ಕೋವಿಡ್ ನಿಂದ ಜಿಲ್ಲೆಯಲ್ಲಿ ಸಾವು: ಡಿಎಚ್‍ಓ ಡಾ.ಮುನ್ಯಾಳ ಸ್ಪಷ್ಟನೆ

0

ಕೋವಿಡ್ ನಿಂದ ಜಿಲ್ಲೆಯಲ್ಲಿ ಸಾವು: ಡಿಎಚ್‍ಓ ಡಾ.ಮುನ್ಯಾಳ ಸ್ಪಷ್ಟನೆ

ಬೆಳಗಾವಿ, ಏ.30  ರಂದು : ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಹನ್ನೊಂದು ಜನರು ಮರಣ ಹೊಂದಿರುವುದಾಗಿ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಸ್ಪಷ್ಟನೆ ನೀಡಿದ್ದಾರೆ.
ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಗಿರುವ ಹನ್ನೊಂದು ಜನರಲ್ಲಿ ಮೂವರು ಮಾತ್ರ ಕೋವಿಡ್ ಸೋಂಕಿನಿಂದ ಮೃತಪಟ್ಟಿರುತ್ತಾರೆ.
ಸೋಂಕು ಸೇರಿದಂತೆ ವಿವಿಧ ಕಾರಣಗಳಿಂದ ಹನ್ನೊಂದು ಜನರು ಮೃತರಾಗಿದ್ದು, ಅದರಲ್ಲಿ ಆರೇಳು ಜನರು ಬೇರೆ ಜಿಲ್ಲೆಯವಾಗಿದ್ದಾರೆ.
ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆ ನಡೆಸಿರುತ್ತಾರೆ ಎಂದು ಡಾ.ಮುನ್ಯಾಳ ಸ್ಪಷ್ಟಪಡಿಸಿದ್ದಾರೆ.