ ಸಂಜೆ 6-00 ರವರೆಗೆ ಅದರ ದೂರವಾಣಿ ಸಂಖ್ಯೆ 7411697045.

ಎರಡನೇಯ ಪಾಳೆ ಸಮಯ ಸಂಜೆ 6-00 ರಿಂದ ಮಾರನೆಯ ದಿನ ಬೆಳಿಗ್ಗೆ 10-00 ರವರೆಗೆ ಅದರ ದೂರವಾಣಿ ಸಂಖ್ಯೆ 7411696120.

ಜನ ಸಾಮಾನ್ಯರು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಬೆಳಗಾವಿ / ತಾಲೂಕಾ ಕಾನೂನು ಸೇವಾ ಸಮಿತಿಗಳನ್ನು ಕೂಡಲೇ ಸಂಪರ್ಕಿಸಲು ಈ ಮೂಲಕ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬೆಳಗಾವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////